Advertisement

ವಿದ್ಯಾರ್ಥಿಗಳು ನಿಶ್ಚಿತ ಗುರಿ ಹೊಂದಿದರೆ ಯಶಸ್ಸು ಖಚಿತ

02:43 PM Aug 30, 2018 | |

ಹುಣಸಗಿ: ವಿದ್ಯಾರ್ಥಿಗಳು ಉನ್ನತ ಕನಸು, ನಿಶ್ಚಿತ ಗುರಿ ಇಟ್ಟುಕೊಂಡು ಅಭ್ಯಸಿಸಿದ್ದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ ಎಂದು ಹುಣಸಗಿ ಪಿಎಸ್‌ಐ ಸುನೀಲಕುಮಾರ ಮೂಲಿಮನಿ ಹೇಳಿದರು.

Advertisement

ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ವಾಟ್ಸಪ್‌, ಫೇಸ್‌ಬುಕ್‌, ಇಂಟರನೆಟ್‌, ಟ್ವಿಟ್ಟರ್‌ದಿಂದ ದೂರ ಉಳಿದು ಓದಿನತ್ತ ಗಮನಹರಿಸಬೇಕು ಎಂದು ಹೇಳಿದರು.

ಉಪನ್ಯಾಸಕ ಧರ್ಮರಾಜ ವೈ.ಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಓದಿನತ್ತ ಹೆಚ್ಚು ಗಮನಹರಿಸಬೇಕು. ಈ ದಿಸೆಯಲ್ಲಿ ಸತತ ಪ್ರಯತ್ನದೊಂದಿಗೆ ಅಧ್ಯಯನದಲ್ಲಿ ತೊಡಗಿದಾಗ ಮಾತ್ರ ಅಂದು ಕೊಂಡಿರುವ ಗುರಿ ತಲುಪಲು ಸಾಧ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ ಗುರಿ ತಲುಪಲು ಸಾಧಕರ ಜೀವನ ಚರಿತ್ರೆ ಪುಸ್ತಕಗಳನ್ನು ಓದಿ ತಿಳಿದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ಮಾತನಾಡಿ, ಈ ಭಾಗದ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಪದವಿ ಕಾಲೇಜು ಆರಂಭಿಸಲಾಗಿದೆ. ಆದ್ದರಿಂದ ಮಾನವೀಯ ಮೌಲ್ಯ ಬೆಳಸೆಸಿಕೊಂಡು ಉತ್ತಮ ನಾಗರಿಕರಾಗಿ ಬಾಳಿ ಎಂದರು.

ಈ ಸಂದರ್ಭದಲ್ಲಿ ಸೌತ್‌ ವೇಷ್ಟ್ ಏಷಿಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಭಾಗವಹಿಸಿ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕ ಗೆದ್ದ ಕ್ರೀಡಾಪಟು ಮಹಾಂತೇಶ ಮಡಿವಾಳರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ ನಾನಾಗೌಡ ಪಾಟೀಲ, ಸರಕಾರಿ ಪಿಯು ಕಾಲೇಜ ಪಾಚಾರ್ಯ ವಿ.ಎಸ್‌. ಬಿರಾದಾರ, ಪ್ರಾಚಾರ್ಯ ಎಸ್‌.ಎಂ. ಕಿರಣಗಿ, ಉಪನ್ಯಾಸಕರಾದ ಬಸವರಾಜ ಮುರೋಳ, ಮಾನಪ್ಪ ಅಗ್ನಿ, ಸಂದೇಶ ಜೊಷಿ, ಎಸ್‌.ಎಸ್‌.ಭಂಟನೂರ, ಎ.ಎಸ್‌. ಹಿರೇಮಠ ಇದ್ದರು. ಬೀಮಶೇನರಾವ್‌ ಕುಲಕರ್ಣಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಹೊಸಮನಿ ನಿರೂಪಿಸಿದರು. ತಾರಾನಾಥ ಚವ್ಹಾಣ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next