ಹರೇಕಳ: ಶಿಬಿರದಲ್ಲಿ ಕಲಿಯುವ ಎಲ್ಲ ಮೌಲ್ಯಗಳನ್ನು, ಶೈಕ್ಷಣಿಕ ಕಾರ್ಯವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ಮಂಗಳೂರು ದಕ್ಷಿಣದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಥೆ, ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲಾ ಹಳೇ ವಿದ್ಯಾರ್ಥಿ ಸಂಘ ಮತ್ತು ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ಇವುಗಳ ಸಂಯುಕ್ತಾಶ್ರಯದಲ್ಲಿ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಒಂದು ವಾರಗಳ ಕಾಲ ನಡೆದ ಬೇಸಗೆ ಶಿಬಿರ ಚಿಣ್ಣರ ಚಿಲುಮೆ 2019ರ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳು ಚಿಕ್ಕಂದಿನಿಂದಲೇ ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಬೇಕು. ಶೈಕ್ಷಣಿಕ ಕಲಿಕೆಯಲ್ಲಿ ಸಾಮಾನ್ಯ ಜ್ಞಾನ ಎಂದರೆ ಸಂಸ್ಕೃತಿ, ದೇಶದ ಸಂಪ್ರದಾಯ, ಬದುಕಿಗೆ ಬೇಕಾದ ಮೌಲ್ಯಗಳ ಕುರಿತು ತಿಳಿದುಕೊ ಳ್ಳುವುದಾಗಿ ದೆ ಎಂದರು.
ಜೆಸಿಐ ವಲಯ 15ರ ವಲಯಾಧಿಕಾರಿ ಬಾದ್ ಷಾ ಸಂಬಾರು ತೋಟ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋ ಪಾಧ್ಯಾಯ ಆನಂದ ಕೆ. ಅಸೈಗೋಳಿ, ಭಾರತ್ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಸಂಸ್ಥೆಯ ಜಿಲ್ಲಾ ಸಂಘಟಕ ಭರತ್‌ರಾಜ್, ಶ್ರೀ ರಾಮಕೃಷ್ಣ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಕೆ. ರವೀಂದ್ರ ರೈ, ಶಂಕರಿ, ಜುಬೈದಾ, ಪುಪ್ಪಾ ಶೆಟ್ಟಿ, ನಳಿನಿ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಉತ್ತಮ ಶಿಬಿರಾರ್ಥಿಗಳಾಗಿ ಆಯ್ಕೆಯಾದ ಕುಮಾರ, ಶ್ರೀರಕ್ಷಾ, ಪ್ರಣವ್ ಮಂಗಳೂರು ಇವ ರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪವಿತ್ರಾ ಗಣೇಶ್ ಸ್ವಾಗತಿಸಿದರು. ಅಬ್ದುಲ್ ಮಜೀದ್ ಮಲಾರ್ ಬಹುಮಾನಿತರ ಪಟ್ಟಿ ಯನ್ನು ವಾಚಿಸಿದರು. ತ್ಯಾಗಂ ಹರೇಕಳ ನಿರೂಪಿಸಿದರು. ಮಲಾರ್ ಶಾಲೆಯ ಗೈಡ್ ಶಿಕ್ಷಕಿ ಲಿಡಿಯಾ ವಂದಿಸಿದರು. ಶಿವಾನಿ ಶಿಬಿರದ ವರದಿ ಮಂಡಿಸಿದರು.