Advertisement

ಶಿಕ್ಷಕರ ಶ್ರದ್ಧೆಯಿಂದ ವಿದ್ಯಾರ್ಥಿಗಳಿಗೆ ಯಶಸ್ಸು

06:25 PM Nov 26, 2021 | Team Udayavani |

ಹಾವೇರಿ: ಶಿಕ್ಷಕರು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ಲಭಿಸುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚು ಆದ್ಯತೆ ನೀಡಬೇಕೆಂದು ಡಿಡಿಪಿಐ ಅಂದಾನೆಪ್ಪ ವಡಗೇರಿ ಹೇಳಿದರು.

Advertisement

ತಾಲೂಕಿನ ಚಿಕ್ಕಲಿಂಗದಹಳ್ಳಿ ಬಸವೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಕೇತ್ರಶಿಕ್ಷಣಾ ಧಿಕಾರಿಗಳ ಕಾರ್ಯಾಲಯ ಹಾಗೂ ತಾಲೂಕು ಕನ್ನಡ ಭಾಷಾ ಶಿಕ್ಷಕರ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಿರಿನುಡಿ ರಸ ಪ್ರಶ್ನೆ ಸ್ಪರ್ಧೆ ಮತ್ತು ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನವೆಂಬರ್‌ ಕನ್ನಡ ಮಾಸಾಚರಣೆ ಅಂಗವಾಗಿ ತಾಲೂಕಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುವ ಈ ಸ್ಪರ್ಧೆ ಪರೀಕ್ಷಾ ದೃಷ್ಟಿಯಿಂದ ಬಹಳ ಉತ್ತಮವಾಗಿದೆ. ಮಕ್ಕಳಲ್ಲಿ ಕನ್ನಡ ಭಾಷಾ ಜ್ಞಾನ ಮೂಡಿಸುತ್ತದೆ ಎಂದರು.

ಡಯಟ್‌ ಪ್ರಾಚಾರ್ಯ ಆರ್‌.ಎಸ್‌.ಮುಳ್ಳೂರು,ಬಿಇಒ ಎಂ.ಎಚ್‌.ಪಾಟೀಲ ಮಾತನಾಡಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ರೋಷನ್‌ ನದಾಫ್‌ ಪ್ರಥಮ, ಪ್ರೀತಿ ಕೋರಿ ದ್ವಿತೀಯ ಹಾಗೂ ಸಂಗೀತಾ ತೋಟಗೇರ ತೃತೀಯ ಸ್ಥಾನ ಪಡೆದರು. ಇದೇ ವೇಳೆ ಶಿಕ್ಷಕರಿಗೆ ಉಪಯುಕ್ತ ಅಕ್ಷರ ಯೂ ಟ್ಯೂಬ್‌ ಚಾನೆಲ್‌ಗೆ ಚಾಲನೆ ನೀಡಲಾಯಿತು. ಈರಪ್ಪ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸಿ.ಎಸ್‌.ಭಗವಂತಗೌಡ್ರ, ಮಂಜುನಾಥ, ಎಂ.ಎಸ್‌. ಕೆಂಚನಗೌಡ್ರ, ತಾಲೂಕು ಅಧ್ಯಕ್ಷ ಬಸವರಾಜ ಕೋರಿ, ಎನ್‌.ಎಚ್‌.ಹೆಬ್ಟಾಳ ಇದ್ದರು. ಉಷಾ ಬಗಾಡೆ ಸ್ವಾಗತಿಸಿ, ರವೀಂದ್ರ ಮಳಗಿ ವಂದಿಸಿ, ಪಂಚಾಕ್ಷರಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next