Advertisement

ಸೋಮಶೇಖರ್‌ಗೆ ಮತ್ತೆ ಯಶ

10:42 PM Dec 09, 2019 | Lakshmi GovindaRaj |

ಬೆಂಗಳೂರು: ಕಾಂಗ್ರೆಸ್‌ನ “ಎಸ್‌ಬಿಎಂ- ಎಟಿಎಂ’ ಎಂದೇ ಹೆಸರಾಗಿದ್ದವರ ಪೈಕಿ ಒಬ್ಬರಾದ ಎಸ್‌.ಟಿ.ಸೋಮಶೇಖರ್‌ ಪ್ರಭಾವಿ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ವಿರುದ್ಧವೇ ತಿರುಗಿಬಿದ್ದು ಪಕ್ಷ ತೊರೆದು ಬಿಜೆಪಿಯಿಂದ ಗೆಲುವು ಸಾಧಿಸುವ ಜತೆಗೆ ಕೈ ಅಭ್ಯರ್ಥಿಯನ್ನು 3ನೇ ಸ್ಥಾನಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಜೆಡಿಎಸ್‌ನ ಟಿ.ಎನ್‌. ಜವರಾಯಿಗೌಡ ತೀವ್ರ ಸ್ಪರ್ಧೆಯೊಡ್ಡಿದರೂ 3ನೇ ಬಾರಿಯೂ ಸೋಲಿ ನಿಂದ ಪಾರಾಗಲು ಸಾಧ್ಯವಾಗಿಲ್ಲ. ಸೋಮ ಶೇಖರ್‌ ಪಕ್ಷ ಬದಲಾಯಿಸಿದರೂ 27,699 ಮತಗಳ ಅಂತರದಿಂದ ಜಯ ಗಳಿಸಿ ಅನರ್ಹ ತೆಯ ಕಳಂಕದಿಂದ ಮುಕ್ತರಾಗಿದ್ದಾರೆ.

ಬಿಬಿಎಂಪಿಯಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಆಡಳಿತ ಹಿಡಿಯುವುದು ಸೇರಿದಂತೆ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಸಾಕಷ್ಟು ಮಹತ್ವದ ಪಾತ್ರ ವಹಿಸಿದ್ದ ಎಸ್‌.ಟಿ.ಸೋಮಶೇಖರ್‌ ಮೈತ್ರಿ ಸರ್ಕಾ ರದಲ್ಲಿ ತಮ್ಮ ಕೆಲಸ ಕಾರ್ಯಗಳು ನಡೆಯುತ್ತಿಲ್ಲ, ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಬೇಸರಕ್ಕೆ ಕಾಂಗ್ರೆಸ್‌ ತೊರೆದರು. ಮುಂಬೈನ ಹೋಟೆಲ್‌ನಲ್ಲಿ ದ್ದಾಗಲೂ ಅನರ್ಹ ಶಾಸಕರೆಲ್ಲಾ ತಮ್ಮ ನಿಲುವಿಗೆ ಬದ್ಧವಾಗಿರುವಂತೆ ನೋಡಿಕೊಳ್ಳುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.

ಪಕ್ಷ ತೊರೆದ ಸೋಮಶೇಖರ್‌ ವಿರುದ್ಧ ಕೈ ನಾಯಕರು ಸಾಕಷ್ಟು ಆರೋಪ, ವಾಗ್ಧಾಳಿ ನಡೆಸಿ ದ್ದರು. ಕುರಿ, ಕೋಳಿ, ಹಸುವಿನಂತೆ ಮಾರಾಟ ವಾಗಿದ್ದು, ಪಾಠ ಕಲಿಸಬೇಕು ಎಂದು ಮತದಾ ರರಲ್ಲಿ ಮನವಿ ಮಾಡಿದ್ದರೂ ಸೋಮ ಶೇಖರ್‌ ಜಯ ದಾಖಲಿಸಿದ್ದಾರೆ.

ಯೋಜಿತ ಕಾರ್ಯತಂತ್ರ: ಸೋಮಶೇಖರ್‌ ಕಾಂಗ್ರೆಸ್‌ ತೊರೆಯುವ ಜತೆಗೆ ತಮ್ಮ ಬೆಂ ಬಲಿಗ ಕಾಂಗ್ರೆಸ್‌ ಜನಪ್ರತಿನಿಧಿಗಳು, ನಾಯಕರು, ಮುಖಂಡರು ಬಿಜೆಪಿ ಬೆಂಬಲಿಸುವಂತೆ ಮಾಡುವಲ್ಲಿ ಯಶಸ್ಸು ಕಂಡರು. ಕ್ಷೇತ್ರ ವ್ಯಾಪ್ತಿಯಲ್ಲಿ ಬಿಬಿಎಂಪಿಯ ಐದು ವಾರ್ಡ್‌ ಪೈಕಿ ಸದಸ್ಯರು ಇಬ್ಬರು ಸೋಮಶೇಖರ್‌ರನ್ನು ಬೆಂಬಿಸಿದ್ದಾರೆ. ಹಾಗೆಯೇ ಬೆಂಗಳೂರು ನಗರ ಜಿಲ್ಲೆಯ 10 ಜಿಪಂ ಪೈಕಿ ಕಾಂಗ್ರೆಸ್‌ನ 4 ಸದಸ್ಯರ ಪೈಕಿ ಮೂವರ ಬೆಂಬಲ ಪಡೆಯುವಲ್ಲಿ ಸೋಮಶೇಖರ್‌ ಯಶಸ್ವಿಯಾದರು.

Advertisement

ಜೆಡಿಎಸ್‌ನ ಜವರಾಯಿಗೌಡ ಕಣ್ಣೀರಿಡುತ್ತಲೇ ಒಂದು ಬಾರಿ ಅವಕಾಶ ನೀಡುವಂತೆ ಮನವಿ ಮಾಡಿದರು. ಜೆಡಿಎಸ್‌ ವರಿಷ್ಠರಾದ ಎಚ್‌. ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಸಾಕಷ್ಟು ಬಾರಿ ಪ್ರಚಾರ ನಡೆಸಿದರು. ಹೀಗಾಗಿ ಸೋಮಶೇಖರ್‌ಗೆ ಕಾಂಗ್ರೆಸ್‌ಗಿಂತ ಜೆಡಿಎಸ್‌ನ ಜವರಾಯಿಗೌಡರೇ ಸ್ಪರ್ಧೆಯೊಡ್ಡ ಲಾರಂಭಿಸಿ ದ್ದರು. ಹಾಗಿದ್ದರೂ ಸೋಮಶೇಖರ್‌ ಗೆಲುವಿನ ಮೂಲಕ ಆರೂವರೆ ವರ್ಷಗಳ ಬಳಿಕ ಎರಡನೇ ಬಾರಿಗೆ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದಾರೆ.

ಗೆದ್ದವರು
ಸೋಮಶೇಖರ್‌ (ಬಿಜೆಪಿ)
ಪಡೆದ ಮತ: 144722
ಗೆಲುವಿನ ಅಂತರ‌: 27699

ಸೋತವರು
ಜವರಾಯಿಗೌಡ (ಜೆಡಿಎಸ್‌)
ಪಡೆದ ಮತ: 117023

ನಾಗರಾಜು(ಕಾಂಗ್ರೆಸ್‌)
ಪಡೆದ ಮತ: 15,714

ಗೆದ್ದದ್ದು ಹೇಗೆ?
-ಯಶವಂತಪುರ ಕ್ಷೇತ್ರದ ಅಭಿವೃದ್ಧಿ ಕಾರ್ಯದ ಜೊತೆಗೆ ಸಚಿವರಾಗುವ ನಿರೀಕ್ಷೆ

-ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲದಂತೆ ಸಂಘಟಿತವಾಗಿ ಪ್ರಚಾರ ನಡೆಸಿದ್ದು

-ಕಾಂಗ್ರೆಸ್‌ನ ಹಲವು ಜನಪ್ರತಿನಿಧಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು

ಸೋತದ್ದು ಹೇಗೆ?
-ಉಪಚುನಾವಣೆಗೆ ಯಾವುದೇ ನಿರ್ದಿಷ್ಟ ಅಜೆಂಡಾವಿಲ್ಲದೆ ಕ್ಷೇತ್ರಾದ್ಯಂತ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮುಖಂಡರು ಪ್ರಚಾರ ನಡೆಸಿದ್ದು

-ಎಸ್‌.ಟಿ.ಸೋಮಶೇಖರ್‌ಗೆ ಪ್ರಬಲ ಸ್ಪರ್ಧೆಯೊಡ್ಡುವ ಪರ್ಯಾಯ ಅಭ್ಯರ್ಥಿ ಎಂಬ ವಿಶ್ವಾಸ ಮೂಡಿಸದಿದ್ದ‌ದ್ದು

-ಕ್ಷೇತ್ರದ ಮತದಾರರಲ್ಲಿ ಅನುಕಂಪವನ್ನು ಮತವಾಗಿ ಪರಿವರ್ತಿಸುವಲ್ಲಿ ಜೆಡಿಎಸ್‌ ನಾಯಕರು ವಿಫ‌ಲರಾಗಿದ್ದು

ಪ್ರತಿ ಬಾರಿ ವಿರೋಧ ಪಕ್ಷದವರು ನನ್ನನ್ನು ಅನರ್ಹ ಶಾಸಕ ಎಂದು ಟೀಕೆ ಮಾಡುತ್ತಿದ್ದರು. ಆದರೆ, ಈ ಬಾರಿಯ ವಿಧಾನಸಭಾ ಉಪ ಚುನಾವಣೆಯಲ್ಲಿ ಗೆಲುವು ನೀಡುವ ಮೂಲಕ ನಾನು ನಂಬಿದ ನನ್ನ ಕ್ಷೇತ್ರದ ಜನರೇ ನನ್ನನ್ನು ಅರ್ಹ ಎಂದು ಸಾಬೀತು ಮಾಡಿದ್ದಾರೆ. ಆ ಮೂಲಕ ಪ್ರತಿಪಕ್ಷಗಳ ಟೀಕೆಗೆ ತಕ್ಕ ಉತ್ತರ ನೀಡಿದ್ದಾರೆ. ನನ್ನನ್ನು ಗೆಲ್ಲಿಸಿದ ಕ್ಷೇತ್ರದ ಎಲ್ಲಾ ಮತದಾರರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.
-ಸೋಮಶೇಖರ್‌, ಬಿಜೆಪಿ ವಿಜೇತ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next