Advertisement

ಸಮನ್ವಯತೆಯಿಂದ ಲಸಿಕಾ ಅಭಿಯಾನ ಯಶಸ್ವಿಗೊಳಿಸಿ

04:30 PM Jul 05, 2018 | Team Udayavani |

ದಾವಣಗೆರೆ: ರಾಷ್ಟ್ರೀಯ ಜಂತುಹುಳು ಹಾಗೂ ನಗರ ಇಂದ್ರಧನುಷ್‌ ಲಸಿಕಾ ಅಭಿಯಾನವನ್ನು ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪದ್ಮಾಬಸವಂತಪ್ಪ ಸೂಚಿಸಿದ್ದಾರೆ.

Advertisement

ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜು. 16 ರಂದು ಮೊದಲ ಸುತ್ತಿನ ನಗರ ಇಂದ್ರಧನುಷ್‌ ಲಸಿಕಾ ಅಭಿಯಾನ ಹಾಗೂ ಆ. 10 ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ತಮ್ಮ ಜವಾಬ್ದಾರಿಯನ್ನು ಎಲ್ಲಾ ಇಲಾಖೆಗಳು ಸಮರ್ಪಕವಾಗಿ ನಿಭಾಯಿಸಬೇಕು ಎಂದರು.

ಆರ್‌ಸಿಎಚ್‌ ಅಧಿಕಾರಿ ಡಾ|ಶಿವಕುಮಾರ್‌, ಗ್ರಾಮ ಸ್ವರಾಜ್‌ ಅಭಿಯಾನದಡಿ ಜಿಲ್ಲೆಯ 43 ಗ್ರಾಮಗಳಲ್ಲಿ ಲಸಿಕಾ ಕಾರ್ಯ ಪ್ರಗತಿಯಲ್ಲಿದೆ. ದಾವಣಗೆರೆ ನಗರದ 41 ವಾರ್ಡುಗಳಲ್ಲಿ ಜು. 16 ರಿಂದ 20 ರವರೆಗೆ ಅಭಿಯಾನ ನಡೆಯುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಕುರಿತು ತರಬೇತಿ ನೀಡಲಾಗಿದೆ. ಅವರು ಕೈಗೊಳ್ಳುವ ಸರ್ವೇಯಲ್ಲಿ ಪತ್ತೆಯಾಗುವ ಮಕ್ಕಳಿಗೆ ಲಸಿಕೆ ನೀಡಲು ಆರೋಗ್ಯ ಇಲಾಖೆ
ತಯಾರಿ ನಡೆಸಿದೆ ಎಂದು ತಿಳಿಸಿದರು. 

ಮಹಾನಗರ ಪಾಲಿಕೆ ಆರೋಗ್ಯ ವಿಭಾಗದ ಡಾ| ಚಂದ್ರಶೇಖರ್‌ ಸುಂಕರ್‌ ಮಾತನಾಡಿ, ನಗರಪಾಲಿಕೆ ವತಿಯಿಂದ ಲಸಿಕಾ ಅಭಿಯಾನದ ಕುರಿತು ವ್ಯಾಪಕ ಪ್ರಚಾರ ನೀಡಲಾಗುವುದು ಹಾಗೂ ಅಗತ್ಯ ಸಿಬ್ಬಂದಿ ಒದಗಿಸಲಾಗುವುದು ಎಂದು ತಿಳಿಸಿದರು.

ಆ.10 ರ ಶುಕ್ರವಾರ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಶಾಶ್ವತ ಅನುದಾನರಹಿತ ಶಾಲೆಯ ಎಲ್ಲ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡುವ ಮೂಲಕ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಂದು ವೇಳೆ ಆ. 10 ರಂದು ಜಂತುಹುಳು ನಿವಾರಣಾ ಮಾತ್ರೆ ಸೇವಿಸಲು ಸಾಧ್ಯವಾಗದ ಮಕ್ಕಳಿಗೆ ಆ. 17 ರಂದು ಮಾತ್ರೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. 

Advertisement

ಜಿಲ್ಲೆಯ 1,443 ಸರ್ಕಾರಿ, 437 ಅನುದಾನಿತ, 499 ಅನುದಾನರಹಿತ ಶಾಲೆ, 36 ವಸತಿ ಶಾಲೆ, 2,415 ಅಂಗನವಾಡಿಗಳು ಮತ್ತು ಪಿಯು ಕಾಲೇಜುಗಳಲ್ಲಿ 1 ರಿಂದ 19 ವಯಸ್ಸಿನ 5,43,742 ಮಕ್ಕಳಿಗೆ ಜಂತುಹುಳು ಮಾತ್ರೆಗಳನ್ನು(ಅಲ್ಬಂಡಜಾಲ್‌) ನೀಡುವ ಗುರಿ ಹೊಂದಲಾಗಿದೆ. ವಿಟಮಿನ್‌ ಎ ದ್ರಾವಣ ನೀಡಲಾಗುವುದು. ವಾರದ ಕಬ್ಬಿಣಾಂಶ ಮತ್ತು ಆಮ್ಲದ ಮಾತ್ರೆಗಳ ಪೂರಕ ಕಾರ್ಯಕ್ರಮದ ಜೊತೆಗೆ ವರ್ಷದಲ್ಲಿ ಎರಡು ಬಾರಿ ಜಂತುಹುಳು ನಿವಾರಣಾ ಮಾತ್ರೆ ನೀಡಲಾಗುತ್ತದೆ ಎಂದು
ಮಾಹಿತಿ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಗಂಗಾಧರ್‌, ಡಾ. ಸರೋಜಾಬಾಯಿ, ಡಾ| ಮೀನಾಕ್ಷಿ, ಡಾ. ನಂದಾ, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next