Advertisement

“ಮತಗಟ್ಟೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಯಶಸ್ಸುಗೊಳಿಸಿ’

01:45 AM Apr 14, 2019 | sudhir |

ಮಡಿಕೇರಿ :ಲೋಕಸಭಾ ಚುನಾವಣೆ ಸಂಬಂಧ ಏಪ್ರಿಲ್‌ 17 ರಂದು ಮಸ್ಟರಿಂಗ್‌, ಮತದಾನದ ಅನಂತರ ಡಿಮಸ್ಟರಿಂಗ್‌ ಸೇರಿದಂತೆ ಚುನಾವಣೆಯ ಕಾರ್ಯಗಳನ್ನು ವ್ಯವಸ್ಥಿತವಾಗಿ ನಡೆಸುವಲ್ಲಿ ಸೆಕ್ಟರ್‌ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಸೂಚಿಸಿದ್ದಾರೆ.

Advertisement

ನಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಹಾಯಕ ಚುನಾವ ಣಾಧಿಕಾರಿಗಳು, ಸೆಕ್ಟರ್‌ ಅಧಿಕಾರಿಗಳು ಇತರರೊಂದಿಗೆ ಚುನಾವಣೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಪ್ರಿಲ್‌ 17ರಂದು ಮಸ್ಟರಿಂಗ್‌ ಕಾರ್ಯವನ್ನು ಸೆಕ್ಟರ್‌ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಯಶಸ್ಸುಗೊಳಿ ಸಬೇಕು. ಅನಂತರ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗೆ ತಲುಪಿದ್ದಾರೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ಮತದಾನದಂದು ಮಾಕ್‌ಪೋಲ್‌ ಮತ್ತಿತರ ಅಗತ್ಯ ಸಿದ್ಧತೆ ಬಗ್ಗೆ ಮಾಹಿತಿ ನೀಡಬೇಕು.

ಶೇಕಡಾವಾರು ಮತದಾನ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಮಾಹಿತಿ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾ ರಿಗಳಿಗೆ ಮೂಲ ಸೌಲಭ್ಯ ಒದಗಿಸುವುದು, ಮತಗಟ್ಟೆ ಸ್ಥಿತಿ, ಮತಗಟ್ಟೆ ಆವರಣ ಸ್ವತ್ಛವಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟವರ ಗಮನಕ್ಕೆ ತರುವುದು. ವಿದ್ಯುತ್‌ ವ್ಯವಸ್ಥೆ, ಶೌಚಾಲಯ, ಪೀಠೊಪಕರಣ, ರ್‍ಯಾಂಪ್‌, ಕುಡಿಯುವ ನೀರು ಇದೆಯೇ ಎಂಬುದನ್ನು ಮತ್ತೂಮ್ಮೆ ಖಾತರಿಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ಸಹಾಯಕ ಚುನಾವಣಾಧಿಕಾರಿಗಳ ಹಂತದಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸುವುದು. ಭಾವಚಿತ್ರರುವ ಮತ ದಾರರ ಚೀಟಿಯನ್ನು ವಿತರಿಸಲು ಅಗತ್ಯ ಕ್ರಮಕೈಗೊಳ್ಳುವುದು. ಮತದಾರರ ಗೈಡ್‌ ವಿತರಣೆ ಮತ್ತಿತರ ಕಾರ್ಯವನ್ನು ಸಂಬಂ ಧಪಟ್ಟ ಅಧಿಕಾರಿಗಳು ನಿರ್ವಹಿಸಬೇಕು ಎಂದರು.
ಜಿಲ್ಲೆಯಲ್ಲಿ 10 ಸಖೀ ಮತಗಟ್ಟೆಗಳು, 5 ಸಾಂಪ್ರದಾಯಿಕ ಮತಗಟ್ಟೆ ಹಾಗೂ 1 ವಿಶೇಷಚೇತನರ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

Advertisement

ಮತದಾನದ ಹಿಂದಿನ ದಿನ ಮತ್ತು ಮತದಾನದ ದಿನ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನಹರಿಸುವುದು, ಡಿ ಮಸ್ಟರಿಂಗ್‌ ಕಾರ್ಯವನ್ನು ಸಮರ್ಪ ಕವಾಗಿ ಮಾಡುವುದು, ಮತಗಟ್ಟೆ ಅಧಿಕಾ ರಿಗಳನ್ನು ಕರೆದುಕೊಂಡು ಬರುವ ಬಗ್ಗೆ ವಾಹನ ವ್ಯವಸ್ಥೆ ಮಾಡುವುದು. ಡಿ ಮಸ್ಟರಿಂಗ್‌ ಮುಗಿದ ಅನಂತರ ಮತಗಟ್ಟೆ ಅಧಿಕಾರಿಗಳನ್ನು ಅವರ ಕೇಂದ್ರ ಸ್ಥಾನಕ್ಕೆ ಕರೆ ತರುವಂತಾಗಬೇಕು ಎಂದು ಅವರು ಹೇಳಿದರು.

ಜಿಲ್ಲೆಯ ಆಯ್ದ 30 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ಮಾಡಲಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಮಾತನಾಡಿ ಚುನಾವಣಾ ಆಯೋಗದ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸ ಬೇಕು. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಚುನಾವಣೆ ಸಂಬಂಧ ಹದ್ದಿನ ಕಣ್ಣಿಡಬೇಕಿದೆ ಎಂದರು.

ಜಾಗೃತಿ ಕಾರ್ಯಕ್ರಮ
ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಳಕ್ಕೆ ಸ್ವೀಪ್‌ ಸಮಿತಿ ವತಿಯಿಂದ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವಿಶೇಷ ಚೇತನರು ಮತಗಟ್ಟೆಗೆ ತೆರಳುವಂತಾಗಲು ಈಗಾಗಲೇ ವಾಹನ ವ್ಯವಸ್ಥೆ ಹಾಗೂ ತ್ರಿಚಕ್ರ ವ್ಯವಸ್ಥೆ ಮಾಡಲಾಗಿದ್ದು, ಈ ಸಂಬಂಧ ತಾ.ಪಂ.ಇಒ ಅವರೊಂದಿಗೆ ಸಮನ್ವಯ ಸಾಧಿಸುವಂತೆ ಸ್ವೀಪ್‌ ಸಮಿತಿ ಅಧ್ಯಕ್ಷೆ ಕೆ.ಲಕ್ಷ್ಮೀಪ್ರಿಯಾ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next