Advertisement

ಈಡೇರದ ಉಪನಗರ ರೈಲಿನ ಆಸೆ

12:15 PM Feb 04, 2017 | |

ಬೆಂಗಳೂರು: ಉಪನಗರ ರೈಲು ಎದುರುನೋಡುತ್ತಿದ್ದ ನಗರದ ಜನರಿಗೆ ಕೇಂದ್ರ ಬಜೆಟ್‌ ನಿರಾಸೆ ಮೂಡಿಸಿದೆ. ಈ ಮೂಲಕ ಉಪನಗರ ರೈಲು ಯೋಜನೆಗೆ ಮತ್ತೂಂದು ವರ್ಷ ಕಾಯುವುದು ಅನಿವಾರ್ಯವಾಗಿದೆ. 

Advertisement

ಉಪನಗರ ಯೋಜನೆಗಾಗಿ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅವರು ಚೆನ್ನೈಗೆ 14 ಕೋಟಿ ಮತ್ತು ಹೈದರಾಬಾದ್‌ಗೆ 116 ಕೋಟಿ ರೂ. ನೀಡಿದ್ದಾರೆ. ಆದರೆ, ಬೆಂಗಳೂರನ್ನು ಮರೆತಿದ್ದಾರೆ. ಇಡೀ ಬಜೆಟ್‌ನಲ್ಲಿ ಬೆಂಗಳೂರು ಉಪನಗರ ರೈಲಿನ ಪ್ರಸ್ತಾಪವೇ ಆಗಲಿಲ್ಲ. ಇದರಿಂದ ಭರವಸೆಗಳು ಮತ್ತೆ ಹುಸಿಯಾಗಿವೆ. 

ಈ ಹಿಂದಿನ ರೈಲ್ವೆ ಬಜೆಟ್‌ನಲ್ಲಿ ಸಚಿವ ಸುರೇಶ್‌ ಪ್ರಭು, ಉಪನಗರ ರೈಲುಗಳ ಬಗ್ಗೆ ಪ್ರಸ್ತಾಪಿಸಿದ್ದರು. ಇದಾದ ನಂತರ ಹಲವು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದ ಸಚಿವರು, ಉಪನಗರ ರೈಲು ಯೋಜನೆ ಭರವಸೆ ನೀಡಿದ್ದರು. ಆದರೆ, ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪ ಆಗಲೇ ಇಲ್ಲ. 

“ಲೆವೆಲ್‌ ಕ್ರಾಸಿಂಗ್‌’ನಲ್ಲೂ ನಿರಾಸೆ: ನಗರದ ವಿವಿಧೆಡೆ ಸುಮಾರು 50 ಲೆವೆಲ್‌ ಕ್ರಾಸಿಂಗ್‌ಗಳಿವೆ. ಈ ಪೈಕಿ ಕೇವಲ ಒಂದಕ್ಕೆ ಹಣಕಾಸು ಸಚಿವರು ಅನುಮೋದನೆ ನೀಡಿದ್ದಾರೆ. ಈ ನಿಟ್ಟಿನಲ್ಲೂ ನಗರದ ಜನರಿಗೆ ನಿರಾಸೆಯಾಗಿದೆ. 

ಸಚಿವ ಡಿ.ವಿ. ಸದಾನಂದಗೌಡ ಅವರು ರೈಲ್ವೆ ಸಚಿವರಾಗಿದ್ದಾಗ, ಅಂದಾಜು 10-15 ಲೆವೆಲ್‌ ಕ್ರಾಸಿಂಗ್‌ಗಳನ್ನು ತೆಗೆದುಹಾಕಲು ಅನುಮೋದನೆ ನೀಡಿದ್ದರು. ನಗರದ ಸಂಚಾರದಟ್ಟಣೆ ತಗ್ಗಿಸಲು ಈ ಲೆವೆಲ್‌ ಕ್ರಾಸಿಂಗ್‌ಗಳನ್ನು ತೆಗೆದುಹಾಕಿ, ವಾಹನಗಳ ಸಂಚಾರ ಮತ್ತು ರೈಲು ಸಂಚಾರಕ್ಕೆ ಒಟ್ಟಿಗೆ ಅವಕಾಶ ನೀಡುವುದು ಅತ್ಯಗತ್ಯವಾಗಿದೆ ಎಂದು ರೈಲ್ವೆ ತಜ್ಞ ಹಾಗೂ ಪ್ರಜಾ ಸಂಸ್ಥೆಯ ಸಂಜೀವ್‌ ದ್ಯಾಮಣ್ಣವರ ತಿಳಿಸಿದ್ದಾರೆ. 

Advertisement

ಟರ್ಮಿನಲ್‌ಗೆ 32 ಕೋಟಿ: ಬೈಯಪ್ಪನಹಳ್ಳಿ ಕೋಚಿಂಗ್‌ ಟರ್ಮಿನಲ್‌ಗೆ 32 ಕೋಟಿ ರೂ. ನೀಡಿದ್ದು ಸಮಾಧಾನ ತಂದಿದೆ. ಅದೇ ರೀತಿ, ಎಚ್‌ಎಎಲ್‌ ಬಳಿ ಸಿಬ್ಬಂದಿಗೆ ತರಬೇತಿ ನೀಡುವ “ರೈಲ್ವೆ ಸುರಕ್ಷತಾ ಗ್ರಾಮ’ಕ್ಕೆ 3 ಕೋಟಿ ನೀಡಲಾಗಿದೆ. ಬೆಂಗಳೂರು-ಹೊಸೂರು, ಚಿಕ್ಕಮಗ ಳೂರು-ಹುಬ್ಬಳ್ಳಿ ವಿದ್ಯುದ್ದೀಕರಣಕ್ಕೆ ಅನುಮೋದನೆ ದೊರಕಿದೆ. ಯಲಹಂಕ-ಗುಂದಕಲ್‌ ಡಬ್ಲಿಂಗ್‌ಗೆ 120 ಕೋಟಿ ರೂ. ನೀಡಿರುವುದು ಸ್ವಾಗತಾರ್ಹ ಎಂದು ತಜ್ಞರು ಹೇಳುತ್ತಾರೆ. 

ಆದರೆ, ರೈಲ್ವೆ ಮೂಲಸೌಕರ್ಯ ಕಲ್ಪಿಸಲು ಇಡೀ ರಾಜ್ಯಕ್ಕೆ ಕೇವಲ 40 ಕೋಟಿ ರೂ. ನೀಡಲಾಗಿದೆ. ತಮಿಳುನಾಡು ಮತ್ತು ಅವಿಭಜಿತ ಆಂಧ್ರಪ್ರದೇಶಕ್ಕೆ ಕ್ರಮವಾಗಿ 80 ಮತ್ತು 70 ಕೋಟಿ ರೂ. ಕೊಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next