Advertisement

ಕೊಬ್ಬರಿ ಖರೀದಿಗೆ ಶೀಘ್ರ ಸಹಾಯಧನ

10:36 AM Aug 01, 2020 | Suhan S |

ಅರಸೀಕೆರೆ: ತೆಂಗು ಬೆಳೆಗಾರರ ಹಿತ ಕಾಯಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬದ್ಧರಾಗಿದ್ದು, ಸದ್ಯದಲ್ಲಿಯೇ ಕೊಬ್ಬರಿ ಖರೀದಿಗೆ ಸಹಾಯಧನ ನೀಡಲಿದ್ದಾರೆ. ಆದರೆ ಶಾಸಕ ಕೆ. ಎಂ.ಶಿವಲಿಂಗೇ ಗೌಡ ತೆಂಗು ಬೆಳೆಗಾರರ ಪರ ಹೋರಾಟ ಮಾಡುವ ಅನಿವಾರ್ಯತೆ ಇಲ್ಲ ಎಂದು ಬೆಂಗಳೂರು ನಗರ ಜಿಪಂ ಅಧ್ಯಕ್ಷ ಜಿ.ಮರಿಸ್ವಾಮಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ವೈರಸ್‌ ಸಂಕಷ್ಟದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಸ್ಥರ ವಾಗಿರುವ ಕಾರಣ ತೆಂಗು ಬೆಳೆಗಾರರಿಗೆ ಸರ್ಕಾರ ಪರಿಹಾರ ನೀಡಲು ವಿಳಂಬವಾಗಿದೆಯೇ ಹೊರೆತು ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಮತ್ತು ಪ್ರೋತ್ಸಾಹ ನೀಡುವ ಬಗ್ಗೆ ಮುಖ್ಯಮಂತ್ರಿಗಳು ನಮ್ಮೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು. ಇದನ್ನು ತಿಳಿದಿರುವ ಶಾಸಕರು ತಾವು ರೈತರ ಪರ ಎಂದು ಹೋರಾಟದ ಪ್ರದರ್ಶನ ಮಾಡಿ ಕ್ಷೇತ್ರದ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಸದ್ಯದಲ್ಲಿಯೇ ಸರ್ಕಾರ ತೆಂಗು ಬೆಳೆಗಾರರಿಗೆ ಸಹಾಯಧನ ನೀಡುವ ಭರವಸೆ ವ್ಯಕ್ತಪಡಿಸಿದರು.

ಮುಂಬರುವ ಗ್ರಾಪಂ ಚುನಾವಣೆ ಮೀಸಲಾತಿ ವಿಷಯದಲ್ಲಿ ಮಾಜಿ ಮಂತ್ರಿ ಎಚ್‌.ಡಿ.ರೇವಣ್ಣ ಜಿಲ್ಲಾಧಿಕಾರಿಗಳು ಕುರಿತು ನೀಡುರುವ ಹೇಳಿಕೆ ಸರಿಯಲ್ಲ, ಈ ಬಗ್ಗೆ ರಾಜಕೀಯ ಹಸ್ತಕ್ಷೇಪ ನಡೆದಿದ್ದರೇ ಅವರದೇ ಪಕ್ಷದ ಶಾಸಕ ಶಿವಲಿಂಗೇಗೌಡ ಅವ ರಿಂದ ಸ್ಪಷ್ಟ ಮಾಹಿತಿ ಪಡೆದು ಮಾತನಾಡಲಿ ಎಂದು ಟೀಕಿಸಿದರು.

ಭಿನ್ನಮತಕ್ಕೆ ಆಸ್ಪದವಿಲ್ಲ: ಅರಸೀಕೆರೆ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ನೇಮಕಕ್ಕೆ ಸಂಬಂಧಿಸಿ ದ್ದಂತೆ ತಾವು ಯಾವುದೇ ಹಸ್ತಕ್ಷೇಪ ಮಾಡಿಲ್ಲ ಕೆಲವು ತಾಂತ್ರಿಕ ದೋಷದ ಪರಿಣಾಮ ಅಧ್ಯಕ್ಷ ಸ್ಥಾನದ ನೇಮಕಾತಿಯನ್ನು ಸರ್ಕಾರ ವಾಪಸ್‌ ಪಡೆದಿದೆ. ಸದ್ಯ ದಲ್ಲೇ ಅಧ್ಯಕ್ಷರ ಸ್ಥಾನದ ನೇಮಕ ಪ್ರಕಟಣೆ ಆಗಲಿದೆ ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ ಎಂದರು. ನಗರ ಬಿಜೆಪಿ ಅಧ್ಯಕ್ಷ ಪುರುಷೋತ್ತಮ್‌, ಮುಖಂಡರಾದ ಆಕಾಶ್‌ ಹಿರಿಯಪ್ಪ, ವಿಜಯಕುಮಾರ್‌, ಲಾಳನಕೆರೆ ಯೋಗೀಶ್‌, ಕೆ.ಸಿ.ಎನ್‌.ಶಿವು, ಶಿವರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next