Advertisement

ಕೂಟದ ಹೆಸರಿನಲ್ಲಿ ನೌಕರರಿಂದ ಚಂದಾ?

03:43 PM May 02, 2021 | Team Udayavani |

ಬೆಂಗಳೂರು: ವೇತನ ಬಿಡುಗಡೆ ಆಗಿರುವವರು ಉದಾರವಾಗಿನಿಮ್ಮ ಕೈಲಾದಷ್ಟು ಸಾರಿಗೆ ನೌಕರರ ಕೂಟದ ಖಾತೆಗೆ ಧನಸಹಾಯ ಮಾಡಬೇಕು…-ಸಾರಿಗೆ ನಿಗಮದೊಂದಿಗೆ ಗುದ್ದಾಡಿ ಎರಡುದಿನಗಳ ಹಿಂದಷ್ಟೇ ವೇತನ ಬಿಡುಗಡೆ ಮಾಡಿಸಿಕೊಂಡ ಸಾರಿಗೆ ನೌಕರರ ಮೊಬೈಲ್‌ಗಳಿಗೆ ಇಂತಹದ್ದೊಂದು ಅಲಿಖೀತ ಫ‌ರ್ಮಾನುಗಳುಬರುತ್ತಿವೆ.ಮಾರ್ಚ್‌ ಸಂಬಳ ಹೆಚ್ಚು-ಕಡಿಮೆ ಒಂದು ತಿಂಗಳುತಡವಾಗಿ ಬಿಡುಗಡೆಯಾಗಿದೆ.

Advertisement

ಬಸ್‌ಗಳ ಸಂಚಾರ ಸಂಪೂರ್ಣಸ್ಥಗಿತಗೊಂಡಿದ್ದರಿಂದ ಬರುವ ತಿಂಗಳು ವೇತನ ಎಷ್ಟು ಬಿಡುಗಡೆ ಕೈಸೇರುತ್ತದೆ ಎಂಬುದು ಖಾತ್ರಿ ಇಲ್ಲ. ಈ ನಡುವೆ ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಸಂದೇಶಗಳನ್ನು ಬರುತ್ತಿವೆ. ಇದು ಸಾರಿಗೆನೌಕರರನ್ನು ಗೊಂದಲದ ಜತೆಗೆ ಇಕ್ಕಟ್ಟಿಗೆ ಸಿಲುಕಿಸಿದೆ.

ನುಂಗಲಾರದ ತುತ್ತು: ಈಗಾಗಲೇ ಕೆಲವರು ಕೈಲಾದಷ್ಟುಹಣವನ್ನೂ ಕೂಟದ ಖಾತೆಗೆ ಜಮೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಇನ್ನು ಹಲವರಿಗೆ ಇದು ನುಂಗಲಾರದ ತುತ್ತಾಗಿದೆ.ಧನಸಹಾಯ ಮಾಡದಿದ್ದರೆ, ಸ್ಥಳೀಯ ನಾಯಕರ ಕೆಂಗಣ್ಣಿಗೆಗುರಿಯಾಗಬೇಕಾಗುತ್ತದೆ. ಧನಸಹಾಯ ಮಾಡಿದರೆ, ಇಡೀತಿಂಗಳ ಕುಟುಂಬ ನಿರ್ವಹಣೆ ದುಸ್ತರವಾಗಲಿದೆ. ಏನುಮಾಡುವುದು ದಿಕ್ಕುತೋಚುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದಬಿಎಂಟಿಸಿ ನೌಕರರೊಬ್ಬರು ಅಲವತ್ತುಕೊಂಡರು.

ವಿಚಾರಣೆ ಹಂತದಲ್ಲಿರುವ ಅರ್ಜಿ: ಸುಮಾರು 1.30 ಲಕ್ಷನೌಕರರು ಇದ್ದಾರೆ. ಇದರಲ್ಲಿ ಲಕ್ಷ ಜನ ತಲಾ ನೂರು ರೂ.ಜಮೆ ಮಾಡಿದರೂ, ಒಂದು ಕೋಟಿ ರೂ. ಆಗುತ್ತದೆ. ಅಷ್ಟಕ್ಕೂಈಗ ಹಣದ ಅವಶ್ಯಕತೆ ಕೂಟಕ್ಕೆ ಯಾಕೆ ಇದೆ? ಇದರ ಬಗ್ಗೆಸಂದೇಶದಲ್ಲಿ ಯಾವುದೇ ಸ್ಪಷ್ಟನೆ ಇಲ್ಲ.

ಅಮಾನತು,ವಜಾಗೊಂಡ ನೌಕರರ ಪರ ಕಾನೂನು ಹೋರಾಟಕ್ಕೆ ಮಾಡಲು ಎಂದು ಹೇಳಿದರೂ, ಈಗಾಗಲೇ ಸಾರ್ವಜನಿಕ ಹಿತಾಸಕ್ತಿ ಅರ್ಜಿವಿಚಾರಣೆ ಹಂತದಲ್ಲಿದೆ. ಇನ್ನು ಒಂದಿಬ್ಬರು ವಕೀಲರು ಉಚಿತವಾಗಿ ನಮ್ಮ ಪರ ವಾದ ಮಾಡಲುಮುಂದೆ ಬಂದಿರುವುದೂ ಗೊತ್ತಿರುವ ಸಂಗತಿ. ಹೀಗಿರುವಾಗ, ಹಣದ ಅವಶ್ಯಕತೆ ಏನಿದೆ ಎಂದು ಕೆಎಸ್‌ಆರ್‌ಟಿಸಿಯ ಮಂಗಳೂರು ಘಟಕದ ಚಾಲಕರೊಬ್ಬರು ಕೇಳುತ್ತಾರೆ.

Advertisement

ನನಗೂ ಫೋನ್‌ ಮಾಡಿ ಕೇಳಿದ್ರು!: ಈ ಬಗ್ಗೆ ನನಗೂ ಕೆಲನೌಕರರು ಕರೆ ಮಾಡಿ ಕೇಳಿದ್ದಾರೆ. ಮಂಗಳೂರಿನಿಂದ ಒಂದಿಬ್ಬರು ಸ್ನೇಹಿತರು ಕರೆ ಮಾಡಿ, ಸಾವಿರ ರೂ. ಹಾಕುವಂತೆ ಕೇಳುತ್ತಿದ್ದಾರೆ. ಏನು ಮಾಡುವುದು ಎಂದು ಕೇಳಿದರು. ಕೂಟದಿಂದ ಹೀಗೆ ಯಾವುದೇ ರೀತಿಯ ಧನಸಹಾಯ ಕೇಳುತ್ತಿಲ್ಲ. ಹೆಸರು ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ನೂರು ರೂ. ಶುಲ್ಕನಿಗದಿಪಡಿಸಲಾಗಿದೆ ಅಷ್ಟೇ ಎಂದು ರಾಜ್ಯ ಸಾರಿಗೆ ನೌಕರರಕೂಟದ ಅಧ್ಯಕ್ಷ ಆರ್‌. ಚಂದ್ರಶೇಖರ್‌ ಸ್ಪಷ್ಟಪಡಿಸಿದರು.ನೌಕರರಿಂದ ಹಣ ಸಂಗ್ರಹ ಈ ಹಿಂದೆ ಕೂಟದ ಮುಖಂಡರೊಬ್ಬರನ್ನು ನಿಗಮವು ವಜಾಗೊಳಿಸಿದಾಗಲೂ ವಿವಿಧ ಘಟಕಗಳ ವ್ಯಾಪ್ತಿಯಲ್ಲಿ ನೌಕರರಿಂದ ಹಣ ಸಂಗ್ರಹಿಸಲಾಗಿತ್ತು. ಆ ಸಂದರ್ಭದಲ್ಲಿಸಾವಿರಾರು ರೂ. ಸಂಗ್ರಹವಾಗಿತ್ತು. ಅಲ್ಲದೆ, ಕೂಟದಿಂದಲೂ ಪ್ರತಿ ತಿಂಗಳು ವಜಾಗೊಂಡ ಮುಖಂಡರಿಗೆ20-25 ಸಾವಿರ ರೂ. ಹಣ ಪಾವತಿ ಆಗುತ್ತಿತ್ತು ಎಂದುಮೂಲಗಳು ಉದಯವಾಣಿಗೆ ತಿಳಿಸಿವೆ.

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next