Advertisement

ಉದ್ದೀಪನ ಸೇವನೆ: ಫ‌ುಟ್ಬಾಲಿಗ ಸುಬ್ರತಾ ನಿಷೇಧದಿಂದ ಪಾರು

03:50 AM Jul 07, 2017 | |

ಹೊಸದಿಲ್ಲಿ: ಉದ್ದೀಪನ ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ನಿಷೇಧದ ಸುಳಿಗೆ ಸಿಲುಕಿದ್ದ ಭಾರತ ಫ‌ುಟ್ಬಾಲಿಗ ಸುಬ್ರತಾ ಪಾಲ್‌ ನಿಷೇಧ ಭೀತಿಯಿಂದ ಪಾರಾಗಿದ್ದಾರೆ. ಮಾರ್ಚ್‌ 8ರಂದು ಮುಂಬೈನಲ್ಲಿ ನಡೆದ ಕೂಟವೊಂದರ ವೇಳೆ ರಾಷ್ಟ್ರೀಯ ಉದ್ದೀಪನ ನಿಗ್ರಹ ಪರೀಕ್ಷೆ ಒಳಪಡಿಸಿದ್ದಾಗ ಸುಬ್ರತಾ ನಿಷೇಧಿತ ಪದಾರ್ಥ ಸೇವಿಸಿದ್ದಾರೆ ಎನ್ನುವುದು ವರದಿಯಾಗಿತ್ತು. ಕೂಡಲೇ ಅವರನ್ನು ಅಮಾನತು ಮಾಡಲಾಗಿತ್ತು.

Advertisement

ಸದ್ಯ ಸುಬ್ರತಾ ಅವರನ್ನು ತನಿಖೆ ಒಳಪಡಿಸಿದಾಗ ಇವರು ಉದ್ದೀಪನ ಮದ್ದನ್ನು ಉದ್ದೇಶಪೂರ್ವಕವಾಗಿ ಸೇವಿಸಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಹೀಗಾಗಿ ಕೇವಲ ಎಚ್ಚರಿಕೆ ಮಾತ್ರ ನೀಡಿ ಕಳುಹಿಸಲಾಗಿದೆ ಎಂದು ಅಖೀಲ ಭಾರತೀಯ ಫ‌ುಟ್ಬಾಲ್‌ ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next