Advertisement

ಸುಬ್ರತೋ ಜಾಮೀನಿಗೆ 9 ಸಾವಿರ ಕೋಟಿ ಕೊರತೆ

03:45 AM Jul 06, 2017 | Team Udayavani |

ನವದೆಹಲಿ: ಹೂಡಿಕೆದಾರರಿಗೆ ವಂಚನೆ ಎಸಗಿದ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ಸಹಾರಾ ಗ್ರೂಪ್‌ನ ಸುಬ್ರತೋ ರಾಯ್‌ ಜಾಮೀನು ಮೊತ್ತ 24 ಸಾವಿರ ಕೋಟಿ ರೂ. ಕ್ರೋಢೀಕರಣಕ್ಕೆ ಇದೀಗ 9 ಸಾವಿರ ಕೋಟಿ ರೂ. ಕೊರತೆಯಾಗಿದೆ.  ಹೂಡಿಕೆದಾರರಿಗೆ ಹಣ ವಾಪಸ್‌ ಕೊಡುವ ಸಂಬಂಧ ಜೂ.19ರ ಒಳಗಾಗಿ ಸೆಬಿ-ಸಹಾರಾ ಖಾತೆಗೆ 1500.40 ಕೋಟಿ ರೂ.ಗಳ ಕಂತನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಅದರಂತೆ ಎರಡು ಕಂತುಗಳಲ್ಲಿ 790.18 ಕೋಟಿ ರು. ಮತ್ತು 709.82 ಕೋಟಿ ರೂ.ಗಳ ಎರಡು ಚೆಕ್‌ಗಳನ್ನು ಸುಬ್ರತೋ ನೀಡಿದ್ದರು. 

Advertisement

ಇನ್ನೀಗ ಕೋರ್ಟ್‌ ಆದೇಶದಂತೆ 55.21 ಕೋಟಿ ರೂ.ಗಳ ಚೆಕ್‌ ಅನ್ನು ಜು.15ರೊಳಗೆ ಪಾವತಿಸಬೇಕಿದೆ. ಆದರೆ ಈ ಚೆಕ್‌ ಯಾವುದೇ ಕಾರಣಕ್ಕೂ ವಾಪಸ್ಸಾಗುವಂತಿಲ್ಲ. ಆದದ್ದೇ ಆದಲ್ಲಿ ಕ್ರಮ ಖಚಿತ ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಸಿದೆ. ಜೊತೆಗೆ ಜು.15ಕ್ಕೂ ಮೀರಿ ಪೆರೋಲ್‌ ವಿಸ್ತರಣೆಗೆ ನಿರಾಕರಿಸಿದೆ. ಆದಾಗ್ಯೂ ಚೆಕ್‌ ಕ್ಲಿಯರೆನ್ಸ್‌ಗೆ ಆ.15ರವರೆಗೆ ಸಮಯ ನೀಡಬೇಕು ಎಂದು ಸುಬ್ರತೋ ಪರ ವಕೀಲ ಕಪಿಲ್‌ ಸಿಬಲ್‌ ಮನವಿ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next