Advertisement

ಸುಬ್ರಹ್ಮಣ್ಯ ರಸ್ತೆ –ಮಂಗಳೂರಿಗೆ ಹೆಚ್ಚುವರಿ ರೈಲು ಓಡಾಟ ಅಗತ್ಯ

02:50 AM Jul 10, 2017 | Harsha Rao |

ಪುತ್ತೂರು: ಮಂಗಳೂರು- ಕಬಕ ಪುತ್ತೂರು- ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣಗಳ ನಡುವಣ ಓಡಾಟ ನಡೆಸುವ ಲೋಕಲ್‌ ರೈಲು ಬಂಡಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಹೆಚ್ಚುವರಿ ರೈಲುಗಳ ಬೇಡಿಕೆಗೆ ಜೀವ ಬಂದಿದೆ.
ಮಂಗಳೂರು – ಕಾಸರಗೋಡು – ಚೆರ್ವತ್ತೂರು ನಡುವಣ ಸಂಚರಿ ಸುವ ಲೋಕಲ್‌ ರೈಲು ಬಂಡಿ ಗಳಲ್ಲಿರುವಂತೆಯೇ ಮಂಗಳೂರು-ಸುಬ್ರಹ್ಮಣ್ಯ ರಸ್ತೆ ನಡುವೆ ಓಡುವ ರೈಲುಗಳ ಐದೂ ಬೋಗಿಗಳು ಸದಾ ತುಂಬಿ ತುಳುಕುತ್ತಿವೆ. ಇದುವರೆಗೂ ಈ ಮಾರ್ಗದಲ್ಲಿ ಓಡುವ ಎರಡು ಲೋಕಲ್‌ ರೈಲು ಬಂಡಿಗಳು ಖಾಲಿ ಓಡಿದ ಉದಾಹರಣೆಗಳಿಲ್ಲ. ಆದರೂ ರೈಲು ಇಲಾಖೆ ಹೆಚ್ಚುವರಿ ರೈಲುಗಳನ್ನು ಬಿಡುವ ಬಗ್ಗೆ ಯೋಚಿ ಸದಿರುವುದು ಅಚ್ಚರಿಗೆ ಕಾರಣವಾಗಿದೆ.

Advertisement

ಕುಂಟು ನೆಪ
ಮಂಗಳೂರು-ಕಬಕ ಪುತ್ತೂರು- ಸುಬ್ರಹ್ಮಣ್ಯ ರಸ್ತೆ ನಡುವಣ ಇನ್ನು ಎರಡು ಹೆಚ್ಚುವರಿ ರೈಲುಗಳನ್ನು ಓಡಿಸಿದರೂ ಪ್ರಯಾ ಣಿ ಕರಿದ್ದಾರೆ. ಆದರೆ ರೈಲ್ವೆ ಇಲಾ ಖೆಯು ಗೂಡ್ಸ್‌ ರೈಲುಗಳ ಓಡಾಟ, ಮಂಗಳೂರು ಜಂಕ್ಷನ್‌ನಲ್ಲಿ ಕ್ರಾಸಿಂಗ್‌ ಸಮಸ್ಯೆ ಮೊದಲಾದ ಕುಂಟು ನೆಪ ಹೇಳಿ ಪ್ರಯಾಣಿಕರ ಬೇಡಿಕೆ ಯನ್ನು ತಳ್ಳಿ ಹಾಕುತ್ತಿದೆ. ಜನಪ್ರತಿನಿಧಿಗಳೂ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಪ್ರಯಾಣಿಕರ ಆರೋಪ.

ರೈಲನ್ನೇ ಅವಲಂಬಿಸಿರುವರು
ಮಂಗಳೂರು – ಹಾಸನ ಮೀಟರ್‌ ಗೇಜ್‌ ಇದ್ದಾಗಲೂ ಒಂದೇ ಲೋಕಲ್‌ ರೈಲು ಓಡುತ್ತಿತ್ತು. ಗೇಜ್‌ ಪರಿವರ್ತನೆಯಾದ ಬಳಿಕ ಮಂಗಳೂರು- ಕಬಕ ಪುತ್ತೂರು ನಡುವಣ ಎರಡು ಲೋಕಲ್‌ ರೈಲುಗಳು, ಮಂಗಳೂರು- ಕಬಕ ಪುತ್ತೂರು – ಸುಬ್ರಹ್ಮಣ್ಯ ರಸ್ತೆ ನಡುವಣ ಒಂದು ಲೋಕಲ್‌ ರೈಲು ನಿತ್ಯವೂ ಸಂಚರಿಸುತ್ತಿವೆ. 

ಸುಬ್ರಹ್ಮಣ್ಯ ಯಾತ್ರಾರ್ಥಿಗಳಿಗೆ, ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕುಗಳ ಪ್ರಯಾ ಣಿಕರಿಗೆ ಮಂಗಳೂರಿಗೆ ತೆರಳಲು ಇವುಗಳಿಂದ ಅನು ಕೂಲವಾಗುತ್ತಿದೆ. ಪ್ರಯಾಣ ದರದೊಂದಿಗೆ ಪ್ರಯಾಣ ಅವಧಿಯೂ ಕಡಿಮೆ ಇರುವುದರಿಂದ ಹೆಚ್ಚು ಜನರು ರೈಲನ್ನೇ ಅವಲಂಬಿಸಿದ್ದಾರೆ.

ಈಗ ಹೀಗಿದೆ ?
ಮಂಗಳೂರಿನಿಂದ ಬೆಳಗ್ಗೆ 6 ಗಂಟೆಗೆ ಹೊರಟ ರೈಲು 7.20ಕ್ಕೆ ಕಬಕ ಪುತ್ತೂರು ತಲುಪುತ್ತದೆ. 7.55ಕ್ಕೆ ಅಲ್ಲಿಂದ ಹೊರಟು 8.45ಕ್ಕೆ ಮಂಗಳೂರು ಜಂಕ್ಷನ್‌ಗೆ ತಲುಪುತ್ತದೆ. 9.15ಕ್ಕೆ ಮಂಗಳೂರು ಸೆಂಟ್ರಲ್‌ ತಲು ಪುತ್ತದೆ. 10 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟ ರೈಲು ಮಧ್ಯಾಹ್ನ 12ಕ್ಕೆ ಸುಬ್ರಹ್ಮಣ್ಯ ರಸ್ತೆ ತಲುಪುತ್ತದೆ. ಅಲ್ಲಿಂದ 1.20ಕ್ಕೆ ಹೊರಟು 4 ಗಂಟೆಗೆ ಮಂಗಳೂರಿಗೆ ತಲುಪುತ್ತದೆ. ಮಂಗಳೂರಿನಿಂದ ಸಂಜೆ 6.25ಕ್ಕೆ ಹೊರಟ ರೈಲು ಕಬಕ ಪುತ್ತೂರಿಗೆ 7.30ಕ್ಕೆ ತಲುಪುತ್ತದೆ. 7.50ಕ್ಕೆ ಕಬಕ ಪುತ್ತೂರಿನಿಂದ ಹೊರಟ ರೈಲು 9.10ಕ್ಕೆ ಮಂಗಳೂರು ಸೆಂಟ್ರಲ್‌ ತಲುಪುತ್ತದೆ.

Advertisement

ವಿಳಂಬ ನಿವಾರಣೆಯಾಗಬೇಕು
ಲೋಕಲ್‌ ರೈಲು ಬಂಡಿ ಮಂಗಳೂರು ಜಂಕ್ಷನ್‌ನಿಂದ ಕೇಂದ್ರ ನಿಲ್ದಾಣಕ್ಕೆ ತೆರಳುವಾಗ ಆಗುವ ವಿಳಂಬ ವನ್ನೂ ನಿವಾರಿಸಬೇಕಿದೆ. ಇದು ಸರಿಯಾದರೆ ಪ್ರಯಾಣಿಕರಿಗೆ ಮತ್ತಷ್ಟು ಪ್ರಯೋ ಜನವಾಗಲಿದೆ ಎನ್ನುತ್ತಾರೆ ಪ್ರಯಾಣಿಕರು. 

ಹೀಗೆ ಮಾಡಬಹುದು
ಮಂಗಳೂರಿನಿಂದ ಸಂಜೆ 6.25ಕ್ಕೆ ಹೊರಟ ರೈಲು ಬಂಡಿ ನೇರ ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣ ತನಕ ತೆರಳಿ ಅಲ್ಲಿ ತಂಗಬೇಕು. ಮರುದಿನ ಬೆಳಗ್ಗೆ 6.15ಕ್ಕೆ ಅಲ್ಲಿಂದ ಹೊರಟು ಕಬಕ ಪುತ್ತೂರು ಮೂಲಕ ಮಂಗಳೂರಿಗೆ ತಲುಪಬೇಕು. 
ಬೆಳಗ್ಗೆ 6.15ಕ್ಕೆ ಮಂಗಳೂರಿನಿಂದ ಕಬಕ ಪುತ್ತೂರು ಮೂಲಕ ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣಕ್ಕೆ ಇನ್ನೊಂದು ರೈಲು ಹೊರಡಬೇಕು. ಈ ರೈಲು ಸುಬ್ರಹ್ಮಣ್ಯದಿಂದ ಬೆಳಗ್ಗೆ 9ಕ್ಕೆ ಹೊರಟು ಮಂಗಳೂರಿಗೆ 11 ಗಂಟೆಗೆ ತಲುಪಬೇಕು. 12 ಗಂಟೆಗೆ ಅಲ್ಲಿಂದ ಮತ್ತೆ ಸುಬ್ರಹ್ಮಣ್ಯ ರಸ್ತೆ ಕಡೆಗೆ ಮರು ಯಾನ ಆರಂಭಿಸಬೇಕು. ಅಪರಾಹ್ನ 3 ಗಂಟೆಗೆ ಅಲ್ಲಿಂದ ಹೊರಟು 5 ಗಂಟೆಗೆ ಮಂಗಳೂರು ತಲುಪಬೇಕು. ಸಂಜೆ 6.25ಕ್ಕೆ ಮಂಗಳೂರಿನಿಂದ ಮತ್ತೆ ಕಬಕ ಪುತ್ತೂರು ಮಾರ್ಗವಾಗಿ ಸುಬ್ರಹ್ಮಣ್ಯ ರಸ್ತೆಗೆ ರೈಲು ಸಂಚರಿಸಿದರೆ ಅನುಕೂಲವಾಗಲಿದೆ. ಇದರೊಂದಿಗೆ ಈಗಿರುವ ಬೋಗಿಗಳ ಸಂಖ್ಯೆ 5 ರಿಂದ 9ಕ್ಕೆ ಏರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

– ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next