Advertisement

ಪಾಕ್ ಅನ್ನು ವಿಭಜಿಸುವುದೇ ಉತ್ತಮ : ಸ್ವಾಮಿ ಅಭಿಪ್ರಾಯ

07:02 AM Mar 01, 2019 | Karthik A |

ಪಾಕಿಸ್ಥಾನವೆಂಬ ಉಗ್ರಗಾಮಿ ಪೋಷಣಾ ದೇಶದ ದ್ವಂದ್ವ ನೀತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಟಾಬಯಲು ಮಾಡುವಲ್ಲಿ ಭಾರತ ರಾಜತಾಂತ್ರಿಕವಾಗಿ ಯಶಸ್ವಿಯಾಗಿದೆ. ಭಾರತದ ಚತುರ ರಾಜತಾಂತ್ರಿಕ ನಡೆಗಳಿಂದ ಪಾಕಿಸ್ಥಾನ ಈಗಾಗಲೇ ಕಂಗಾಲಾಗಿ ಹೋಗಿದ್ದು ವಿಶ್ವಮಟ್ಟದಲ್ಲಿ ಏಕಾಂಗಿಯಾಗಿದೆ. ಇನ್ನು ಯುದ್ಧವನ್ನು ಎದುರಿಸುವ ಸ್ಥಿತಿಯಲ್ಲಂತೂ ಆ ದೇಶವಿಲ್ಲ.

Advertisement

ಇದೀಗ ಪಾಕಿಸ್ಥಾನದ ಒಳಭಾಗದಲ್ಲೇ ದೇಶವಿಭಜನೆಯ ಕೂಗು ಬಲವಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಭಾರತೀಯ ಜನತಾ ಪಕ್ಷದ ನಾಯಕ ಸುಬ್ರಮಹ್ಮಣ್ಯ ಸ್ವಾಮಿ ಅವರು ಟ್ವೀಟ್ ಒಂದನ್ನು ಮಾಡಿದ್ದು, ‘ಪಾಕಿಸ್ಥಾನವನ್ನು 4 ಭಾಗಗಳಾಗಿ ವಿಭಜಿಸುವುದೇ ಸೂಕ್ತ. ಪಾಕಿಗಳಿಗೆ ಆಡಳಿತ ನಡೆಸುವುದು ಹೇಗೆಂದು ತಿಳಿದಿಲ್ಲ ಮಾತ್ರವಲ್ಲದೇ ಅವರು ಬಲೂಚಿಗಳನ್ನು, ಸಿಂಧಿಗಳನ್ನು ಮತ್ತು ಪಾಖ್ತೂನೀಗಳನ್ನು ಗುಲಾಮರ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾರೆ. ಮತ್ತು ಕಳೆದ ಒಂದು ವಾರದಲ್ಲಿ ಕಾಶ್ಮೀರದಲ್ಲಿ ಜನರು ದಂಗೆ ಏಳದಿರುವುದು ಪಾಕಿಸ್ಥಾನದವರ ಎದೆ ಒಡೆಯಲು ಕಾರಣವಾಗಿದೆ’ ಎಂದು ಅವರು ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next