Advertisement
ಪ್ರಕರಣ 1:ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ದೇವಸ್ಯ ಮಾಯಿಲಪ್ಪ ಗೌಡ ಎಂಬವರ ಪುತ್ರಿ ತೀರ್ಥಲತಾ (23) ನಾಪತ್ತೆಯಾದ ಮಹಿಳೆ. ತೀರ್ಥಲತಾ ಅವರನ್ನು ಗದಗ ಜಿಲ್ಲೆಯ ಮುಂಡರಗಿಗೆ ಮದುವೆ ಮಾಡಿ ಕೊಡಲಾಗಿದ್ದು, ಅವರಿಗೆ ಗಂಡು ಮಗು ಇದೆ. ಬಿಳಿನೆಲೆ ಮನೆಯಲ್ಲಿದ್ದ ಅವರು ಜು. 31ರಂದು ಮಧ್ಯಾಹ್ನ ಸುಬ್ರಹ್ಮಣ್ಯದ ಆಸ್ಪತ್ರೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದು ಸಂಜೆಯಾದರೂ ಮನೆಗೆ ಬಂದಿಲ್ಲ. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ಮಹಿಳೆಯ ತಂದೆ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರದ ಆಂದ್ರಹಳ್ಳಿ ನಿವಾಸಿ ರಾಜಶೇಖರ್ ಅವರ ಪತ್ನಿ ಹರ್ಷಿತಾ (28) ಹಾಗೂ ಮಗ ಭಗತ್ (3) ನಾಪತ್ತೆಯಾದವರು. ರಾಜಶೇಖರ್ ಅವರು ಪತ್ನಿ, ಮಗ ಹಾಗೂ ಸ್ನೇಹಿತರೊಂದಿಗೆ ಜು. 31ರಂದು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದು, ಮಧ್ಯಾಹ್ನ ಆದಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಬಳಿಕ ಖರೀದಿಗೆ ಅಂಗಡಿಗೆ ತೆರಳಿದ್ದು, ಈ ವೇಳೆ ರಾಜಶೇಖರ್ ಅವರ ಪತ್ನಿ, ಮಗ ನಾಪತ್ತೆಯಾಗಿದ್ದು, ಹುಡುಕಾಡಿದರೂ ಪತ್ತೆಯಾಗಿಲ್ಲ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಲಾಗಿದ್ದು, ನಾಪತ್ತೆ ಪ್ರಕರಣ ದಾಖಲಾಗಿದೆ.