ಮಂಗಳೂರು/ ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಬುಧವಾರವೂ ಉತ್ತಮ ಮಳೆಯಾಗಿದೆ. ಸುಬ್ರಹ್ಮಣ್ಯ, ಸುಳ್ಯ ತಾಲೂಕಿನಲ್ಲಿ ಗುಡುಗು, ಮಿಂಚು ಸಹಿತ ಮಳೆ ಬಂದಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ಪರಿಸರದಲ್ಲಿ ಬೆಳಗ್ಗೆ ತುಂತುರು ಮಳೆಯಾಗಿದೆ.
ಸುಬ್ರಹ್ಮಣ್ಯದಲ್ಲಿ ಮಿಂಚು ಸಹಿತಮಳೆಯಾಗಿದೆ. ಕೊಲ್ಲಮೊಗ್ರು ಪರಿಸರದಲ್ಲಿ ಉತ್ತಮ ಮಳೆ ಯಾಗಿದೆ. ಸುಳ್ಯ ತಾಲೂಕಿನಲ್ಲಿ ಮಧ್ಯಾಹ್ನವೇ ಮಳೆ ಆರಂಭವಾ ಗಿದ್ದು, ಬಳಿಕ ಕಡಿಮೆಯಾಗಿತ್ತು. ಸಂಜೆ ಮತ್ತೆ ಮಳೆ ಸುರಿದಿದೆ.
ಅರಂತೋಡು, ಗುತ್ತಿಗಾರು, ಪಂಜ ಪ್ರದೇಶಗಳಲ್ಲಿ ಉತ್ತಮ ಮಳೆಯಾದರೆ, ಬೆಳ್ಳಾರೆ, ನಿಂತಿಕಲ್ಲು ಪ್ರದೇಶದಲ್ಲಿ ಸಂಜೆ ಮಳೆ ಬಂದಿದೆ. ಬೆಳ್ತಂಗಡಿಯಲ್ಲಿ ತುಂತುರು ಮಳೆಯಾಗಿದೆ. ಮಂಗಳೂರಿನಲ್ಲಿ ಮಧ್ಯಾಹ್ನವರೆಗೆ ಬಿಸಿಲಿನ ವಾತಾವರಣವಿದ್ದು, ಸಂಜೆ ಮೋಡ ಕವಿದ ವಾತಾವರಣವಿತ್ತು.
ಎರಡು ದಿನ ಮಳೆ ಸಾಧ್ಯತೆ
ಮುಂಗಾರು ಪೂರ್ವ ಬೆಳಗ್ಗೆ ಹೊತ್ತಿನಲ್ಲಿ ಬಿಸಿಲು, ಮೋಡ ಸಂಜೆ ಮಳೆ ಸಾಮಾನ್ಯ. ಮುಂದಿನ 2 ದಿನಗಳ ಕಾಲ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ.