ಬೆಳ್ತಂಗಡಿ: ಧರ್ಮ ಆಧರ್ಮದ ಕುರಿತು, ಪಾಪ ಪುಣ್ಯದ ಮೇಲೆ, ದೈವ ದೇವರ ಮೇಲೆ ನಂಬಿಕೆ ಇಲ್ಲದವರಿಂದ ಸಮಾಜ ಸ್ಥಿರವಾಗಿರಲು ಸಾಧ್ಯವಿಲ್ಲ. ಆದ್ದರಿಂದ ಅತೀಂದ್ರಿಯಗಳ ಮೇಲೆ ನಂಬಿಕೆ ಇಟ್ಟು ಸಮಾಜ ಉದ್ಧಾರಕರಾಗಿ ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಅವರು ಲಾೖಲ ಗ್ರಾಮದ ಚಂದೂRರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಾಮಾಜಿಕ ವ್ಯವಸ್ಥೆಯ ಹಿಂದೆ ದೈವೀ ಕಲ್ಪನೆ ಇಲ್ಲದಿದ್ದರೆ ಧರ್ಮ ಸ್ಥಿರವಾಗಿ ನಿಲ್ಲಲು ಸಾಧ್ಯವಿಲ್ಲ. ತಪ್ಪಾದಾಗ ಶಕ್ತಿಯ ಪ್ರಾರ್ಥನೆ ಬರಬೇಕಾದರೆ ಅದು ಧರ್ಮ ದೇವರ ಆರಾಧನೆಯಿಂದ ಸಾಧ್ಯ. ಸಮಾಜದಲ್ಲಿ ಧರ್ಮ ದೇವರು ಸ್ಥಾನ ಕಳೆದುಕೊಂಡಾಗ ಆ ಸಮಾಜ ಉಳಿಯಲು ಸಾಧ್ಯವಿಲ್ಲ. ಅದಕ್ಕೋಸ್ಕರ ಬದುಕಿನುದ್ದಕ್ಕೂ ಸಾಂಸ್ಕೃತಿಕ ಹಾಗೂ ಪಾರಂಪರಿಕ ಆಚರಣೆಗಳು ಬೇಕು ಎಂದರು.
ಗಣ್ಯರಾದ ಧನಂಜಯ ಅಜ್ರಿ ನಡಗುತ್ತು, ಶಾಸಕ ಹರೀಶ ಪೂಂಜ, ಧನಂಜಯ ರಾವ್, ಗಿರೀಶ್ ಡೋಂಗ್ರೆ, ವೀಣಾ ರಾವ್, ಗಣೇಶ್ ಐತಾಳ ದಂಪತಿ, ಬೈಲುವಾರು ಸಮಿತಿ ಮಹಿಳಾ ಸಂಚಾಲಕರು, ಸಹಸಂಚಾಲಕರು ಮತ್ತಿತರರು ಉಪಸ್ಥಿತರಿದ್ದರು.
ಅರವಿಂದ ಶೆಟ್ಟಿ ನಿರೂಪಿಸಿದರು. ಮಹೇಶ್ ಸ್ವಾಗತಿಸಿದರು. ನಿರಂಜನ್ ಜೈನ್ ವಂದಿಸಿದರು.