Advertisement
ನಾರಾಯಣನ ಮಗ ಮನ್ಮಥ (ಕಾಮ)ನೇ ಚತುರ್ಮುಖನ ಮಗ ಸನತುRಮಾರನು. ಇವನೇ ಶಿವಪಾರ್ವತಿಯರ ಮಗ ಸುಬ್ರಹ್ಮಣ್ಯ. ಇವನಿಗೆ ಆರು ಮುಖವಿರುವ ಕಾರಣ ಷಣ್ಮುಖನು ಎನಿಸಿದ್ದಾನೆ.
Related Articles
Advertisement
ಪರಿವಾರ ದೇವತೆಗಳುವಿರಿಂಚನು ದೇವತೆಗಳ ಸೇನಾಪತ್ಯದಲ್ಲಿ ಸ್ಕಂದನನ್ನು ಅಭಿಷೇಕಗೈದಾಗ ನಾರಾಯ ಣನು ಚಕ್ರ ವಿಕ್ರಮ ಸಂಕ್ರಮರನ್ನು ಪಾರಿಷದರನ್ನಾಗಿ ಸ್ಕಂದನಿಗೆ ನೀಡಿದನು. ಅದರಂತೆ ಉಳಿದ ಬ್ರಹ್ಮ, ವಾಯು, ಶಿವ, ಪಾರ್ವತಿ, ಅಗ್ನಿಯೇ ಮೊದಲಾದ ದೇವತೆ ಗಳೆಲ್ಲರೂ ಸೇವಕರನ್ನು ಕಾಣಿಕೆಯಿತ್ತರು. ಸುಬ್ರಹ್ಮಣ್ಯನ ಆರಾಧನೆ
ಶಿವನ ತೇಜಸ್ಸನ್ನು ಅಗ್ನಿ ಸಹಿಸಲಾಗದೆ ಗಂಗೆಯಲ್ಲಿ ಚೆಲ್ಲಿದನು. ಗಂಗೆ ಧಾರಣೆ ಮಾಡಲಾಗದೆ ಹಿಮಾಲಯದ ತಪ್ಪಲಲ್ಲಿ ಹುಲ್ಲಿನ ಹಾಸಿನಲ್ಲಿ ಒರೆಸಿದಳು. ಬಿದಿಗೆಯಲ್ಲಿ ಬೆಳಕು ಕಂಡ ತದಿಗೆಯಲ್ಲಿ ಮಗುವಾದ ಚೌತಿಯಲ್ಲಿ ತುಂಬಿನಿಂತ ಮಗುವಿನ ಬಳಿಗೆ ಬಂದು ಆರು ಕೃತ್ತಿಕೆ ಯರು ಹಾಲುಣಿಸಿದರು. ಪಂಚಮಿ ಯಂದು ಎಲ್ಲ ದೇವತೆಯರು ಸ್ತುತಿಸಿದ್ದಾರೆ. ಪಕ್ಕದ ಬೆಟ್ಟಗಳು ಮಗುವಿನ ತೇಜಸ್ಸಿನಿಂದ ಬಂಗಾರವಾದವು. ಅಗ್ನಿ ಪುತ್ರನಾದ ಸ್ಕಂದನ ಈ ದಿವ್ಯಶಕ್ತಿಗಾಗಿ ಸುವರ್ಣದಾನವನ್ನು ವಿಧಿಸಿದ್ದಾರೆ.
ಷಷ್ಠಿಯಂದು ಸರಸ್ವತೀ ತೀರದಲ್ಲಿ ಅಭಿಷಿಕ್ತನಾದ ಸ್ಕಂದನಿಗೆ ವಿಧಿ ಕೃಷ್ಣಾಜಿನ ವನ್ನು ಕೊಟ್ಟನು. ವಿಷ್ಣು ವೈಜಯಂತಿ ಮಾಲೆ ನೀಡಿದ. ರುದ್ರ ಮಹಾಘಂಟೆ, ಪತಾಕೆ, ಮೂವತ್ತು ಸಾವಿರ ಯೋಧರ ಧನಂಜಯ ಸೇನೆ ನೀಡಿದ. ಪಾರ್ವತಿ ಕೆಂಪೆರಡು ಬಟ್ಟೆ ನೀಡಿದಳು. ಗರುಡನು ಮಯೂರನನ್ನು ನೀಡಿದ. ಇಂದ್ರ ಭದ್ರ ಶಾಖಾ ಎಂಬ ಶಕ್ತಿ ಆಯುಧ ನೀಡಿದ. ಅರುಣ ತಾಮ್ರಚೂಡನೆಂಬ ಕೆಂಪುಕೋಳಿಯನ್ನು ನೀಡಿದ. ಹಿಮಾಲಯ ರತ್ನಪೀಠ ನೀಡಿದ. ವಿಶ್ವಾಮಿತ್ರ ಸಂಸ್ಕಾರ ಮಾಡಿದ. ಗುರು ಅಭಿಷೇಕದ ಹೋಮ ಮಾಡಿ ದಂಡ ನೀಡಿದ. ಗಂಗೆ ಕಮಂಡಲು ಕೊಟ್ಟಳು. ಇಂದ್ರ ನೀಡಿದ ದೇವಸೇನೆ ಯಾದ ಷಷ್ಠಿàದೇವಿಯನ್ನು ಮಡದಿಯನ್ನಾಗಿ ಪಡೆದ ಸ್ಕಂದನು ಎಲ್ಲ ದೇವತೆ ಗಳ ಸಹಾಯದಿಂದ ಬಹು ರೂಪದ ಬಹುಭಾಷೆಯ ತನ್ನ ಅನುಯಾಯಿ ಗಳಿಂದ ಕೂಡಿಕೊಂಡು ಲಕ್ಷದೈತ್ಯರೊಡನೆ ಬಂದ ತಾರಕನನ್ನು, ಅಷ್ಟಪದ್ಮದೈತ್ಯರ ಮಹಿ ಷನನ್ನು, ಕೋಟಿದೈತ್ಯರ ತ್ರಿಪಾದನನ್ನು, ದಶನಿಖರ್ವ ದೈತ್ಯರ ಹ್ರದೋದರನನ್ನೂ ಸಂಹರಿಸಿ ಲೋಕಕ್ಕೆ ಮಂಗಳವನ್ನು ನೀಡಿದ. ಷಷ್ಠಿಯಂದು ಸುಬ್ರಹ್ಮಣ್ಯನನ್ನು ಅವ ನೊಳಗಿನ ಪ್ರದ್ಯುಮ್ನ ನಾರಾಯಣನನ್ನು ಪ್ರಾರ್ಥಿಸಿರಿ. – ಡಾ| ರಾಮನಾಥ ಆಚಾರ್ಯ