Advertisement

ಇಂದು ನಾಡಿನೆಲ್ಲೆಡೆ ಸುಬ್ರಹ್ಮಣ್ಯ ಷಷ್ಠಿ

01:50 AM Dec 09, 2021 | Team Udayavani |

ಉಡುಪಿ/ಮಂಗಳೂರು/ಸುಬ್ರಹ್ಮಣ್ಯ: ಬುಧವಾರ ವಿವಿಧ ನಾಗ ಮತ್ತು ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಸ್ಕಂದ ಪಂಚಮಿ ಉತ್ಸವ ನಡೆಯಿತು. ಗುರುವಾರ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಜರಗಲಿದೆ.

Advertisement

ದೇವಸ್ಥಾನಗಳಲ್ಲಿ ವಿಶೇಷ ಅಭಿಷೇಕಗಳು, ಸಂತರ್ಪಣೆ, ಪೂಜೆ, ಉತ್ಸವಾದಿಗಳು ನಡೆಯಲಿವೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಉತ್ಸವದ ಅಂಗವಾಗಿ ಡಿ. 9ರ ಬೆಳಗ್ಗೆ 6.58ರ ವೃಶ್ಚಿಕ ಲಗ್ನ ಸುಮೂಹುರ್ತದಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ಬ್ರಹ್ಮರಥಾರೋಹಣ ನಡೆಯಲಿದೆ.

ಚಿಕ್ಕ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾಗಲಿದ್ದಾರೆ. ಅನಂತರ ಸುವರ್ಣ ವೃಷ್ಟಿಯಾಗಿ ಚಿಕ್ಕ ರಥೋತ್ಸವ, ಚಂಪಾಷಷ್ಠಿ ಮಹಾರಥೋತ್ಸವ ಜರಗಲಿದೆ.

ಪಾಸ್‌ ವ್ಯವಸ್ಥೆ
ಕುಕ್ಕೆ ಕ್ಷೇತ್ರವು ವಿದ್ಯುದ್ದೀಪಾಲಂಕಾರದಿಂದ ಶೋಭಿಸುತ್ತಿದೆ. ಈ ಹಿಂದೆ ಬ್ರಹ್ಮರಥ ಎಳೆದ ಬೆತ್ತವನ್ನು ಭಕ್ತರು ತುಂಡು ಮಾಡಿ ಪ್ರಸಾದ ರೂಪದಲ್ಲಿ ಮನೆಗಳಿಗೆ ಕೊಂಡೊಯ್ಯುತ್ತಿದ್ದರು.

Advertisement

ಇದನ್ನೂ ಓದಿ:ನಿರಂತರ ಅಧ್ಯಯನ ಶೀಲ : ಮರೆಯಾದ ಮೇರು ಮಿಲಿಟರಿ ಸಾಧಕ ರಾವತ್

ಅದಕ್ಕಾಗಿ ಭಾರೀ ಪೈಪೋಟಿ ನಡೆಯುತ್ತಿದ್ದ ಕಾರಣ ಮತ್ತು ಪ್ರಸ್ತುತ ಕ್ಷೇತ್ರದಲ್ಲಿ ದಾಖಲೆಯ ಸೇವೆಗಳು ನೆರವೇರುವುದರಿಂದ ಪ್ರಸಾದದಲ್ಲಿ ಉಪಯೋಗಿಸಲು ಬೆತ್ತ ಕಡಿಮೆಯಾಗಬಾರದು ಎಂಬ ಕಾರಣದಿಂದ ಆ ಬೆತ್ತವನ್ನು ಕ್ಷೇತ್ರದಲ್ಲೇ ಉಳಿಸಿಕೊಳ್ಳಲಾಗುತ್ತದೆ. ರಥ ಎಳೆಯಲು ನೂಕು ನುಗ್ಗಲು ಉಂಟಾಗುವುದನ್ನು ತಪ್ಪಿಸಲು ರಥ ಎಳೆಯುವವರಿಗೆ ಪಾಸ್‌ ವ್ಯವಸ್ಥೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next