Advertisement

ಸುಬ್ರಹ್ಮಣ್ಯ ಕೆಎಸ್‌ಎಸ್‌ ಕಾಲೇಜಿನಲ್ಲಿ  ಕಲಾಹಬ್ಬ

04:23 PM Jan 06, 2018 | |

ಸುಬ್ರಹ್ಮಣ್ಯ: ದೇಶಕ್ಕೆ ಬದ್ಧರಾಗಿ ಬದುಕುವ ಜೀವನ ನಮ್ಮದಾಗಬೇಕು. ವಿದ್ಯಾರ್ಥಿಗಳು ಕಲಿಕೆ ಜತೆ ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದು ಪತ್ರಕರ್ತೆ ಚೈತ್ರಾ ಕುಂದಾಪುರ ಹೇಳಿದರು. ಸುಬ್ರಹ್ಮಣ್ಯ ಕೆಎಸ್‌ಎಸ್‌ ಕಾಲೇಜಿನಲ್ಲಿ ನಡೆದ ಅಂತಿಮ ಕಲಾ ಪದವಿ ವಿದ್ಯಾರ್ಥಿಗಳು ಆಯೋಜಿದ ಡ್ರೀಮ್ಸ್‌- 2018 ಅಂತರ್‌ ತರಗತಿ ಕಲಾಹಬ್ಬದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

Advertisement

ಕಲಿಕೆ ಜೀವನಕ್ಕೆ ಅತ್ಯವಶ್ಯಕ. ಆದರೆ ದೇಶಪ್ರೇಮ ಬೆಳೆಸಿಕೊಳ್ಳದೆ ಬದುಕು ನಮ್ಮದಾಗಬಾರದು ಎಂದರು. ಕಾಲೇಜು ಪ್ರಾಂಶುಪಾಲ ಪ್ರೊ| ರಂಗಯ್ಯ ಶೆಟ್ಟಿಗಾರ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಪ್ರೊ| ಮಂಜುನಾಥ ಭಟ್‌, ಅರ್ಥಶಾಸ್ತ್ರ ವಿಭಾಗದ ಪ್ರೊ| ತಿಲಕ್‌, ಸಂಚಾಲಕ ಪ್ರೊ| ಮನೋಹರ
ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕ ಅಜೇಯ ವಂದಿಸಿದರು. ವಿದ್ಯಾರ್ಥಿ ಕಿರಣ ಕಾರ್ಯಕ್ರಮ ನಿರ್ವಹಿಸಿದರು.

ಬೆಳಗ್ಗೆ ನಡೆದ ಉದ್ಘಾಟನೆ ಸಮಾರಂಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ, ಸಂಚಾಲಕ
ಮನೋಹರ ಉಪಸ್ಥಿತರಿದ್ದರು. ರಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ತಾರಕೇಶ್ವರಿ ಯು.ಎನ್‌., ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಮೋಹನದಾಸ್‌ ರೈ, ಉಪಸ್ಥಿತರಿದ್ದರು. ಡಾ| ಪ್ರಸಾದ್‌ ಎನ್‌. ವಂದಿಸಿದರು. ವಿದ್ಯಾರ್ಥಿಗಳಾದ ಶರಣ್ಯಾ, ಶ್ರಾವ್ಯಾ, ಕಾರ್ಯಕ್ರಮ ನಿರ್ವಹಿಸಿದರು.

ಸಮ್ಮಾನ
ಈ ವೇಳೆ ನಿವೃತ್ತ ಯೋಧರಾದ ತೀರ್ಥರಾಮ ಕುಳ, ಸುಂದರ ಗೌಡ ಮರಕತ, ವಾಸುದೇವ ಗೌಡ ಪರಮಲೆ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next