Advertisement

ಆರ್‌ಟಿಇ ತಂತ್ರಾಂಶ ದೋಷ ಎದುರಾದರೆ ದೂರು ಸಲ್ಲಿಸಿ

06:45 AM Mar 03, 2018 | Team Udayavani |

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಯಲ್ಲಿ ಲಭ್ಯವಿರುವ ಸೀಟುಗಳಿಗೆ ಅರ್ಜಿ ಸಲ್ಲಿಸುವ ತಂತ್ರಾಂಶದಲ್ಲಿ ಯಾವುದೇ ದೋಷ ಕಂಡುಬಂದಲ್ಲಿ ಆನ್‌ಲೈನ್‌ ಮೂಲಕ ದೂರು ಸಲ್ಲಿಸಬಹುದಾದ ವ್ಯವಸ್ಥೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಜಾರಿ ಮಾಡಿದೆ. ಅರ್ಜಿ ಸಲ್ಲಿಸುವ ವೇಳೆ ತಂತ್ರಾಂಶದಲ್ಲಿ ತೊಡಕುಂಟಾದಲ್ಲಿ (ಹೋಂ ಪೇಜ್‌)ಆರ್‌ಟಿಇ-2018 ಪೋರ್ಟಲ್‌ನಲ್ಲಿ ದೂರು ನೋಂದಾವಣೆ ಲಿಂಕ್‌ ಕ್ಲಿಕ್‌ ಮಾಡಿ ದೂರನ್ನು ಸಲ್ಲಿಸಬಹುದಾಗಿದೆ. 

Advertisement

ಮಾ.21ರ ವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇದೆ. ಮಾ.1ರ ಅಂತ್ಯಕ್ಕೆ 7427 ಅರ್ಜಿ ಸಲ್ಲಿಕೆಯಾಗಿದೆ ಎಂದು ಇಲಾಖೆ ತಿಳಿಸಿದೆ. ಅಗತ್ಯ ದಾಖಲೆ ಸಮೇತ ಬಿಇಒ ಕಚೇರಿ ಅಥವಾ ಉಪನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಬೆಂಗಳೂರು-1,ಕರ್ನಾಟಕ-1, ಎಜೆಎಸ್‌ಕೆ ಕೇಂದ್ರಗಳಲ್ಲಿ 15 ರೂ. ಪಾವತಿಸಿ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next