Advertisement

Lok Sabha election: ನಿನ್ನೆ 26 ಮಂದಿಯಿಂದ 30 ನಾಮಪತ್ರ ಸಲ್ಲಿಕೆ

09:51 PM Mar 30, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶನಿವಾರ 26 ಮಂದಿ ಅಭ್ಯರ್ಥಿಗಳು ಒಟ್ಟು 30 ನಾಮಪತ್ರ ಸಲ್ಲಿಸಿದ್ದಾರೆ. ಈವರೆಗೆ ಒಟ್ಟು 50 ಅಭ್ಯರ್ಥಿಗಳು 59 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

Advertisement

ಬೆಂಗಳೂರು ಗ್ರಾಮಾಂತರ-4, ಬೆಂಗಳೂರು ಉತ್ತರ-3, ಉಡುಪಿ ಚಿಕ್ಕಮಗಳೂರು, ತುಮಕೂರು, ಚಾಮರಾಜನಗರ, ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ದಕ್ಷಿಣ -2, ಹಾಸನ, ದಕ್ಷಿಣ ಕನ್ನಡ, ಮಂಡ್ಯ, ಮೈಸೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಓರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.

2.70 ಕೋಟಿ ರೂ. ಮೌಲ್ಯದ ಅಕ್ರಮ ವಶ :

ರಾಜ್ಯದಲ್ಲಿ ಚುನಾವಣ ನೀತಿ ಸಂಹಿತೆ ಜಾರಿ ತಂಡಗಳು ಕಳೆದ 24 ಗಂಟೆಯಲ್ಲಿ 2.70 ಕೋಟಿ ರೂ. ಮೌಲ್ಯದ ಚುನಾವಣ ಅಕ್ರಮವನ್ನು ಪತ್ತೆ ಹಚ್ಚಿವೆ. ತನ್ಮೂಲಕ ನೀತಿ ಸಂಹಿತೆ ಜಾರಿಯಾದಂದಿನಿಂದ 65.12 ಕೋಟಿ ರೂ. ಮೌಲ್ಯದ ಅಕ್ರಮವನ್ನು ಪತ್ತೆ ಹಚ್ಚಲಾಗಿದೆ.

ಶನಿವಾರ 99.78 ಲಕ್ಷ ರೂ.,  11.25 ಲಕ್ಷ ರೂ. ಮೌಲ್ಯದ ಉಚಿತ ಉಡುಗೊರೆ, 1.57 ಲಕ್ಷ ರೂ ಮೌಲ್ಯದ ಇತರ ಸೊತ್ತು, 1.42 ಕೋಟಿ ರೂ. ಮೌಲ್ಯದ 22,487 ಲೀಟರ್‌ ಮದ್ಯ, 13.01 ಲಕ್ಷ ರೂ ಮೌಲ್ಯದ 20.32 ಕೆಜಿ ಮಾದಕ ವಸ್ತು, 2.70 ಲಕ್ಷ ರೂ. ಮೌಲ್ಯದ 0.06 ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಈವರೆಗೆ ಒಟ್ಟು 21.85 ಕೋಟಿ ರೂ., 82,12 ಲಕ್ಷ ರೂ. ಮೌಲ್ಯದ ಉಚಿತ ಉಡುಗೊರೆಗಳು, 2.59 ಕೋಟಿ ರೂ. ಮೌಲ್ಯದ ಇತರ ಸೊತ್ತು, 28.69 ಕೋಟಿ ರೂ. ಮೌಲ್ಯದ 8.93 ಲಕ್ಷ ಲೀಟರ್‌ ಮದ್ಯ, 1.60 ಕೋಟಿ ರೂ. ಮೌಲ್ಯದ 231 ಕೆಜಿ ಮಾದಕ ವಸ್ತು, 9.18 ಕೋಟಿ ರೂ. ಮೌಲ್ಯದ 15.38 ಕೆಜಿ ಚಿನ್ನವನ್ನು ಜಪ್ತಿ ಮಾಡಲಾಗಿದೆ.

Advertisement

ಈವರೆಗೆ 1,030 ಎಫ್ಐಆರ್‌, ಅಬಕಾರಿ ಇಲಾಖೆ ಘೋರ ಅಪರಾಧ ಪ್ರಕರಣದಡಿ 1,023 ಪ್ರಕರಣ ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next