Advertisement

ವೇಲಾ ಪ್ರಾಯೋಗಿಕ ಪರೀಕ್ಷೆ ಆರಂಭ

09:13 AM May 10, 2019 | Hari Prasad |

ಮುಂಬೈ: ಐಎನ್‌ಎಸ್‌ ವೇಲಾ ಸಬ್‌ಮರೀನ್‌ನ ಪ್ರಾಯೋಗಿಕ ಪರೀಕ್ಷೆಯನ್ನು ನೌಕಾಪಡೆ ಸೋಮವಾರ ಆರಂಭಿಸಿದೆ. ಫ್ರೆಂಚ್‌ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಈ ಸಬ್‌ಮರೀನ್‌ ದೇಶದ ಕರಾವಳಿಯನ್ನು ರಕ್ಷಿಸುವಲ್ಲಿ ಅತ್ಯಂತ ಮಹತ್ವದ್ದಾಗಿದೆ. ಅಂತಿಮವಾಗಿ ನಿಯೋಜನೆಗೆ ಒಳಪಡಿಸುವುದಕ್ಕೂ ಮುನ್ನ ಹಲವು ರೀತಿಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

Advertisement

ಮುಂಬೈನಲ್ಲಿರುವ ಮಜಗಾಂವ್‌ ಡಾಕ್‌ಯಾರ್ಡ್‌ನಲ್ಲಿ ಪರೀಕ್ಷೆ ಆರಂಭಿಸಲಾಗಿದ್ದು, ಇದನ್ನು ಮಜಗಾಂವ್‌ ಶಿಪ್‌ ಬಿಲ್ಡರ್ಸ್‌ ಲಿಮಿಟೆಡ್‌ ತಯಾರಿಸಿದೆ. ಒಟ್ಟು ಆರು ಸಬ್‌ ಮರೀನ್‌ಗಳು ಇಲ್ಲಿ ನಿರ್ಮಾಣವಾಗುತ್ತಿದ್ದು, ಈ ಪೈಕಿ ಇದು ನಾಲ್ಕನೆಯದಾಗಿದೆ.

ಇದಕ್ಕೂ ಮುನ್ನ ಕಲವರಿ, ಖಂಡೇರಿ, ಕಾರಂಜ್‌ ಸಬ್‌ಮರೀನ್‌ಗಳನ್ನು ನಿಯೋಜಿಸಲಾಗಿದೆ. ಶೀಘ್ರದಲ್ಲೇ ಐದನೇ ಸಬ್‌ ಮರೀನ್‌ ಕೂಡ ಪರೀಕ್ಷಾರ್ಥ ಪ್ರಯೋಗಕ್ಕೆ ಸಿದ್ಧವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next