Advertisement

ಸಬ್‌ಮರಿನ್‌ ಪ್ರಾಜೆಕ್ಟ್ ಸಿದ್ಧ : 45 ಸಾವಿರ ಕೋಟಿ ರೂ. ವೆಚ್ಚದ ಯೋಜನೆ

12:10 AM Jun 21, 2019 | sudhir |

ಹೊಸದಿಲ್ಲಿ: ಕೇಂದ್ರ ಸರಕಾರವು ಈಗಾಗಲೇ ಯೋಜಿಸಿದ 45 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆರು ಸಬ್‌ಮರೀನ್‌ ನಿರ್ಮಾಣ ಯೋಜನೆ ಅಡಿ ಮಹತ್ವದ ಹೆಜ್ಜೆ ಇಟ್ಟಿದ್ದು, ಇನ್ನೊಂದು ಜಲಾಂತರ್ಗಾಮಿ ಉತ್ಪಾದನ ಘಟಕ ಸ್ಥಾಪಿಸಲು ನಿರ್ಧರಿಸಿದೆ. ಸದ್ಯ ಮುಂಬಯಿನ ಮಡಗಾಂವ್‌ ಡಾಕ್‌ಯಾರ್ಡ್‌ ನಲ್ಲಿ ಮೊದಲ ಹಂತದಲ್ಲಿ ಫ್ರೆಂಚ್‌ ಸಹಭಾಗಿತ್ವದಲ್ಲಿ ಸ್ಕಾಪೀìನ್‌ ಶ್ರೇಣಿಯ ಸಬ್‌ಮರೀನ್‌ ನಿರ್ಮಾಣ ಮಾಡಲಾಗುತ್ತಿದೆ.

Advertisement

ಕೇಂದ್ರ ಸರಕಾರ ಈಗ ಪ್ರಸ್ತಾವಿಸಿರುವ 2ನೇ ಹಂತದಲ್ಲಿ ವಿದೇಶಿ ಕಂಪೆನಿಗಳು ಭಾರತದ ಕಂಪೆನಿಯ ಸಹಭಾಗಿತ್ವದಲ್ಲಿ ಸಬ್‌ಮರೀನ್‌ ನಿರ್ಮಿಸಲಿವೆ. ಈ ಯೋಜನೆಯು ದೇಶೀ ವಿನ್ಯಾಸ ಮತ್ತು ನಿರ್ಮಾಣ ಸಾಮ ರ್ಥ್ಯಕ್ಕೆ ಮಹತ್ವದ ಉತ್ತೇಜನ ನೀಡಲಿದೆ. ಈ ಯೋಜನೆ ಯಶಸ್ವಿಯಾದರೆ ಜಗತ್ತಿನಲ್ಲೇ ಭಾರತವು ಸಬ್‌ಮರೀನ್‌ ನಿರ್ಮಾಣದ ಕೇಂದ್ರವಾಗಿ ಹೊರ ಹೊಮ್ಮ ಲಿದೆ. ಈಗಾಗಲೇ ಮೊದಲ ಹಂತದಲ್ಲಿ 6 ಜಲಾಂತ ರ್ಗಾಮಿಗಳನ್ನು ನಿರ್ಮಿ ಸಲಾಗುತ್ತಿದ್ದು, 2ನೇ ಹಂತದಲ್ಲಿ ಇನ್ನೂ 6 ಸಬ್‌ಮರೀನ್‌ಗಳ ನಿರ್ಮಾಣಕ್ಕೆ ಆರ್ಡರ್‌ ನೀಡುವ ಸಾಧ್ಯತೆಯಿದೆ.

ಸದ್ಯ ಈ ಯೋಜನೆಯಲ್ಲಿ ಆಸಕ್ತಿ ಹೊಂದಿರುವ ಭಾರತೀಯ ಕಂಪೆನಿಗಳನ್ನು ಗುರುತಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ಆಹ್ವಾನಿಸಲಾಗಿದೆ. ಮುಂದಿನ 2 ತಿಂಗಳಲ್ಲಿ ಆಸಕ್ತ ಕಂಪೆನಿಗಳು ತಮ್ಮ ಆಸಕ್ತಿ ಪ್ರಕಟಿಸಲು ಅವಕಾಶವಿದೆ. ಅನಂತರದ ಹಂತದಲ್ಲಿ ಸರಕಾರ ಬಿಡ್‌ ಕರೆಯಲಿದೆ. ಈ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಿದ್ದು, ಈ ಪ್ರಾಜೆಕ್ಟ್ ಅಡಿ ಸಬ್‌ಮರೀನ್‌ ನಿರ್ಮಾಣವಾಗಲು 5 ವರ್ಷಕ್ಕೂ ಹೆಚ್ಚಿನ ಅವಧಿ ತೆಗೆದುಕೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next