Advertisement

ಸುಬ್ರಹ್ಮಣ್ಯ ಮಠದ ವಿರುದ್ಧ ಆಪಾದನೆ; ಶ್ರೀಗಳಿಂದ ಉಪವಾಸ

10:30 AM Oct 14, 2018 | Team Udayavani |

ಸುಬ್ರಹ್ಮಣ್ಯ: ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ವಿರುದ್ಧ ಕೆಲವರು ನಡೆಸುತ್ತಿರುವ ಆಪಾದನೆಗಳಿಂದ ಬೇಸತ್ತು ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಯವರು ಶನಿವಾರದಿಂದ ಉಪವಾಸ ಆರಂಭಿಸಿದ್ದಾರೆ. 
“ಇದು ಯಾರ ವಿರುದ್ಧವೂ ಅಲ್ಲ; ಮನಸಿಗೆ ಆದ ನೋವಿನಿಂದ’ ಎಂದಿರುವ ಅವರು, ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಶ್ರೀ ಮಠದ ಸಂಬಂಧ ಚೆನ್ನಾ ಗಿರಬೇಕು ಎನ್ನುವುದು ನಮ್ಮ ಹಂಬಲ ಎಂದು ತಿಳಿಸಿದ್ದಾರೆ.

Advertisement

ಮಠದಲ್ಲಿ ಗೋಶಾಲೆ ಇದೆ. ಇದಕ್ಕೆ ಬೆಟ್ಟದಿಂದ ಸಹಜವಾಗಿ ಬರುವ ನೀರನ್ನು ಯಾರಿಗೂ ತೊಂದರೆಯಾಗದಂತೆ ತರಿಸುತ್ತಿದ್ದೆವು. ಇತ್ತೀಚೆಗೆ ಕೆಲವರು ಅದೂ ನಿಲ್ಲುವಂತೆ ಮಾಡಿದ್ದರಿಂದ ಹಸುಗಳಿಗೆ ನೀರಿಲ್ಲವಾಗಿದೆ. ನಮ್ಮ ಅನುಷ್ಠಾನಕ್ಕೂ ತೊಂದರೆಯಾಗುತ್ತಿದೆ ಎಂದರು.

ದೇವಸ್ಥಾನದ ರಸ್ತೆ ಅಭಿವೃದ್ಧಿಗೆ ಸಹಕರಿಸುತ್ತಿದ್ದರೂ ಅಪಪ್ರಚಾರ ನಿಂತಿಲ್ಲ. ಈ ಹಿಂದೆ ನೋಟಿಫೈ ಮಾಡಿದ ಕೆಲವು ಸ್ಥಳಗಳು ಕೋರ್ಟ್‌ನಲ್ಲಿ ಸ್ಟೇ ಆಗಿದ್ದು, ತೆರವಾಗಿಲ್ಲ. ಅದಕ್ಕೆ ಜಂಟಿಯಾಗಿ ಸ್ಥಳ ಗುರುತಿಸಲು ಅರ್ಜಿ ಹಾಕಿದರೆ ಅಂತಹ ಸ್ಥಳವನ್ನು ಕೂಡಲೇ ರಸ್ತೆ ಅಭಿವೃದ್ಧಿಗೆ ನೀಡುತ್ತೇವೆ ಎಂದರು. 

ಮಠದಲ್ಲಿ ಸರ್ಪಸಂಸ್ಕಾರ ಸಹಿತ ಕೆಲವು ಸೇವೆಗಳು ನಡೆಯುತ್ತಿರುವ ವಿಷಯದಲ್ಲಿ ಕೆಲವರು ಆರೋಪದಲ್ಲಿ ತೊಡಗಿದ್ದರು. ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನಕ್ಕೆ ಯಾವುದೇ ಮಠ ಮಂದಿರಗಳು ಇಲ್ಲ ಎಂದು ಸ್ಪಷ್ಟನೆ ನೀಡಿತ್ತು. ಇದಾದ ಮೇಲೂ ಮಠ ಹಾಗೂ ದೇವಸ್ಥಾನ ಪರವಿರುವ ಕೆಲವರು ಭಕ್ತರು ಪರಸ್ಪರ ಪೊಲೀಸ್‌ ಠಾಣೆಗೆ ದೂರು, ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದರು. 

ಉಪವಾಸ ಸ್ಥಗಿತಕ್ಕೆ ಪೇಜಾವರ ಶ್ರೀ ಮನವಿ
ಉಡುಪಿ: ಶ್ರೀ ವಿದ್ಯಾಪ್ರಸನ್ನತೀರ್ಥರು ತಮಗಾಗಿರುವ ತೊಂದರೆ, ಉಪಟಳಗಳ ಬಗ್ಗೆ ವಿಷಾದ ಪಟ್ಟು ಉಪವಾಸ ಆರಂಭಿಸಿ¨ªಾರೆಂಬುದನ್ನು ತಿಳಿದು ತುಂಬಾ ಕಳವಳವಾಗಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಗಳು ತಿಳಿಸಿದ್ದಾರೆ. ನವರಾತ್ರಿ ಮುಗಿದ ಕೂಡಲೇ ಸುಬ್ರಹ್ಮಣ್ಯಕ್ಕೆ ತೆರಳಿ ಸಂಬಂಧಪಟ್ಟ ಎಲ್ಲರನ್ನೂ ಸಂಪರ್ಕಿಸಿ ಸಮಸ್ಯೆಯನ್ನು ಬಗೆಹರಿಸಲು ವಿಶೇಷ ಪ್ರಯತ್ನ ಮಾಡಲಿದ್ದೇನೆ. ಎಂದು ಶ್ರೀಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next