Advertisement
ಸುಭಾಷರ ಹೋರಾಟ, ಬ್ರಿಟಿಷರಿಂದ ಬಂಧನ… ನಡೆದೇ ಇತ್ತು. ಆರೋಗ್ಯ ಹದಗೆಟ್ಟ ಕಾರಣ ತನ್ನನ್ನು ಯುರೋಪಿನ ಆಸ್ಪತ್ರೆಗೆ ಕಳುಹಿಸಿದ ಬ್ರಿಟಿಷರ ನಡೆಯನ್ನು ತನ್ನ ಸ್ವಾತಂತ್ರ್ಯ ಹೋರಾಟದ ಮೊದಲ ಮೆಟ್ಟಿಲಾಗಿ ಬಳಸಿಕೊಂಡರು. ಅಲ್ಪಕಾಲದಲ್ಲೇ ಚೇತರಿಸಿಕೊಂಡು, ವಿಯೆನ್ನಾದಲ್ಲಿ ಆಸ್ಟ್ರಿಯಾ-ಭಾರತ ಮೈತ್ರಿ ವೇದಿಕೆಯನ್ನು ಹುಟ್ಟು ಹಾಕಿದರು. 1936 ಎಪ್ರಿಲ್ 8ರಂದು ಯುರೋಪ್‌ನಿಂದ ಮರಳಿದಾಗ ಮತ್ತೆ ಬಂಧಿಸಿ ಅವರ ಪಾಸ್‌ಪೋರ್ಟ್‌ನ್ನು ಬ್ರಿಟಿಷ್ ಸರಕಾರ ರದ್ದು ಮಾಡಿತು. ಇದನ್ನು ವಿರೋಧಿಸಿ ದೇಶಾದ್ಯಂತ ನಡೆದ ಹರತಾಳಕ್ಕೆ ಮಣಿದ ಆಂಗ್ಲರು ಅವರನ್ನು ಬಿಡುಗಡೆ ಮಾಡಿದಾಗ ಸುಭಾಷರು ಮೊದಲು ಭೇಟಿಯಾಗಿದ್ದು ಸ್ವಾತಂತ್ರ್ಯ ವೀರ ಸಾವರ್ಕರ್ ಅವರನ್ನು. ಇದು ಬೋಸರ ಜೀವನದ ಮಹತ್ತರ ತಿರುವಿಗೆ ಕಾರಣವಾಯಿತು.
Related Articles
Advertisement
ಬ್ರಿಟಿಷರ ಹೆಡೆಮುರಿ ಕಟ್ಟಲು ಭಾರತದತ್ತ ಹೊರಟಿತು ನೇತಾಜಿಯವರ ಆಜಾದ್ ಹಿಂದ್ ಫೌಜ್ ಹಾಗೂ ಜಪಾನೀ ಸೇನೆ. 1944 ಎ.10ರ ವೇಳೆಗೆ ನಾಗಾಲ್ಯಾಂಡ್ ಹಾಗೂ ಮಣಿಪುರದ ಬಹುತೇಕ ಪ್ರದೇಶಗಳನ್ನು ಗೆದ್ದು ಅಲ್ಲಿ ಸ್ವತಂತ್ರ ಭಾರತದ ಧ್ವಜ ನೆಟ್ಟಿದ್ದರು ನೇತಾಜಿ. ಇರ್ರವಡಿ ನದಿಯನ್ನು ದಾಟಲು ಬಂದ ಆಂಗ್ಲರ ಸೇನೆಯನ್ನು ತಡೆದ ಭಾರತೀಯ ಹಾಗೂ ಜಪಾನೀ ಸೈನಿಕರಲ್ಲಿ ಆತ್ಮಸ್ಥೈರ್ಯವನ್ನು ತುಂಬಲು ಸ್ವತಃ ಬೋಸರೇ ಹಲವಾರು ದಿನ ರಣಾಂಗಣದಲ್ಲಿಯೇ ಉಳಿದರು. ಆಗಿನ ಸನ್ನಿವೇಶದಲ್ಲಿ ಆಜಾದ್ ಹಿಂದ್ ಸೇನೆ ಭಾರತದ 200ಚ.ಮೈಲಿ ಪ್ರದೇಶವನ್ನು ವಶಕ್ಕೆ ಪಡೆದುಕೊಂಡಿತ್ತು.
2ನೇ ವಿಶ್ವಯುದ್ಧದಲ್ಲಿ ಜಪಾನ್ ಅಮೆರಿಕದ ವಿರುದ್ಧ ಮುಂಡಿಯೂರಬೇಕಾದ ಅನಿವಾರ್ಯತೆ ಸೃಷ್ಟಿಯಾ ದಾಗ ಐ.ಎನ್.ಎ. ಒಂಟಿಯಾಯಿತು. ರಷ್ಯಾದ ಸಹಾಯ ಯಾಚಿಸಲು ನೇತಾಜಿ ಹೊರಟೇ ಬಿಟ್ಟರು. 1945 ಆ. 17, ದಕ್ಷಿಣ ವಿಯೆಟ್ನಾಂನ ಸೈಗಾನ್ ವಿಮಾನ ನಿಲ್ದಾಣದಿಂದ ಸಂಜೆ 5.30 ಸುಮಾರಿಗೆ ಹೊರಟು ತೈಪೇ ತಲುಪಿದರು ಸುಭಾಷ್. ಈ ವೇಳೆ ಅವರು ಪ್ರಯಾಣಿಸುತ್ತಿದ್ದ ವಿಮಾನ ದೊಡ್ಡ ಸ್ಫೋಟದೊಂದಿಗೆ ಭಸ್ಮವಾಯಿತು, ತೀವ್ರ ಗಾಯ ಗೊಂಡ ಸುಭಾಷರು ತೈಪೇ ಆಸ್ಪತ್ರೆಯಲ್ಲಿ ಕೊನೆಯು ಸಿರೆಳೆದರು ಎಂದು ಹೇಳುತ್ತಾರಾದರೂ ಇವತ್ತಿನವರೆಗೂ ನಿಜವಾಗಿ ಅಂದೇನಾಯಿತು ಅನ್ನುವ ಸಂಗತಿ ನಿಗೂಢ ವಾಗಿಯೇ ಉಳಿದಿದೆ.
ನೇತಾಜಿ ಕಣ್ಮರೆಯಾದ ಸುದ್ದಿಯಿಂದ ದೇಶಾದ್ಯಂತ ಎದ್ದ ದಂಗೆಗಳನ್ನು ಇನ್ನು ದಮನಿಸುವುದು ಕಷ್ಟವೆಂದರಿತ ಬ್ರಿಟಿಷರು ಕೊನೆಗೂ ಭಾರತ ಬಿಟ್ಟು ಹೊರಡಲೇ ಬೇಕಾ ಯಿತು. ಭಾರತವೇನೋ ಸ್ವಾತಂತ್ರ್ಯ ಪಡೆಯಿತು. ಆದರೆ ತನ್ನ ಮುಕ್ತಗೊಳಿಸಿದ ಸುಪುತ್ರನ ಸುಳಿವು ಕಾಣದೇ ತಾಯಿ ಭಾರತಿ ಕಣ್ಣೀರು ಹಾಕಿದ್ದಂತೂ ಸತ್ಯ.
-ಪ್ರಕಾಶ್ ಮಲ್ಪೆ