Advertisement
ನಗರದಲ್ಲಿ ಬುಧವಾರ ನಡೆದ ಮೆಟ್ರೋ ಬೋಗಿಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ, ಉಪನಗರ ರೈಲುಗಳಿಗೆ ಅಗತ್ಯವಿರುವ ಬೋಗಿಗಳ ನಿರ್ಮಾಣದ ಹೊಣೆಯನ್ನೂ ಬಿಇಎಂಎಲ್‌ಗೆ ವಹಿಸಬೇಕು. ಈ ಸಂಬಂಧ ರೈಲ್ವೆ ಸಚಿವ ಪಿಯೂಷ್ ಘೋಯಲ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ಅಷ್ಟೇ ಅಲ್ಲ, ಮುಂದಿನ ಒಂದು ತಿಂಗಳಲ್ಲಿ ಈ ಇಬ್ಬರೂ ಸಚಿವರನ್ನು ಬಿಇಎಂಎಲ್ ಗೆ ಕರೆತರಲಾಗುವುದು. ಈ ನಿಟ್ಟಿನಲ್ಲಿ ನಾನು ಬಿಇಎಂಎಲ್ ರಾಯಭಾರಿ ಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಭರವಸೆ ಸಚಿವ ಅನಂತಕುಮಾರ್ ಭರವಸೆ ನೀಡಿದರು.
Related Articles
Advertisement
ಭೂಸ್ವಾಧೀನದ ಅರ್ಧ ಹಣ ಭರಿಸಿ ಉಪನಗರ ರೈಲು ಯೋಜನೆಯ ಭೂಸ್ವಾಧೀನ ಪರಿಹಾರದಲ್ಲಿ ಕೇಂದ್ರ ಶೇ.50ರಷ್ಟು ವೆಚ್ಚ ಭರಿಸಬೇಕು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮನವಿ ಮಾಡಿದರು. “ಉಪನಗರ ರೈಲು ಯೋಜನೆಯ ಶೇ.50ರಷ್ಟು ವೆಚ್ಚವನ್ನು ಭರಿಸಲು ಕೇಂದ್ರ ಒಪ್ಪಿದೆ. ಆದರೆ, ಯೋಜನೆಗೆ ಸುಮಾರು ನೂರು ಎಕರೆ ಭೂಮಿಯ ಅವಶ್ಯಕತೆ ಇದೆ.ಭೂಸ್ವಾಧೀನಕ್ಕೆ ಅಂದಾಜು 2,075 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ ಅರ್ಧ ಹಣವನ್ನು ಕೇಂದ್ರ ಭರಿಸಿದರೆ, ರಾಜ್ಯದ ಮೇಲಿನ ಹೊರೆ ಮತ್ತಷ್ಟು ಕಡಿಮೆ ಆಗಲಿದೆ ಎಂದರು. ರಾಜ್ಯ ಸರ್ಕಾರ ಈಗಾಗಲೇ ಯೋಜನೆಗೆ 370 ಕೋಟಿ ರೂ. ಮೀಸಲಿಟ್ಟಿದೆ. ವಿಶೇಷ ಉದ್ದೇಶಿತ ವಾಹನ (ಎಸ್‌ಪಿವಿ) ಅನುಷ್ಠಾನಕ್ಕೂ ಸಹಿ ಹಾಕಲಾಗಿದೆ. ಈಗ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿ, ಎಸ್‌ಪಿವಿ ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದರು. ಕೇಂದ್ರ ಸಚಿವ ಅನಂತಕುಮಾರ್ ಪ್ರತಿಕ್ರಿಯಿಸಿ, “ಕೇಂದ್ರ ಸರ್ಕಾರ ಈಗಾಗಲೇ ಬಜೆಟ್‌ನಲ್ಲಿ ಯೋಜನೆ ಘೋಷಿಸಿದೆ. ಈಗ ಕೇಂದ್ರ ಸ್ಥಾಯಿ ಸಮಿತಿ ಸಭೆಗಳು, ಬಜೆಟ್ ಅಧಿವೇಶನ, ಹಣಕಾಸು ಮಸೂದೆಗೆ ಅನುಮೋದನೆ ಮತ್ತಿತರ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕು. ಇದೆಲ್ಲದಕ್ಕೂ ಏಪ್ರಿಲ್‌ವರೆಗೆ ಸಮಯ ಬೇಕಾಗುತ್ತದೆ. ತದನಂತರ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ, ಎಸ್ ಪಿವಿ ಸೇರಿದಂತೆ ಯೋಜನೆ ರೂಪುರೇಷೆ ಸಿದ್ಧಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.