Advertisement

ಕೋವಿಡ್ ನಿಧಿಗೆ ದಾನ ಮಾಡಲು ತನ್ನ ಪ್ರೀತಿಯ ಆಡುಗಳನ್ನು ಮಾರಿದ 61 ರ  ವೃದ್ಧೆ.!

06:03 PM May 26, 2021 | Team Udayavani |

ಕೋವಿಡ್ ಕಾಲದಲ್ಲಿ ದುಡಿಮೆಯಿಲ್ಲದೆ ದಿನ ದೂಡುವುದೇ ಕಷ್ಟ. ಇಂಥ ಸಂಕಷ್ಟದ ಸಮಯದಲ್ಲೂ ಕೆಲವರು ಸಹಾಯಕ್ಕೆ ನಿಲ್ಲುತ್ತಿದ್ದಾರೆ. ಅಂಥವರೇ ರಿಯಲ್ ಲೈಫ್ ಹೀರೋಸ್. ಕೇರಳದ ಕೊಲ್ಲಂನಲ್ಲಿ ವಾಸಿಸುವ 61 ವರ್ಷದ ಸುಬೈದಾ ಎನ್ನುವ ವೃದ್ಧೆಯೊಬ್ಬರು ಇಂಥದ್ದೇ ಕಾರ್ಯವನ್ನು ಮಾಡಿ ಜನಮೆಚ್ಚಿಯೊಟ್ಟಿಗೆ ಸರ್ಕಾರದ ಮನಸ್ಸನ್ನು ಗೆದ್ದಿದ್ದಾರೆ.

Advertisement

ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಕೋವಿಡ್ ಲಸಿಕೆಗಾಗಿ ಜನ ಸಾಲುಗಟ್ಟಿ ಕಾಯುವುದು ಕೂಡ ಹೆಚ್ಚಾಗುತ್ತಿದೆ. ಕೇರಳ ಸರ್ಕಾರ ಕೋವಿಡ್ ನಿರ್ವಹಣೆಯನ್ನು ಮಾಡುತ್ತಿದ್ದು, ಕೋವಿಡ್ ಲಸಿಕೆಗಾಗಿ ಶುರು ಮಾಡಿದ ಮುಖ್ಯಮಂತ್ರಿ ಕೋವಿಡ್ ನಿಧಿಗೆ ಕೇರಳದಲ್ಲಿ ಭಾರೀ ಮನ್ನಣೆ ಸಿಕ್ಕಿದೆ.

ಸುಬೈದಾ ಅವರದು ಬಡ ಕುಟುಂಬ, ದಿನಿತ್ಯದ ಊಟ-ಬಟ್ಟೆ ನೀರಿಗೆ ಕೊರತೆಯಾಗದ ಕುಟುಂಬ. ಬಾಡಿಗೆ ಮನೆ. ಮನೆಯಲ್ಲೇ ಒಂದು ಸಣ್ಣ ಟೀ ಶಾಪ್. ಅಕ್ಕಪಕ್ಕದ ಮನೆಯವರಿಗೆ ಸುಬೈದಾ ಅವರ ಟೀ ಶಾಪ್ ಪರಿಚಿತ. ಆಗಾಗ ಬಂದು ಚಹಾ ಕುಡಿದು ಹೋಗುವ ಗ್ರಾಹಕರ ಆಸರೆ ಬಿಟ್ಟರೆ, ಸುಬೈದಾ ಅವರಿಗೆ ಹೇಳಿಕೊಳ್ಳುವಷ್ಟು ದೊಡ್ಡ ಆದಾಯ ಇಲ್ಲ. 61 ವರ್ಷದ ಸುಬೈದಾ ಮನೆಯಲ್ಲಿ ಮನೆಯ ಸದಸ್ಯರು ಬಿಟ್ಟರೆ, ಮುದಿ ಜೀವದ ಧ್ವನಿಗೆ ತಮ್ಮದೇ ಭಾಷೆಯಲ್ಲಿ ಪ್ರತಿಕ್ರಿಯೆ ನೀಡುವ ಆಡುಗಳಿವೆ.

ಆಡುಗಳನ್ನು ನೋಡಿಕೊಳ್ಳುವುದು,ಅವುಗಳ ಚಾಕರಿ ಮಾಡುವುದು, ಅವುಗಳಿಗೆ ಮೇವು ಹಾಕುವುದು ಎಲ್ಲವೂ ಸುಬೈದವೇ. ಒಂದು ವೇಳೆ ನಾವು ಮನೆಯಲ್ಲಿ ಅಷ್ಟೊಂದು ಆಡುಗಳಿದ್ದರೆ, ಅವುಗಳನ್ನು ಕಷ್ಟದ ಸಮಯದಲ್ಲಿ ಮಾರುತ್ತಿದ್ದೀವಿ ಇರಬೇಕು. ಆದರೆ ಸುಬೈದಾ ಅವರು ತಮ್ಮ ಆಡುಗಳನ್ನು ಮಾರಿದ ಉದ್ದೇಶ ಕೇಳಿದರೆ ನೀವೊಮ್ಮೆ ಅಚ್ಚರಿಗೊಳ್ಳಬಹುದು.

ಕೋವಿಡ್ ನಿಧಿಗೆ ಕೇರಳದಲ್ಲಿ ಸೆಲೆಬ್ರಿಟಿಗಳಿಂದ ಸಾಮಾನ್ಯ ಜನರವರೆಗೂ ದಾನವನ್ನು ನೀಡಿದ್ದಾರೆ. ಸಣ್ಣ ವಯಸ್ಸಿನ ಮಕ್ಕಳು ಕೋವಿಡ್ ನಿಧಿಗೆ ಹಣವನ್ನು ನೀಡಿವುದನ್ನು ಕಂಡ ಸುಬೈದಾ ಅವರಿಗೆ ತಾವು ಕೂಡ ಹೀಗೆ ಏನಾದರೂ ಸರ್ಕಾರಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಹಣವನ್ನು ನೀಡಬೇಕೆಂದುಕೊಳ್ಳುತ್ತಾರೆ. ಅದರೆ ಸುಬೈದಾ ಅವರ ಪರಿಸ್ಥಿತಿಯಲ್ಲಿ ಅದು ಅಷ್ಟು ಸುಲಭವಾಗಿರಲಿಲ್ಲ. ಇದ್ದ ಚಹಾದಂಗಡಿ ಲಾಕ್ ಡೌನ್ ನಿಂದ ಬಂದ್ ಆದ್ದಾಗ ಸುಬೈದಾ ಯೋಚಿಸಿದ ಯೋಜನೆ, ಕಾರ್ಯರೂಪಕ್ಕೆ ಬರುವುದು ಕಷ್ಟವಾಗಿತ್ತು.

Advertisement

ಸುಬೈದಾ ತಾವೂ ಏನೇ ಮಾಡಿ ಆದರೂ ಕೋವಿಡ್ ನಿಧಿಗೆ ತಮ್ಮ ಪುಟ್ಟ ಕೊಡುಗೆ ನೀಡುವ ಯೋಚನೆಯನ್ನು ಮಾತ್ರ ಬಿಡಲಿಲ್ಲ. ಈ ಬಗ್ಗೆ ತನ್ನ ಗಂಡನಲ್ಲಿ ಕೇಳಿದಾಗ ಗಂಡ ಕೂಡ ಹೆಂಡತಿಯ ಅಲೋಚನೆಗೆ ಸಾಥ್ ನೀಡುತ್ತಾರೆ. ಸುಬೈದಾ ಅವರು ಸಾಕಿಕೊಂಡ ಆಡುಗಳಲ್ಲಿ ನಾಲ್ಕು ಆಡುಗಳನ್ನು ಮಾರಿ ಅದರಿಂದ ಬಂದ ಹಣವನ್ನು ಕೋವಿಡ್ ನಿಧಿಗೆ ನೀಡಲು ನಿರ್ಧಾರಿಸುತ್ತಾರೆ.!

ತಾವು ಈ ರೀತಿ ಕೋವಿಡ್ ನಿಧಿಗೆ ಹಣ ನೀಡಲು ನಿರ್ಧಾರಿಸಿದ್ದೇನೆ ಎಂದು ಪೊಲೀಸರ ಬಳಿ ಕೇಳಿ ಸುಬೈದಾ ತಮ್ಮ ಸಣ್ಣ ಸಹಾಯವನ್ನು ಕೋವಿಡ್ ನಿಧಿಗೆ ನೀಡುವುದರ ಜತೆಗೆ ತಮ್ಮಗಿಂತ ಬಡವರಿದ್ದ ಕುಟುಂಬಕ್ಕೆ ಅಗತ್ಯ ಸೌಲಭ್ಯ ಹಾಗೂ ಅಕ್ಕಿಯನ್ನು ನೀಡುತ್ತಾರೆ.

ಸುಬೈದಾ ಅವರ ಈ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜತೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರಮಾಣ ವಚನಕ್ಕೆ ವಿಶೇಷ ವ್ಯಕ್ತಿಯಾಗಿ ಆಹ್ವಾನವಾಗುತ್ತಾರೆ. ಸುಬೈದಾ ಅವರು ಮನೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಹಾಸಿಗೆಯಲ್ಲಿ ಮಲಗಿರುವ ತನ್ನ ಗಂಡ ಹಾಗೂ ಅದೇ ಕಾಯಿಲೆಯಿಂದ ಬಳಲುತ್ತಿರುವ ಅವರ ತಮ್ಮನನ್ನು ನೋಡಿಕೊಳ್ಳುತ್ತಿದ್ದಾರೆ. ಸುಬೈದಾ ಅವರ ಮಕ್ಕಳು ದಿನಕೂಲಿ ನೌಕರರಾಗಿದ್ದಾರೆ.

ಕೋವಿಡ್ ನಿಧಿಗೆ ಸುಬೈದಾ ಅವರು ಮಾರಿದ ನಾಲ್ಕು ಆಡುಗಳ ವಿಷಯ ತಿಳಿದ ಸ್ಥಳೀಯ ಉದ್ಯಮಿಯೊಬ್ಬರು ಬದಲಾಗಿ, ಸ್ಥಳಿಯ ಉದ್ಯಮಿಯೊಬ್ಬರು, ಸುಬೈದಾ ಅವರಿಗೆ ಹೊಸ 5 ಆಡುಗಳನ್ನು ಉಡುಗೊರೆಯಾಗಿ ನೀಡುತ್ತಾರೆ.

ಕೋವಿಡ್ ಸಂಕಷ್ಟದಲ್ಲಿ ಇಂಥವರೇ ನಿಜವಾದ ಹೀರೋಸ್ ಹೇಳಿದರೆ ತಪ್ಪಾಗದು.

 

-ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next