Advertisement

ಸುಬೈದಾ ಕೊಲೆ : ಆರೋಪಿಗಳ ಗುರುತು ಪತ್ತೆ

07:00 AM Feb 10, 2018 | |

ಕಾಸರಗೋಡು: ಪೆರಿಯ ಆಯಂಪಾರ ವಿಲ್ಲಾರಂಪಡಿ ರಸ್ತೆ ಬಳಿಯ ಸುಬೈದಾ (60) ಅವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಿಬ್ಬರನ್ನು ಗುರುತು ಹಚ್ಚುವ ಪರೇಡ್‌ನ‌ಲ್ಲಿ ಸಾಕ್ಷಿದಾರರು ಗುರುತಿಸಿದ್ದಾರೆ. 

Advertisement

ಹೊಸದುರ್ಗ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾದ ಮಧೂರು ಪಟ್ಲ ಕುಂಜಾರು ಕೋಟೆಕಣಿ ನಸ್ರಿàನಾ ಹೌಸ್‌ನ ಅಬ್ದುಲ್‌ ಖಾದರ್‌ ಕೆ.ಎಂ. ಆಲಿಯಾಸ್‌ ಖಾದರ್‌(26) ಮತ್ತು ಮಧೂರು ಪಟ್ಲ ಕುದ್ರೆಪ್ಪಾಡಿಯ ಅಬ್ದುಲ್‌ ಅಸೀಸ್‌ ಟಿ. ಆಲಿಯಾಸ್‌ ಬಾವಾ ಅಸೀಸ್‌(23) ಅವರ ಗುರುತು ಹಚ್ಚುವ ಪರೇಡ್‌ ಹೊಸದುರ್ಗ ಪ್ರಥಮ ದರ್ಜೆ  ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ(ಪ್ರಥಮ)ದಲ್ಲಿ ನಡೆದಿದೆ. ಜ.17ರಂದು ಮಧ್ಯಾಹ್ನ ಸುಬೈದಾರನ್ನು ಅವರ ಮನೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next