Advertisement

ಸಬ್ ನ್ಯಾಶನಲ್ ಸರ್ಟಿಫಿಕೇಶನ್ ಸಮೀಕ್ಷೆ : ವಿಜಯಪುರದ ಸಾಧನೆಗೆ ಒಲಿದ ಕಂಚಿನ ಪದಕ

06:54 PM Mar 22, 2022 | Team Udayavani |

ವಿಜಯಪುರ : ಕೇಂದ್ರ ಸರ್ಕಾರದಿಂದ ಕ್ಷಯಮುಕ್ತ ಭಾರತ ಯೋಜನೆ ಅಡಿಯಲ್ಲಿ ವಿವಿಧ ಹಂತಗಳಲ್ಲಿ ಉಪ ರಾಷ್ಟ್ರೀಯ ಪ್ರಮಾಣಪತ್ರ ಸಮೀಕ್ಷೆ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಸಾಧನೆಗೆ ಕಂಚಿನ ಪದಕ ದಕ್ಕಿದೆ.

Advertisement

ಫೆ.21 ರಿಂಧ ಮಾರ್ಚ 13 ರ ವರೆಗೆ ನವದೆಹಲಿಯ ಕೇಂದ್ರ ಸರ್ಕಾರದ ಕೇಂದ್ರ ಕ್ಷಯ ವಿಭಾಗದ ನೇತೃತ್ವದಲ್ಲಿ ದೇಶದ 201 ಜಿಲ್ಲೆಗಳನ್ನು ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ರಾಜ್ಯಾದ್ಯಂತ ಜರುಗಿದ ಸಬ್ ನ್ಯಾಶನಲ್ ಸರ್ಟಿಫಿಕೇಶನ್ ಸಮೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಸಾಧನೆಗೆ ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾಧಿಕಾರಿ ಸುನಿಲಕುಮಾರ ತಿಳಿಸಿದ್ದಾರೆ.

2015 ರಿಂದ 2021ನೇ ಸಾಲಿನ ಅವಧಿಯಲ್ಲಿ ಹೊಸ ಕ್ಷಯರೋಗ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದೆಯೇ, ಹೆಚ್ಚಾಗುತ್ತಿವೆಯೇ ಎಂದು ವಿಮರ್ಶೆ ಮಾಡುವುದೇ ಸಮೀಕ್ಷೆಯ ಮುಖ್ಯ ಉದ್ದೇಶ. ಜಿಲ್ಲೆಯು 2015ಕ್ಕೆ ಹೋಲಿಸಿದಾಗ ಸರಿ ಸುಮಾರು ಶೇ.21 ಹೊಸ ಕ್ಷಯರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಸಂಪೂರ್ಣ ಕ್ಷಯ ರೋಗದಿಂದ ಸಂಪೂರ್ಣ ಗುಣಮುಖರಾದವರ ಸಂಖ್ಯೆ ಶೇ.90 ರಷ್ಟಿದೆ.

ನಮ್ಮ ವೈದ್ಯರ ಜೊತೆ ಖಾಸಗಿ ವೈದ್ಯರ ಹಾಗೂ ಔಷಧಿ ವ್ಯಾಪಾರಸ್ಥರ ಸಹಭಾಗಿತ್ವ ಕೂಡ ಶ್ಲಾಘನೀಯ. ಪ್ರಸಕ್ತ ವರ್ಷ ರ್ಮಾ 24 ರಂದು ವಿಶ್ವ ಕ್ಷಯರೋಗ ದಿನಾಚರಣೆಯನ್ನು ಜಿಲ್ಲೆಯ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಹಮ್ಮಿಕೊಂಡಿದೆ. ಇದಲ್ಲದೇ ರೇಡಿಯೋ ಜಿಂಗಲ್ಸ್, ರೇಡಿಯೋ ಟಾಕ್, ಕಿರುನಾಟಕ ಕ್ಷಯರೋಗ ಘಟಕ ಮತ್ತು ಜಿಲ್ಲಾ ಮಟ್ಟದಲ್ಲಿ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ಮತ್ತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಕ್ಷಯರೋಗದ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ : ಮನಸ್ಸನ್ನು ನಿಗ್ರಹಿಸುವ ಒಂದೇ ಒಂದು ಅಸ್ತ್ರ ಯಾವುದು ಗೊತ್ತಾ ?

Advertisement
Advertisement

Udayavani is now on Telegram. Click here to join our channel and stay updated with the latest news.

Next