Advertisement

ಕನಕನಿಗೆ ಸ್ಟೈಲಿಶ್‌ ಸಾಂಗ್‌

11:20 AM May 10, 2017 | Team Udayavani |

ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ ದುನಿಯಾ ವಿಜಯ್‌ ಅಭಿನಯದ “ಕನಕ ‘ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೀಗ ವಿಶೇಷವಾದ ಹಾಡೊಂದನ್ನು ಅದ್ಧೂರಿಯಾಗಿ ಚಿತ್ರೀಕರಿಸಿಕೊಂಡಿದ್ದಾರೆ. ಇದು 25 ಫೈಟರುಗಳು ಸೇರಿದಂತೆ ನೂರು ಮಂದಿ ಡ್ಯಾನ್ಸರ್‌ಗಳನ್ನು ಒಳಗೊಂಡು ಮಾಡಿರುವ ವಿಶಿಷ್ಟವಾದ ವಾರಿಯರ್‌ ಶೈಲಿಯ ಹಾಡನ್ನು ಚಿತ್ರೀಕರಿಸಲಾಗಿದೆ. 

Advertisement

 ಈ ಹಾಡು ದೇವನಹಳ್ಳಿ ಬಳಿ ಹದಿನೈದೆಕರೆಯಷ್ಟು ವಿಶಾಲವಾದ ಕೆಂಪು ಹುಡಿ ಮಣ್ಣಿನ ಪ್ರದೇಶದಲ್ಲಿ ಚಿತ್ರೀಕರಣಗೊಂಡಿದೆ. ಮುರಳಿ ನೃತ್ಯ ನಿರ್ದೇಶನದ ಈ ವಿಶೇಷ ಹಾಡಿನ ಚಿತ್ರೀಕರಣದಲ್ಲಿ ವಿಜಯ್‌ ವಿಭಿನ್ನ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈಯ ಡ್ಯಾನ್ಸರ್, ಹತ್ತಾರು ಜನ ಬಾಡಿಗಾರ್ಡ್ಸ್‌, ಬೌನ್ಸರ್‌ಗಳು ಈ ಹಾಡಿನಲ್ಲಿ ಪಾಲ್ಗೊಂಡಿದ್ದಾರೆ.

ಈ ಹಾಡಿಗಾಗಿ 20ಲಕ್ಷ ರುಪಾಯಿ ವೆಚ್ಚದಲ್ಲಿ ವಿಶೇಷವಾದ ಕಾಸ್ಟೂಮ್‌ಗಳನ್ನು ಚೆನ್ನೈನಲ್ಲಿ ಸಿದ್ದಪಡಿಸಲಾಗಿದೆ.  ಸತ್ಯ ಹೆಗ್ಡೆ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ನವೀನ್‌ ಸಜ್ಜು ಸಂಗೀತ ನೀಡಿದ್ದಾರೆ. ಹರೀಶ್‌ ಸಂಕಲನ, ಮುರಳಿ, ಹರ್ಷ, ಇಮ್ರಾನ್‌ ನƒತ್ಯ ನಿರ್ದೇಶನ ಹಾಗೂ ಥ್ರಿಲ್ಲರ್‌ ಮಂಜು, ರವಿವರ್ಮ, ಡಿಫ‌ರೆಂಟ್‌ ಡ್ಯಾನಿ ಅವರ ಸಾಹಸ ನಿರ್ದೇಶನವಿದೆ.

Advertisement

Udayavani is now on Telegram. Click here to join our channel and stay updated with the latest news.

Next