Advertisement

ಭೌತಿಕ ತರಗತಿ: ವಿದ್ಯಾರ್ಥಿಗಳ ಸಂಖ್ಯೆ ಏರಿಕೆ

01:15 AM Sep 03, 2021 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಭೌತಿಕ ತರಗತಿ ಆರಂಭವಾದ ಎರಡನೇ ದಿನ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ.

Advertisement

ಪ್ರವೇಶ ಪಡೆದಿರುವ ಒಟ್ಟು 29,700 ವಿದ್ಯಾರ್ಥಿಗಳ ಪೈಕಿ ಗುರುವಾರ 16,567 ಮಂದಿ ಭೌತಿಕ ತರಗತಿಗೆ ಹಾಜರಾಗಿದ್ದಾರೆ. ಈ ಪೈಕಿ 2,589 ಮಂದಿ ಹಾಸ್ಟೆಲ್‌ ವಾಸಿಗಳು ಮತ್ತು 166 ಮಂದಿ ಕೇರಳ ಭಾಗದವರಾಗಿದ್ದಾರೆ. ಮೊದಲ ದಿನವಾದ ಬುಧವಾರ 10,500 ಮಂದಿ ಹಾಜರಾಗಿದ್ದರು.

ಕೋವಿಡ್‌ ಮಾರ್ಗಸೂಚಿ ಪಾಲಿಸಿ, ಪ್ರತೀ ಕಾಲೇಜಿನಲ್ಲಿ ಶೇ. 50ರಷ್ಟು ವಿದ್ಯಾರ್ಥಿಗಳ ಹಾಜರಾತಿಯೊಂದಿಗೆ ತರಗತಿ ನಡೆಸಲಾಯಿತು. ಇದಕ್ಕಾಗಿ ಶಿಕ್ಷಕರು ಮೊದಲೇ ರೊಟೇಶನ್‌ ಮಾದರಿಯಲ್ಲಿ ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ ದಿನಬಿಟ್ಟು ದಿನ ಕಾಲೇಜಿಗೆ ಬರುವಂತೆ ಸೂಚನೆ ನೀಡಿದ್ದರು. ಹಾಜರಾಗದ ವಿದ್ಯಾರ್ಥಿಗಳು ಆನ್‌ಲೈನ್‌ ಪಾಠ ಆಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next