Advertisement
ತಾಲೂಕಿನ ಮೋರನಾಳ ಗ್ರಾಮದಲ್ಲಿನ 40ಕ್ಕೂಹೆಚ್ಚು ವಿದ್ಯಾರ್ಥಿಗಳು ಇಂತಹ ಸಮಸ್ಯೆಯನ್ನುಎದುರಿಸುತ್ತಿದ್ದಾರೆ. ಅಳವಂಡಿ ಸರ್ಕಾರಿ ಪ್ರೌಢಶಾಲೆಗೆ ತೆರಳಲು ಸಕಾಲಕ್ಕೆ ಬಸ್ ಸೌಕರ್ಯ ಇಲ್ಲದೇಕಾಲ ನಡಿಗೆ ನಮಗೆ ಗತಿ ಎಂದು ಪಾದಯಾತ್ರೆ ಆರಂಭಿಸುತ್ತಿದ್ದಾರೆ.
Related Articles
Advertisement
ಮೋರನಾಳ ಗ್ರಾಮದಿಂದ ಅಳವಂಡಿಗೆ 5 ಕಿಮೀದೂರವಿದೆ. ಎರಡೂ ಕಡೆ ಸೇರಿ ಪ್ರತಿ ನಿತ್ಯ 10 ಕಿಮೀವಿದ್ಯಾರ್ಥಿಗಳು ನಡೆದುಕೊಂಡೇ ವಿದ್ಯಾಗಮದಡಿಶಿಕ್ಷಣ ಪಡೆಯುವಂತ ಪರಿಸ್ಥಿತಿ ಬಂದಿದೆ.ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿವಿದ್ಯಾರ್ಥಿನಿಯರನ್ನು ಹೈಸ್ಕೂಲ್ ಹಾಗೂ ಕಾಲೇಜಿಗೆಕಳಿಸುವುದೇ ಹೆಚ್ಚು ಆ ಮಧ್ಯೆ ಕಾಲ್ನಡಿಗೆಯಲ್ಲಿ ಶಾಲೆಗೆಮಕ್ಕಳನ್ನು ಕಳಿಸಬೇಕೆಂದರೆ ವಿದ್ಯಾರ್ಥಿ ಪಾಲಕರುನಿತ್ಯವೂ ಆತಂಕದಲ್ಲೇ ಶಾಲೆಗೆ ಕಳಿಸಬೇಕಾದ ಸ್ಥಿತಿಬಂದಿದೆ. ಇನ್ನು ಕಾಲೇಜು ವಿದ್ಯಾರ್ಥಿಗಳೂ ಇಂಥತೊಂದರೆ ಎದುರಿಸುತ್ತಿದ್ದಾರೆ. ಹೇಗೋ ಖಾಸಗಿ ವಾಹನ, ಇಲ್ಲವೇ ಬೈಕ್‌ಗಳಲ್ಲಿ ತೆರಳುತ್ತಿದ್ದಾರೆ.
ಆದರೆ ವಿದ್ಯಾರ್ಥಿನಿಯರ ಪರದಾಟ ನಿಜಕ್ಕೂ ಹೇಳತೀರದಂತಾಗಿದೆ. ಕೂಡಲೇ ಸರ್ಕಾರ, ಶಿಕ್ಷಣಇಲಾಖೆ, ಸಾರಿಗೆ ಇಲಾಖೆಯು ವಿದ್ಯಾರ್ಥಿಗಳಕಾಲ್ನಡಿಗೆ ತಪ್ಪಿಸಲು ಪರ್ಯಾಯ ವಿದ್ಯಾರ್ಥಿಗಳ ಶಾಲಾ ಸಮಯಕ್ಕೆ ಸಾರಿಗೆ ವ್ಯವಸ್ಥೆ ಮಾಡಬೇಕಿದೆ.
ಸಮಸ್ಯೆ ಟ್ವಿಟ್ ಮಾಡಿದ ರೈತ :
ಮೋರನಾಳದಿಂದ ಅಳವಂಡಿಗೆ ಕಾಲ್ನಡಿಗೆಯಲ್ಲಿಯೇ ನಿತ್ಯ ವಿದ್ಯಾರ್ಥಿಗಳುಶಾಲೆಗೆ ತೆರಳುತ್ತಿರುವುದನ್ನುಗಮನಿಸಿದ ಬೆಟಗೇರಿ ಗ್ರಾಮದ ರೈತಏಳುಕೋಟೇಶ್ ಕೋಮಲಾಪುರ ಅವರುವಿದ್ಯಾರ್ಥಿನಿಯರು ನಡೆದುಕೊಂಡುಹೋಗುವ ಫೋಟೋ ತೆಗೆದು, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಶಿಕ್ಷಣ ಸಚಿವ ಸೇರಿ ಇತರರಿಗೆ ಟ್ವಿಟ್ ಮಾಡಿ ವಿದ್ಯಾರ್ಥಿಗಳ ಸಮಸ್ಯೆ ಗಮನಸೆಳೆದಿದ್ದಾರೆ.
ವಿದ್ಯಾಗಮ ಹಾಗೂ ಶಾಲೆ ಆರಂಭವಾಗಿವೆ. ನಾವೂ ನಿತ್ಯವೂಮೋರನಾಳ ಗ್ರಾಮದಿಂದ ಅಳವಂಡಿಗೆ 5ಕಿಮೀ ನಡೆದುಕೊಂಡು ಹೋಗಬೇಕು. ಪುನಃ 5ಕಿಮೀ ನಡೆದುಕೊಂಡೇ ನಮ್ಮೂರಿಗೆ ಬರಬೇಕು.ಇದರಿಂದ ನಮಗೆ ತುಂಬ ತೊಂದರೆಯಾಗುತ್ತಿದೆ. ಸರಿಯಾದ ಬಸ್ ವ್ಯವಸ್ಥೆ ಇಲ್ಲ. ನಮಗೆ ಅಧಿ ಕಾರಿಗಳು ಕೂಡಲೇ ಶಾಲಾ ಸಮಯಕ್ಕೆ ಬಸ್ ವ್ಯವಸ್ಥೆ ಮಾಡಲಿ. – ವಾಣಿ ಕವಲೂರು, ರೇಖಾ ಚಿಲಗೋಡ, ಕವಿತಾ ಬಗನಾಳ, ಮೋರನಾಳ ವಿದ್ಯಾರ್ಥಿನಿಯರು.
ಮೋರನಾಳ ಗ್ರಾಮದ ಶಾಲಾ-ಕಾಲೇಜುವಿದ್ಯಾರ್ಥಿನಿಯರಿಗೆ ಸಾರಿಗೆ ವ್ಯವಸ್ಥೆಇಲ್ಲದಿರುವ ಕುರಿತು ನನ್ನ ಗಮನಕ್ಕೆ ಬಂದಿಲ್ಲ.ಕೂಡಲೇ ಸಂಬಂ ಧಿಸಿದ ಡಿಪೋ ಮ್ಯಾನೇಜರ್ ಗೆ ಹೇಳಿ ವಿದ್ಯಾರ್ಥಿಗಳಿಗೆ ತೊಂದರೆ ಆಗದರೀತಿಯಲ್ಲಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು.ಲಾಕ್‌ಡೌನ್ ಮೊದಲು ಅಲ್ಲಿ ಬಸ್‌ಗಳ ಸಂಚಾರಇತ್ತೆಂದರೆ ತೊಂದರೆಯಿಲ್ಲ. ಲಾಕ್‌ಡೌನ್ ತೆರವುಬಳಿಕ ನಮಗೂ ಸ್ವಲ್ಪ ತೊಂದರೆಯಾಗುತ್ತಿದೆ. ಅದೆಲ್ಲವನ್ನೂ ಸರಿಪಡಿಸುತ್ತಿದ್ದೇವೆ. –ಎ.ಎ.ಮುಲ್ಲಾ, ಕೆಎಸ್‌ಆರ್‌ಟಿಸಿ ಸಾರಿಗೆ ಜಿಲ್ಲಾ ನಿಯಂತ್ರಣಾಧಿಕಾರಿ.ಕೊಪ್ಪಳ
–ದತ್ತು ಕಮ್ಮಾರ