Advertisement
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಬಳಿ ಇರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ 72 ಪಿ.ಯು.ಸಿ ವಿದ್ಯಾರ್ಥಿಗಳು ಪ್ರಯೋಗಿಕ ಪರೀಕ್ಷೆ ಬರೆಯಲು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಬರಬೇಕಿತ್ತು, ಅವರನ್ನು ಜವಾಬ್ದಾರಿಯಿಂದ ಪ್ರಾಯಾಣಿಕ ವಾಹನದಲ್ಲಿ ಕಳುಹಿಸಬೇಕಾಗಿರುವುದು ವಸತಿ ಕಾಲೇಜಿನ ಪ್ರಾಂಶುಪಾಲರ ಜವಾಬ್ದಾರಿಯಾಗಿದೆ. ಇದಕ್ಕಾಗಿ ಸರ್ಕಾರ ಸಾಕಷ್ಟು ಅನುದಾನ ನೀಡುತ್ತದೆ, ಆದರೆ ಕೆಲವು ದಿನಗಳ ಹಿಂದೆ ವಸತಿ ಕಾಲೇಜಿನವರು ಹಣ ಉಳಿಸುವ ದೆಸೆಯಿಂದ ಕಾಲೇಜಿನ 37 ಹೆಣ್ಣು ಮಕ್ಕಳು ಹಾಗೂ 35 ಗಂಡು ಮಕ್ಕಳನ್ನು ಬೈಚಾಪುರದ ಮುರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವರೆಗೆ 16 ಕಿ.ಮಿ. ನಷ್ಟು ದೂರವನ್ನು ಚಿಕ್ಕ ಸರಕು ವಾಹನದಲ್ಲಿ ಪ್ರಾಣಿಗಳಂತೆ ತುಂಬಿ ನಿಲ್ಲಿಸಿಕೊಂಡು ಬಂದು ಇಳಿಸಿರುತ್ತಾರೆ. ಆ ಮಕ್ಕಳು ದಿನವಿಡೀ ನಿಂತುಕೊಂಡು ಅಂದು ಭೌತ ಶಾಸ್ತ್ರ ರಸಾಯನಶಾಸ್ತ್ರ, ಜೀವಶಾಸ್ತ್ರದ ಪ್ರಯೋಗಾಲಯದಪರೀಕ್ಷೆಯಲ್ಲಿ ಭಾಗಿಯಾಗಿ ಮತ್ತೆ ಕುರಿಗಳ ಹಾಗೆ ನಿಂತು ಕೊಂಡು ಹೋಗಬೇಕು, ಇದನ್ನು ಬೆಳಿಗ್ಗೆ ಗಮನಿಸಿ ಸಂಜೆಯವರೆಗು ಕಾಯ್ದು ಪತ್ರಿಕೆಯವರು ಪ್ರಶ್ನಿಸಿದಾಗ ಆಗ ಪ್ರಾಂಶುಪಾಲರು ಬಸ್ಸಿನಲ್ಲಿ ಕರೆದುಕೊಂಡು ಬರುವಂತೆ ವಿದ್ಯಾರ್ಥಿನಿಯರೊಂದಿಗೆ ಬಂದಿರುವ ಶಿಕ್ಷಕಿಗೆ ದೂರವಾಣಿ ಕರೆ ಮಾಡುತ್ತಾರೆ.
Related Articles
Advertisement
ಎಂಡಿಆರ್‌ಎಸ್ ಬೈಚಾಪುರ ಕಾಲೇಜಿನ ೩೭ ವಿದ್ಯಾರ್ಥಿನಿಯರನ್ನು ಚಿಕ್ಕ ಸರಕು ವಾಹನದಲ್ಲಿ ೧೬ ಕಿ.ಮೀ ಪ್ರಯಾಣಮಾಡಿಸಿರುವುದು ನನ್ನ ಗಮನಕ್ಕೆ ಬಂದಿದ್ದು, ವಿದ್ಯಾರ್ಥಿನಿಯರ ಸುರಕ್ಷತೆಯಿಂದ ತಪ್ಪಾಗಿದ್ದು ಈ ಸಂಬಂಧ ಸದರಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ.– ನಾಹಿದಾ ಜಮ್ ಜಮ್, ತಹಶೀಲ್ದಾರ್
ಈ ಸಂಬಂಧ ಪ್ರಾಂಶುಪಾಲರಿಗೆ ಕಾರಣ ಕೇಳಿ ನೋಟೀಸ್ ನೀಡಲಾಗುವುದು. ಜಿಲ್ಲೆಯ ಎಲ್ಲಾ ವಸತಿ ಶಾಲೆಯ ಪ್ರಾಂಶುಪಾಲರಿಗೆ ಇನ್ನು ಮುಂದೆ ಈರೀತಿ ನಡೆದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇನೆ. – ಪ್ರೇಮಾ ಟಿ.ಎಲ್. ಜಂಟಿ ನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ