Advertisement

ಬಸ್‌ಗಾಗಿ ರಸ್ತೆ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

03:01 PM Jul 23, 2022 | Team Udayavani |

ಕಾಳಗಿ: ಶಾಲೆ -ಕಾಲೇಜಿಗೆ ತೆರಳುವ ಹಾಗೂ ಮರಳಿ ಬರುವ ವೇಳೆ ಸಮರ್ಪಕ ಸಾರಿಗೆ ಬಸ್‌ ನೀಡುವಂತೆ ಒತ್ತಾಯಿಸಿ, ಕೋಡ್ಲಿ ಕ್ರಾಸ್‌ ಬಳಿ ಬಸ್‌ ತಡೆದು ನಡು ರಸ್ತೆಯಲ್ಲೇ ವಿದ್ಯಾರ್ಥಿಗಳು, ಕರ್ನಾಟಕ ಪ್ರಾಂತ ರೈತ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.

Advertisement

ತಾಲೂಕಿನ ವಿವಿಧ ಗ್ರಾಮಗಳಿಂದ ಕೋಡ್ಲಿ ಕ್ರಾಸ್‌ ಮಾರ್ಗವಾಗಿ ಪಟ್ಟಣಕ್ಕೆ ತೆರಳುವ ಬಸ್‌ ಮಾರ್ಗದಲ್ಲಿ ವಿದ್ಯಾರ್ಥಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದ ರಿಂದ ಅಗತ್ಯ ಬಸ್‌ ಸೌಲಭ್ಯ ಇಲ್ಲದೆ ಪರ ದಾಡುವಂತಾಗಿದೆ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ರಟಕಲ್‌, ಕಂಚನಾಳ, ಹುಲಸಗೂಡ, ಸುಂಠಾಣ, ಕೋಡ್ಲಿ ಕ್ರಾಸ್‌ ಮಾರ್ಗವಾಗಿ ಕಾಳಗಿ ಪಟ್ಟಣಕ್ಕೆ ಬರಲು ಶಾಲೆ ಕಾಲೇಜಿನ ಸಮಯಕ್ಕೆ ಸಾರಿಗೆ ಬಸ್‌ ಸೌಲಭ್ಯ ಇಲ್ಲದಿರುವುದರಿಂದ ತೊಂದರೆಯುಂಟಾಗುತ್ತಿದೆ. ಬಸ್ಸಿಗೆ ಜೋತು ಬಿದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತಕ್ಷಣವೇ ಬಸ್ಸಿನ ಸೌಲಭ್ಯ ಒದಗಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದರು.

ನಂತರ ಕಾಳಗಿ ಬಸ್‌ ಘಟಕ ವ್ಯವಸ್ಥಾಪಕ ಯಶವಂತ ಯಾತನೂರ ಅವರಿಗೆ ವಿದ್ಯಾರ್ಥಿಗಳು ಮನವಿ ಪತ್ರ ಸಲ್ಲಿಸಿದರು. ಅನಿಲಕುಮಾರ, ಅರುಣಕುಮಾರ ಹಾಗೂ ವಿದ್ಯಾರ್ಥಿಗಳು ಇದ್ದರು. ರಟಕಲ್‌ ಪಿಎಸ್‌ಐ ಚಂದ್ರಕಾಂತ ಮೇಕಾಲೆ ಬಂದೊಬಸ್ತ್ ಒದಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next