Advertisement

ವಸತಿ ಶಾಲೆ ಅವ್ಯವಸ್ಥೆಗೆ ವಿದ್ಯಾರ್ಥಿಗಳ ಆಕ್ರೋಶ

05:42 PM Mar 23, 2021 | Team Udayavani |

ಶಹಾಪುರ: ತಾಲೂಕಿನ ಬೇವಿನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಅಸಮರ್ಪಕ ಊಟ ಮತ್ತು ವಸತಿಶಾಲೆಯ ಅವ್ಯವಸ್ಥೆಗೆ ರೋಸಿ ಹೋದವಿದ್ಯಾರ್ಥಿಗಳು ಸೋಮವಾರ ಸಮೀಪದ ದೋರನಹಳ್ಳಿ ಗ್ರಾಮದವರೆಗೆ ಕಾಲ್ನಡಿಗೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು.

Advertisement

ಪ್ರತಿಭಟನಾ ನಿರತ ವಿದ್ಯಾರ್ಥಿಗಳುಮಾತನಾಡಿ, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡುತ್ತಿಲ್ಲ, ಇಂಗ್ಲಿಷ್‌ ಪಾಠ ಮಾಡುವವರು ಇಲ್ಲ. ಮುಖ್ಯವಾಗಿ ಪೌಷ್ಟಿಕ ಆಹಾರ ನೀಡುತ್ತಿಲ್ಲ.ಇದಕ್ಕೆಲ್ಲ ವಾರ್ಡನ್‌ ಹಾಗೂ ಪ್ರಾಂಶುಪಾಲರ ಬೇಜವಾಬ್ದಾರಿಯೇ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೇ ವಾರ್ಡನ್‌ ಹಾಗೂ ಪ್ರಾಂಶುಪಾಲರನ್ನು ವರ್ಗಾವಣೆಗೆ ಮಾಡಬೇಕು.ಅಲ್ಲದೆ ನಿತ್ಯ ಮೆನು ಪ್ರಕಾರ ಊಟದ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಕಳೆದ ಎರಡು ತಿಂಗಳಿಂದ ಇಂಗ್ಲಿಷ್‌ ಪಾಠಮಾಡುವವರಿಲ್ಲ. ಇಲ್ಲಿನ ವಾರ್ಡನ್‌ ಅವರೇಇಂಗ್ಲಿಷ್‌ ಪಾಠ ಮಾಡುತ್ತಾರೆ. ಅವರೇ ಶಾಲೆಗೆಬರುವುದಿಲ್ಲ. ನಿತ್ಯ ಒಂದೇ ತರಹದ ಊಟನೀಡಲಾಗುತ್ತಿದೆ. ಪ್ರಾಣಿಗಳು ಸಹ ಸೇವಿಸದಆಹಾರ ನೀಡುತ್ತಾರೆ ಎಂದು ವಿದ್ಯಾರ್ಥಿನಿಯರು ದೂರಿದರು.

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವವರೆಗೂ ಹಿಂದೆ ಸರಿಯಲ್ಲ ಎಂದುವಿದ್ಯಾರ್ಥಿಗಳು ಪಟ್ಟು ಹಿಡಿದರು. ನಂತರಆಗಮಿಸಿದ ಜಿಲ್ಲಾ ಹಿಂದುಳಿದ ವರ್ಗಗಳಇಲಾಖೆ ಅಧಿ ಕಾರಿ, ಪ್ರತಿಭಟನಾನಿರತವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಜಿಲ್ಲಾ ಧಿಕಾರಿಗಳಸೂಚನೆ ಮೇರೆಗೆ ನಾನು ಬಂದಿದ್ದು, ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳುತ್ತೇನೆ. ಬೇಡಿಕೆಗಳ ಈಡೇರಿಕೆಗೆ ಸದ್ಯದಿಂದಲೇಕ್ರಮಕೈಗೊಳ್ಳುತ್ತೇನೆ. ಪ್ರತಿಭಟನೆ ಕೈಬಿಟ್ಟು ವಸತಿ ಕೋಣೆಗಳಿಗೆ ತೆರಳಿ ಎಂದು ಮನವೊಲಿಸುವಲ್ಲಿ ಯಶಸ್ವಿಯಾದರು.

ಅಧಿಕಾರಿಯ ಭರವಸೆಗೆ ಒಪ್ಪಿದ ವಿದ್ಯಾರ್ಥಿಗಳು ತಮ್ಮ ಬೇಡಿಕೆ ಈಡೇರದಿದ್ದರೆಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆಯಿಂದ ಹಿಂದೆ ಸರಿದರು.

Advertisement

ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ್ದು, ಎರಡುದಿನದಲ್ಲಿ ಬಗೆಹರಿಸುವದಾಗಿ ಭರವಸೆನೀಡಲಾಗಿದೆ. ಅದರಂತೆ ಸೂಕ್ತ ಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ ವಿದ್ಯಾರ್ಥಿಗಳುವಾರ್ಡನ್‌ ವರ್ಗಾವಣೆಗೆ ಪಟ್ಟು ಹಿಡಿದಿದ್ದು,ಪರಿಶೀಲಿಸಿ ಕೂಡಲೇ ಈ ಕುರಿತುಕ್ರಮಕೈಗೊಳ್ಳಲಾಗುವುದು. ಮೆನು ಪ್ರಕಾರಊಟ ನೀಡಲು ಸೂಚಿಸಿದ್ದೇನೆ.  ಪ್ರಭು ದೊರೆ, ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿ

ಮೊರಾರ್ಜಿ ವಸತಿ ಶಾಲೆಯಲ್ಲಿ ಪೌಷ್ಟಿಕ ಆಹಾರ ನೀಡುವುದಿಲ್ಲ. ಮೆನು ಚಾಟ್‌ಪ್ರಕಾರ ಊಟ ನೀಡುವುದಿಲ್ಲ. ಇಂಗ್ಲಿಷ್‌ಬೋಧನಾ ವ್ಯವಸ್ಥೆ ಇಲ್ಲ. ವಾರ್ಡನ್‌ಎರಡು ವಾರಗಳಿಂದ ಶಾಲೆಗೆ ಬಂದಿಲ್ಲ.ಎರಡು ತಿಂಗಳಿಂದ ಸಮರ್ಪಕ ಊಟದವ್ಯವಸ್ಥೆ ಇಲ್ಲ. ಆರೋಗ್ಯ ಕುರಿತು ತಪಾಸಣೆಮಾಡುವವರಿಲ್ಲ. ವಿದ್ಯುತ್‌, ನೀರು ಎಲ್ಲವೂಇಲ್ಲಗಳ ಮಧ್ಯೆ ನಮ್ಮ ಅಭ್ಯಾಸ ನಡೆಸುವುದು ಕಷ್ಟಕರವಾಗಿದೆ. ಶ್ವೇತಾ, ವಿದ್ಯಾರ್ಥಿನಿ.

Advertisement

Udayavani is now on Telegram. Click here to join our channel and stay updated with the latest news.

Next