Advertisement

ಪ್ರಾಂಶುಪಾಲರ ದೌರ್ಜನ್ಯ: ನಸುಕಿನಲ್ಲೇ ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು!

11:29 AM Mar 08, 2022 | Team Udayavani |

ವಾಡಿ: ಪ್ರಾಂಶುಪಾಲೆ ನಿರಂತರವಾಗಿ ದೌರ್ಜನ್ಯ ಎಸಗಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಏಕಲವ್ಯ ವಸತಿ ಶಾಲೆ ವಿದ್ಯಾರ್ಥಿಗಳು ಬೆಳ್ಳಂಬೆಳಗ್ಗೆ ನಾಲ್ಕು ಗಂಟೆಗೆ ಪ್ರತಿಭಟನೆ ಆರಂಭಿಸಿದ ಘಟನೆ ಚಿತ್ತಾಪುರ ತಾಲೂಕಿನಲ್ಲಿ ನಡೆದಿದೆ.

Advertisement

ನಾಲವಾರ ವಲಯದ ಕೊಂಚೂರು ಏಕಲವ್ಯ ಮಾದರಿ ವಸತಿ ಶಾಲೆಯ ನೂರಾರು ವಿದ್ಯಾರ್ಥಿಗಳು ಮಂಗಳವಾರ ಬೆಳಗಿನಜಾಂವ ನಾಲ್ಕು ಗಂಟೆಗೆ ವಸತಿ ನಿಲಯ ತೊರೆದು ಪ್ರಾಂಶುಪಾಲರ ವಿರುದ್ಧ ಘೋಷಣೆ ಕೂಗಿದ ಪ್ರಸಂಗ ನಡೆದು ಸುತ್ತಲ ಗ್ರಾಮಸ್ಥರ ಗಮನ ಸೆಳೆದಿದೆ. 3 ಕಿ.ಮೀ. ದೂರದ ಲಾಡ್ಲಾಪುರ ಗ್ರಾಪಂ ಕಚೇರಿವರೆಗೆ ನಡೆದುಕೊಂಡೇ ಬಂದ ಸುಮಾರು ಐವತ್ತಕ್ಕೂ ಹೆಚ್ಚು ಮಕ್ಕಳು, ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ.

ನಮ್ಮ ಶಾಲೆಯ ಪ್ರಾಂಶುಪಾಲರು  ಮಹಿಳೆಯಾಗಿದ್ದು, ಹೆಣ್ಣು ಮಕ್ಕಳಿಗೆ ಹೆಚ್ಚು ಕಿರುಕುಳ ನೀಡುತ್ತಿದ್ದಾರೆ. ಕೋಲು ಮುರಿಯುವವರೆಗೂ ಹೊಡೆಯುತ್ತಾರೆ. ಪುರುಷ ಶಿಕ್ಷಕರೊಂದಿಗೆ ವಿದ್ಯಾರ್ಥಿನಿಯರ ಸಂಬಂಧ ಕಲ್ಪಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಪುರುಷ  ಶಿಕ್ಷಕರ ಕೋಣೆಗೆ ಹೋದರೆ ಬಸುರಿಯಾಗುತ್ತೀರಿ ಎಂದು ಅಶ್ಲೀಲ ಪದಗಳಿಂದ ಅವಮಾನಿಸುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಗಂಭೀರ ಆರೋಪ ಮಾಡಿದ್ದಾರೆ. ಕೂಡಲೇ ಪ್ರಾಂಶುಪಾಲೆಯನ್ನು ಬದಲಿಸಬೇಕು. ಬೇಡಿಕೆ ಈಡೇರುವ ವರೆಗೂ ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲ ಎಂದು ಮಕ್ಕಳು ಪಟ್ಟು ಹಿಡಿದಿದ್ದಾರೆ. ಮೇಲಾಧಿಕಾರಿಗಳ ಬರುವಿಕೆಗಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next