Advertisement

ವಿದ್ಯಾರ್ಥಿ, ಪೋಷಕರು ಆರೋಗ್ಯದ ಕಡೆ ಗಮನಹರಿಸಿ

06:10 PM Jul 11, 2022 | Team Udayavani |

ಚಾಮರಾಜನಗರ: ವಿದ್ಯಾರ್ಥಿಗಳು ಹೆಚ್ಚು ಓದುವ ಜೊತೆಗೆ ಆರೋಗ್ಯ ಕಡೆಯು ಆಸಕ್ತಿ ವಹಿಸಬೇಕು. ಪೋಷಕರು ತಮ್ಮ ಮಕ್ಕಳ ವ್ಯಾಸಂಗ ಜೊತೆಗೆ ಅವರ ಆರೋಗ್ಯ ಕಡೆ ಗಮನ ನೀಡಬೇಕು ಎಂದು ಮೈಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಎನ್‌.ರಾಗಿಣಿ ಹೇಳಿದರು.

Advertisement

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಬ್ರೈಟ್‌ ಪಿಯು ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆ ಹಾಗೂ ಬ್ರೆçಟ್‌ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ನಡೆದ ಭೌತಶಾಸ್ತ್ರ ವಿಷಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಾಗೂ ಶೇ.100ರಷ್ಟು ಫ‌ಲಿತಾಂಶ ಗಳಿಸಿರುವ ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿರುವ ಭಯ ದೂರ ಮಾಡಿ: ವಿಜ್ಞಾನವೇ ಮುಖ್ಯವಲ್ಲ. ಬೇಸಿಕ್‌ ವಿಜ್ಞಾನ ಬಹಳ ಮುಖ್ಯವಾಗಿರುತ್ತದೆ. ನ್ಯಾಷನಲ್‌ ಎಜುಕೇಷನ್‌ ಪಾಲಿಸಿ ಬರುತ್ತಿದೆ. 4 ವರ್ಷಗಳ ಪದವಿ ಇದ್ದು, ಬಹಳಷ್ಟು ವಿಷಯಗಳಲ್ಲಿ ಪದವಿ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶವಿದೆ. ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ವ್ಯಾಸಂಗ ಮಾಡಿದರೆ, ಹೆಚ್ಚಿನ ಅಂಕಗಳನ್ನು ತೆಗೆದುಕೊಳ್ಳುವುದು ಕಷ್ಟವಲ್ಲ. ಯಾವುದೋ ಕಷ್ಟವಲ್ಲ. ಭೌತ ಶಾಸ್ತ್ರವನ್ನು ಸುಲಭವಾಗಿ ಹೇಳುವ ಮೂಲಕ ಉಪನ್ಯಾಸಕರು ಮಕ್ಕಳಲ್ಲಿರುವ ಭಯವನ್ನು ದೂರ ಮಾಡಬೇಕು ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒತ್ತು ನೀಡಿ: ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗಮಲ್ಲೇಶ್‌ ಮಾತನಾಡಿ, ವಿದ್ಯಾರ್ಥಿಗಳು ಪದವಿ ವ್ಯಾಸಂಗ ಮಾಡುವ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಒತ್ತು ಕೊಡಬೇಕು. ಸ್ಪರ್ಧಾತ್ಮಕವಾಗಿ ಹೆಚ್ಚು ಬಲಿಷ್ಠತೆಯನ್ನು ಪಡೆದುಕೊಳ್ಳಬೇಕು. ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿರುವ ಮಕ್ಕಳು ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಿ. ಭೌತಶಾಸ್ತ್ರ ಉಪನ್ಯಾಸಕರ ವೇದಿಕೆಯ ಕಾರ್ಯ ಶ್ಲಾಘನೀಯ. ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಗಳಿಸಿರುವುದು ಹೆಮ್ಮೆ ತಂದಿದೆ.ಇದಕ್ಕೆಲ್ಲ ಕಾರಣ ಉಪನ್ಯಾಸಕ ವರ್ಗದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತರಬೇತಿ ನೀಡಲು ಮುಂದಾಗಿ: ಕಳೆದ ವರ್ಷ ವಿದ್ಯಾರ್ಥಿಗಳಿಗಾಗಿ ತಯಾರು ಮಾಡಿದ್ದ ಭೌತಶಾಸ್ತ್ರ ಕೈಪಿಡಿಯಲ್ಲಿ 80 ಅಂಕಗಳಿಗೆ ಕೈಪಿಡಿಯಲ್ಲಿರುವ ಪ್ರಶ್ನೆಗಳು ಬಂದಿವೆ. ಇದೊಂದು ಸಾಧನೆಯಾಗಿದೆ. ನಮ್ಮ ಜಿಲ್ಲೆಂ ಅಲ್ಲದೇ ಇತರೇ ಜಿಲ್ಲೆಗಳಿಂದಲೂ ಸಹ ಪ್ರಶಂಸೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸಿಇಟಿ ಮತ್ತು ನೀಟ್‌ ಬಗ್ಗೆಯು ಉಪನ್ಯಾಸಕ ವೇದಿಕೆ ತರಬೇತಿ ನೀಡಲು ಮುಂದಾಗಬೇಕು ಎಂದರು.

Advertisement

ಕಾರ್ಯಕ್ರಮದಲ್ಲಿ 100ರಷ್ಟು ಅಂಕ ಗಳಿಸಿದ ಭೌತಶಾಸ್ತ್ರ ವಿಭಾಗದ ಉಪನ್ಯಾಸಕರನ್ನು ಸಹ ಸನ್ಮಾನಿಸಲಾಯಿತು. ಬಸವರಾಜೇಂದ್ರ ಆಸ್ಪತ್ರೆ ಎಂ.ಡಿ.ಡಾ. ಶ್ವೇತಾ, ಎಂಐಟಿ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ಡಾ.ವೈ.ಟಿ.ಕೃಷ್ಣೇಗೌಡ, ಕರ್ನಾಟಕ ಭೌತಶಾಸ್ತ್ರ ವೇದಿಕೆಯ ಅಧ್ಯಕ್ಷ ಎ. ನಾರಾಯಣಪ್ಪ, ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಬಂಗಾರ ನಾಯಕ್‌, ಉಪನ್ಯಾಸಕರ ಸಂಘದ ಅಧ್ಯಕ್ಷ ನರೇಂದ್ರ ನಾಥ್‌, ಬ್ರೆçಟ್‌ ಪಿಯು ಕಾಲೇಜಿನ ವ್ಯವಸ್ಥಾಪಕಿ ಎನ್‌. ಮೇನಕಾ, ಸರ್ಕಾರಿ ನೌಕರರ ಸಂಘದ ಪಿ.ಸಿದ್ದಪ್ಪ, ಭೌತಶಾಸ್ತ್ರ ವಿಭಾಗದ ಜಿಲ್ಲಾಧ್ಯಕ್ಷ ಟಿ.ಮಧು, ಉಪಾಧ್ಯಕ್ಷ ಷಡಕ್ಷರ ಸ್ವಾಮಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next