Advertisement

ನಮ್ಮನ್ನು ಬಿಟ್ಟು ಹೋಗ್ಬೇಡಿ… ನಿವೃತ್ತಿ ಹೊಂದಿದ ಪ್ರಾಂಶುಪಾಲರ ಬಳಿ ವಿದ್ಯಾರ್ಥಿಗಳ ಅಳಲು

09:40 AM Apr 07, 2024 | Team Udayavani |

ಉತ್ತರ ಪ್ರದೇಶ: ನಮ್ಮ ದೇಶದಲ್ಲಿ ಗುರುವಿಗೆ ವಿಶೇಷವಾದ ಸ್ಥಾನಮಾನ ಗೌರವ ಹಿಂದಿನಿಂದಲೂ ಇದೆ. ಶಿಕ್ಷಕರ ಉದ್ಯೋಗವು ಎಲ್ಲಕ್ಕಿಂತಲೂ ಮೇಲು ಎಂಬ ಭಾವನೆಯೂ ಇದೆ. ಯಾಕೆಂದರೆ ಶಿಕ್ಷಕರು ಮುಂದಿನ ಸಮಾಜವನ್ನು ರೂಪಿಸುವವರು, ಮಕ್ಕಳನ್ನು ತಿದ್ದಿ ತೀಡಿ ಅವರ ಭವಿಷ್ಯಕ್ಕೊಂದು ಸುಂದರ ರೂಪ ನೀಡುವವರು ಅದೇ ರೀತಿ ಒಬ್ಬ ಒಳ್ಳೆಯ ಗುರು ತಮ್ಮ ಶಿಷ್ಯರನ್ನು ಬಿಟ್ಟು ಹೋಗುವ ಸಮಯ ಬಂದಾಗ ಆ ಮಕ್ಕಳ ಸ್ಥಿತಿ ಹೇಗಿರುತ್ತೆ ಅಲ್ವೇ.. ಅದೇ ರೀತಿ ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಸಂಸ್ಕಾರ ಕಲಿಸಿಕೊಟ್ಟ ಪ್ರಾಂಶುಪಾಲರು ನಿವೃತ್ತಿ ಹೊಂದಿದ ಸಮಯದಲ್ಲಿ ಆ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಪ್ರಾಂಶುಪಾಲರು ಶಾಲೆಯನ್ನು ಬಿಟ್ಟು ಹೋಗದಂತೆ ಒತ್ತಾಯಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಅಟಲ್ ವಸತಿ ಶಾಲೆಯ ಪ್ರಾಂಶುಪಾಲರಾದ ಘನಶ್ಯಾಮ್ ಕುಮಾರ್ ಅವರು ನಿವೃತ್ತಿ ಹೊಂದಿದ್ದಾರೆ ಅಲ್ಲದೆ ಶಾಲೆಯಲ್ಲಿ ಮಕ್ಕಳಿಗೆ ಅವರ ಕೊನೆಯ ತರಗತಿಯಾಗಿದೆ ಇದರಿಂದ ಬೇಸರಗೊಂಡ ಮಕ್ಕಳು ತಮ್ಮ ಪ್ರಾಂಶುಪಾಲರನ್ನು ಬಿಟ್ಟು ಹೋಗಲು ಬಿಡಲಿಲ್ಲ ಬದಲಾಗಿ ಪ್ರಾಂಶುಪಾಲರ ಕಚೇರಿಗೆ ಬಂದ ವಿದ್ಯಾರ್ಥಿಗಳು ಪ್ರಾಂಶುಪಾಲರ ಕಾಲಿಗೆ ಬಿದ್ದು ನಮ್ಮನ್ನು ಬಿಟ್ಟು ಹೋಗಬೇಡಿ ನಿಮ್ಮ ಸೇವಾ ಅವಧಿಯನ್ನು ಇನ್ನು ಕೆಲ ಕಾಲ ಹೆಚ್ಚಿಸಿ ಎಂದು ಕೇಳಿಕೊಂಡಿದ್ದಾರೆ ಅಲ್ಲದೆ ನೀವು ಶಾಲೆಯಲ್ಲಿ ಇನ್ನಷ್ಟು ದಿನ ಉಳಿದಿಕೊಳ್ಳುವ ಭರವಸೆ ನೀಡುವವರೆಗೆ ನಾವು ಊಟ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ, ಇತ್ತ ಮಕ್ಕಳು ಅಳುತ್ತಿರುವುದನ್ನು ನೋಡಿದ ಪ್ರಾಂಶುಪಾಲರ ಕಣ್ಣಂಚಲ್ಲೂ ನೀರು ಜಿನುಗಿದೆ ಬಳಿಕ ಮಕ್ಕಳನ್ನು ಸಮಾಧಾನಪಡಿಸಿದ ಪ್ರಾಂಶುಪಾಲರು ಮಕ್ಕಳಿಗೆ ಶಾಲೆಯ ಕ್ಯಾಂಟೀನ್ ನಲ್ಲಿ ಊಟ ಮಾಡುವಂತೆ ಹೇಳಿದ್ದಾರೆ ಇದಕ್ಕೂ ಒಪ್ಪದ ವಿದ್ಯಾರ್ಥಿಗಳು ನೀವು ನಮ್ಮ ಶಾಲೆಯಲ್ಲಿ ಇರುವುದಾದರೆ ಮಾತ್ರ ಊಟ ಮಾಡುವ ಭರವಸೆಯನ್ನು ನೀಡಿದ್ದಾರೆ.

ಇದನ್ನೂ ಓದಿ: Election; ನಿಮ್ಮಂತವರು ಹಲವರು ಬಂದು ಹೋಗಿದ್ದಾರೆ..: ರಾಹುಲ್ ವಿರುದ್ದ ಸ್ಮೃತಿ ವಾಗ್ದಾಳಿ

Advertisement

Udayavani is now on Telegram. Click here to join our channel and stay updated with the latest news.

Next