Advertisement

ಭಾರತದ ವಿದ್ಯಾರ್ಥಿಗಳು ಕ್ರಿಯೇಟಿವ್‌ ಅಲ್ಲ

10:05 AM Feb 27, 2018 | Team Udayavani |

ಹೊಸದಿಲ್ಲಿ: “”ಭಾರತದ ಯುವಜನರು ಎಂಬಿಎಯಂಥ ದೊಡ್ಡ ಡಿಗ್ರಿಗಳನ್ನು ಪಡೆಯಬಹುದು. ಉತ್ತಮ ನೌಕರಿಗೂ ಹೋಗಿ, ಮುಂದೊಂದು ದಿನ ಮರ್ಸಿಡಿಸ್‌ ಬೆಂಝ್ ಕಾರನ್ನೂ ಕೊಳ್ಳಬಹುದು. ಆದರೆ, ಅವರಲ್ಲಿ, ರಚನಾತ್ಮಕ ಕ್ರಿಯೇಟಿವಿಟಿ ಇರುವುದಿಲ್ಲ” ಎಂದು ಆ್ಯಪಲ್‌ ಸಂಸ್ಥೆಯ ಸಹ ಸಂಸ್ಥಾಪಕ ಸ್ಟೀವ್‌ ವೊಸ್ನಿಯಾಕ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಆ್ಯಪಲ್‌ ಕಂಪೆನಿಯ 2ನೇ ಸ್ಟೀವ್‌ ಜಾಬ್ಸ್ (ಆ್ಯಪಲ್‌ ಕಂಪೆನಿಯ ಸಂಸ್ಥಾಪಕ) ಎಂದೇ ಖ್ಯಾತಿ ಗಳಿಸಿರುವ ವೊಸ್ನಿಯಾಕ್‌, ಎಕನಾಮಿಕ್‌ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಹೀಗೆ ಹೇಳಿದ್ದು, “”ಭಾರತೀಯ ಶಿಕ್ಷಣ ಪದ್ಧತಿಯ ಅನುಸಾರ ಇಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಮ್ಮ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕಗಳಿಸುವುದು, ಉತ್ತಮ ಉದ್ಯೋಗ ಗಳಿಸುವುದು, ಉನ್ನತ ಜೀವನ ಸಾಗಿಸುವ ಕಡೆಗೆ ಪ್ರೇರೇಪಿಸಲಾಗುತ್ತದೆ. ಹಾಗಾಗಿಯೇ ಇಲ್ಲಿ, ಕ್ರಿಯೇಟಿವಿಟಿ ಕಡಿಮೆ” ಎಂದಿದ್ದಾರೆ.

ಕ್ರಿಯಾಶೀಲತೆ ಕಡಿಮೆ ಆಗಿರುವುದರಿಂದಲೇ, ಐಟಿ ಕ್ಷೇತ್ರದಲ್ಲಿ ಭಾರತ ಸಾಧನೆ ಮಾಡಿದ್ದರೂ ಇಲ್ಲಿ ಗೂಗಲ್‌, ಫೇಸ್‌ಬುಕ್‌ ಅಥವಾ ಆ್ಯಪಲ್‌ಗ‌ಳಂಥ ಕಂಪೆನಿಗಳು ಸ್ಥಾಪನೆಗೊಂಡಿಲ್ಲ. ಇನ್ಫೋಸಿಸ್‌ ಸಂಸ್ಥೆ ಭಾರತೀಯ ಐಟಿ ಕ್ಷೇತ್ರದ ದೊಡ್ಡ ಕಂಪೆನಿಯಾಗಿದ್ದರೂ ಅದು ರಚನಾತ್ಮಕ ಕಂಪನಿ ಎನಿಸಿಕೊಂಡಿಲ್ಲ. ಹಾಗಾಗಿ, ಅದು ಗೂಗಲ್‌ ಮಟ್ಟಕ್ಕೆ ಬೆಳೆಯುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next