ಹೈದರಾಬಾದ್ : ಇಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ತನ್ನ 213 ವಿದ್ಯಾರ್ಥಿಗಳಿಗೆ 2018-19ರ ಮೊದಲ ಹಂತದ ಕ್ಯಾಂಪಸ್ ಪ್ಲೇಸ್‌ಮೆಂಟ್ ನಲ್ಲಿ 80 ಕಂಪೆನಿಗಳಿಂದ ಉದ್ಯೋಗಗಳ ಆಫರ್ ಬಂದಿದೆ ಎಂದು ತಿಳಿಸಿದೆ.
2017-18ರಲ್ಲಿ ತಮ್ಮ 191 ವಿದ್ಯಾರ್ಥಿಗಳಿಗೆ 68 ಕಂಪೆನಿಗಳಿಂದ ಆಫರ್ ಬಂದಿತ್ತು. ಈ ವರ್ಷ ಡಿ.1ರಿಂದ 22ರ ವರೆಗಿನ ಅವದಿಯಲ್ಲಿ ಮೊದಲ ಹಂತದ ಪ್ಲೇಸ್‌ಮೆಂಟ್ ಗೆ ಒಟ್ಟು 418 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು ಎಂದು ವಿದ್ಯಾಲಯ ಹೇಳಿದೆ.
17 ವಿದ್ಯಾರ್ಥಿಗಳು ಅಮಝಾನ್, ಮೈಕ್ರೋಸಾಫ್ಟ್, ಕ್ವಾಲ್‌ಕಾಮ್, ಸ್ವಿಗ್ಗಿ, ಎಲೆಕ್ಟ್ರಾನಿಕ್ ಆರ್ಟ್ ಮತ್ತು ಡಿ’ಶಾ ಕಂಪೆನಗಳ ಆಫರ್ ಸ್ವೀಕರಿಸಿದ್ದಾರೆ. ಇಬ್ಬರಿಗೆ ISRO ದಿಂದ ನೇಮಕಾತಿ ಸಿಕ್ಕಿದೆ ಎಂದು ವಿದ್ಯಾಲಯ ತಿಳಿಸಿದೆ.