ಗದಗ: ವಿದ್ಯಾರ್ಥಿಗಳು ತಂತ್ರಜ್ಞಾನದ ತಿಳಿವಳಿಕೆಯೊಂದಿಗೆ ಅದರ ಸದ್ಬಳಕೆಯ ಕಲೆಯನ್ನೂ ಕರಗತ ಮಾಡಿಕೊಳ್ಳಬೇಕು. ವಿದ್ಯಾರ್ಥಿ ಜೀವನದ ಸವಿಯನ್ನು ಅನುಭವಿಸುವುದರ ಜೊತೆಗೆ ಅದನ್ನು ಯಶಸ್ವಿ ಜೀವನಕ್ಕೆ ಮೆಟ್ಟಿಲನ್ನಾಗಿಸಿಕೊಳ್ಳಬೇಕು ಎಂದು ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಟಿಸಿಎಸ್ ಕಂಪನಿಯ ಕರ್ನಾಟಕ ಅಕ್ಯಾಡೆಮಿಕ್ ಮಾಹಿತಿ ಕೇಂದ್ರದ ಮುಖ್ಯಸ್ಥ ಶ್ರೀನಿವಾಸ ರಾಮಾನುಜಂ ಅಭಿಪ್ರಾಯಪಟ್ಟರು.
ಟಿಸಿಎಸ್ ಮಾಹಿತಿ ಕೇಂದ್ರದ ಅಧಿಕಾರಿ ನಾಗಪ್ಪ ಬಿ. ಮಾತನಾಡಿ, ಜೀವನದಲ್ಲಿ ಯಶಸ್ಸು ಕಾಣಲು ಪ್ರತಿಯೊಬ್ಬರೂ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶ್ರಮ ವಹಿಸಬೇಕು. ಪಠ್ಯದೊಂದಿಗೆ ಪಠ್ಯೇತರವಾಗಿ ಅಧ್ಯಯ, ಹೊಸ ಪ್ರಯೋಗಗಳ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಯಾವುದೇ ವಿಚಾರದಲ್ಲಿ ಕೀಳರಿಮೆ ಹೊಂದದೇ, ಛಲ ಮತ್ತು ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ಇಆರ್‌ಪಿ ಪ್ರೋಡಕ್ಸ್‌ನ ಮುಖ್ಯ ಸಲಹೆಗಾರ್ತಿ ವನಿತಾ ಸತೀಶ ಮಾತನಾಡಿ, ಇಂಗ್ಲಿಷ್ ಭಾಷೆಗೆ ಜಾಗತಿಕ ಮನ್ನಣೆಯಿದ್ದು, ವಿದ್ಯಾರ್ಥಿಗಳು ಇಂಗ್ಲಿಷ್ ಭಾಷಾ ಸಂಹನ ಕೌಶಲ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ| ವಿ.ಎಂ. ಪಾಟೀಲ, ಆರ್‌ಇಸಿ ಉತ್ಸವದ ಚೇರಮನ್ ಪ್ರೊ| ಸತೀಶ ಜೆ., ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ನಾಗನಗೌಡ ಇದ್ದರು.
Advertisement
ಸಮೀಪದ ಹುಲಕೋಟಿ ರೂರಲ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆರ್‌ಇಸಿ ಉತ್ಸವದ ಎರಡನೇ ದಿನವಾದ ಶುಕ್ರವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಮ್ಮ ಕಾಲೇಜು ದಿನಗಳು, ಉಪನ್ಯಾಸಕರ ಪ್ರೋತ್ಸಾಹವನ್ನು ಮೆಲುಕು ಹಾಕಿದರು.
Related Articles
Advertisement