Advertisement

ಆಕಾಶದಡಿ ಪಾಠ ಕೇಳುವ ಪ್ರಸಂಗ

03:06 PM Jan 01, 2020 | Suhan S |

ನರೇಗಲ್ಲ: ಸಚಿವ ಸಿ.ಸಿ. ಪಾಟೀಲ ತವರು ಕ್ಷೇತ್ರದಲ್ಲಿನ ಡ.ಸ. ಹಡಗಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಛಾವಣಿ ಇಲ್ಲದೇ ಸುಡುವ ಬಿಸಿಲು, ಚಳಿ, ಗಾಳಿ ಎನ್ನದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ

Advertisement

ನಿರ್ಲಕ್ಷವೋ ಅಥವಾ ಜನಪ್ರತಿನಿಧಿಗಳ ನಿಷ್ಕಾಳಜಿಯೋ ತಿಳಿಯದಾಗಿದೆ. ಶಾಲೆಗೆ ನಿತ್ಯ 198ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುತ್ತಾರೆ. 11 ಕೊಠಡಿಗಳಲ್ಲಿ ಸಮಸ್ಯೆಯಿಂದ 4 ಮತ್ತು 5 ತರಗತಿಯನ್ನು ಕೂಡಿಸಿ ಪಾಠ ಮಾಡುವಸ್ಥಿತಿಯಿದೆ. ಒಟ್ಟು 11 ಕೊಠಡಿಗಳು ಇದ್ದರೂ ವಿದ್ಯಾರ್ಥಿಗಳಿಗೆ ಸಾಲುತ್ತಿಲ್ಲ. ಎರಡು ಕೊಠಡಿಗಳ ಮೇಲ್ಛಾವಣಿ ಕಿತ್ತು ಹೋಗಿರುವುದರಿಂದ ಅನಿವಾರ್ಯವಾಗಿ ಆ ಎರಡು ಕೊಠಡಿಯಲ್ಲಿ ಆಕಾಶ ನೋಡುತ್ತಾ ಪಾಠ ಕೇಳುವ ಪ್ರಸಂಗ ಕಣ್ಣ ಮುಂದೆ ನಿರ್ಮಾಣವಾಗಿದೆ.

ಈ ಶಾಲೆ ಎರಡು ಕೊಠಡಿಗಳ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡಿತ್ತು. ಆದ್ದರಿಂದ ಇತ್ತೀಚೆಗೆ ತಾ.ಪಂ ವತಿಯಿಂದ 2 ಲಕ್ಷ ರೂ. ಅನುದಾನದಲ್ಲಿ ಈ ಶಾಲೆಗೆ ಛಾವಣಿ (ತಗಡು) ಜೋಡಣೆ ಮಾಡುವುದಕ್ಕಾಗಿ ಗುತ್ತಿಗೆ ನೀಡಿದ್ದರು. ಆದರೆ, ಗುತ್ತಿಗೆದಾರ ಕಳಪೆ ಗುಣಮಟ್ಟದ ತಗಡು ಜೋಡಣೆ ಮಾಡುವ ಸಂಧರ್ಭದಲ್ಲಿ ಶಾಲೆ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿ ಈ ಕೆಲಸವನ್ನು ಸ್ಥಗಿತಗೊಳಿಸಿದ್ದರು. ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಬೇಕಿದ್ದ ಶಿಕ್ಷಣ ಇಲಾಖೆ ಕಂಡು ಕಾಣದ್ದಂತೆ ವರ್ತಿಸುತ್ತಿರುವುದು ವಿಪರ್ಯಾಸವಾಗಿದೆ.

ಡ.ಸ. ಹಡಗಲಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆಯ ಬಗ್ಗೆ ಈಗಾಗಲೇ ಇಲಾಖೆ ಗಮನಕ್ಕೆ ಬಂದಿದೆ. ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಶಾಲೆ ಮೇಲ್ಛಾವಣಿ ಕಾಮಗಾರಿ ಪ್ರಾರಂಭಿಸಲಾಗುವುದು. -ಎನ್‌. ನಂಜುಡಯ್ಯ, ರೋಣ ಕ್ಷೇತ್ರ ಶಿಕ್ಷಣಾಧಿಕಾರಿ

 

Advertisement

-ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next