ಮೈಸೂರು: ಮಕ್ಕಳ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಮುಂಜಾನೆಯೇ ಕೈಗೆ ಗ್ಲೌಸ್ ತೊಟ್ಟು, ಪೊರಕೆ ಹಿಡಿದು ಶಾಲಾ ಆವರಣ ದಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಹಾಗೂ ತಮ್ಮ ಮನೆಗಳಲ್ಲಿ ಸಂಗ್ರಹವಾಗಿದ್ದ ನಿಷೇಧಿತ ಪ್ಲಾಸ್ಟಿಕನ್ನು ತಂದು ಶಾಲಾ ಮುಂಭಾಗದಲ್ಲಿ ನಗರ ಪಾಲಿಕೆ ಸ್ಥಾಪನೆ ಮಾಡಿದ್ದ ಡಸ್ಟ್ ಬೀನ್‌ಗೆ ಹಾಕುವ ಮೂಲಕ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿದರು.
ಪ್ಲಾಸ್ಟಿಕ್ ಸಂಗ್ರಹ ಮತ್ತು ಶ್ರಮದಾನ: ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕವಾಗುವುದರ ಜೊತೆಗೆ ಮಾನವನ ಆರೋಗ್ಯದ ಮೇಲು ಕೆಟ್ಟ ಪರಿಣಾಮ ಬೀರಲಿದೆ. ಹಾಗೂ ಅರಣ್ಯ ಪ್ರದೇಶ ನಾಶವಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಮಕ್ಕಳ ದಿನದ ಪ್ರಯುಕ್ತ ನಗರದ 65 ವಾರ್ಡ್‌ಗಳಿರುವ ಸುಮಾರು 500ಕ್ಕೂ ಹೆಚ್ಚು ಶಾಲೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಸಂಗ್ರಹ ಮತ್ತು ಶ್ರಮದಾನ ಹಮ್ಮಿಕೊಂಡಿತ್ತು.
ಕೈಗೆ ಗ್ಲೌಸ್ ತೊಟ್ಟು, ಪೊರಕೆ ಹಿಡಿದ ಮಕ್ಕಳು: ಸಾಂಕೇತಿಕವಾಗಿ ಕುವೆಂಪುನಗರದಲ್ಲಿರುವ ವಿದ್ಯಾ ವರ್ಧಕ ಶಾಲೆಯಲ್ಲಿ ಆಯೋಜಿಸಿದ್ದ ಸಮಾ ರಂಭದಲ್ಲಿ ಮಕ್ಕಳೆಲ್ಲಾ ಬೆಳಗ್ಗೆಯೇ ಕೈಗೆ ಗ್ಲೌಸ್ ತೊಟ್ಟು, ಪೊರಕೆ ಹಿಡಿದು ಸ್ವತ್ಛತಾ ಕಾರ್ಯ ನಡೆಸಿದರು. ಶಾಲಾ ಆವರಣವನ್ನು ಸ್ವತಃ ಶುಚಿಗೊಳಿಸಿದ ಎಲ್ಲ ಮಕ್ಕಳು “ಪ್ಲಾಸ್ಟಿಕ್’ ವಿರುದ್ಧ ಜಾಗೃತಿ ಮೂಡಿಸಿ ಅರ್ಥಪೂರ್ಣವಾಗಿ ಮಕ್ಕಳ ದಿನವನ್ನು ಆಚರಿಸಿದರು.
ಸಾರ್ವಜನಿಕರ ಗಮನ ಸೆಳೆದ್ರು: ಬೆಳಗ್ಗೆಯೇ ಮಕ್ಕಳು ಕೈಗೆ ಗೌಸು ತೊಟ್ಟು, ಪೊರಕೆ ಹಿಡಿದು ಇಡೀ ಶಾಲಾ ಆವರಣವನ್ನು ಸ್ವತ್ಛಗೊಳಿಸಿದರು. ಶಾಲೆಯ ಸುತ್ತಮುತ್ತ ರಸ್ತೆ, ಪ್ರದೇಶವನ್ನು ಶುಚಿಗೊಳಿಸಿ ಸಾರ್ವಜನಿಕರ ಗಮನ ಸೆಳೆದರು. ಹಲವು ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ತಮ್ಮ ಶಾಲಾ ಆವರಣದಲ್ಲಿ ಸಂಗ್ರಹಿಸಿ ಪಾಲಿಕೆ ಕೊಟ್ಟಿದ್ದ ಡಸ್ಟ್ ಬೀನ್‌ಗೆ ಹಾಕಿದರು.
ಪ್ಲಾಸ್ಟಿಕ್‌ನಿಂದ ಪೇಪರ್ ಬ್ಯಾಗ್ ಸಂದೇಶ: ಅಲ್ಲದೆ, ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಸದಂತೆ ಪ್ರತಿಜ್ಞೆ ಮಾಡಿದರು. ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಯಾವ ವಸ್ತುಗಳನ್ನು ಬಳಸಬಹುದು ಎಂಬ ಪ್ರಾತ್ಯಕ್ಷಿಕೆ ನೀಡಿದರು. ಕೆಲ ಶಾಲೆಗಳಲ್ಲಿ ಪ್ಲಾಸ್ಟಿಕ್‌ನಿಂದ ಪೇಪರ್ ಬ್ಯಾಗ್ ಎಂಬ ಸಂದೇಶದೊಂದಿಗೆ ವಸ್ತು ಪ್ರದರ್ಶನವೂ ನಡೆಯಿತು.
ವಿದ್ಯಾವರ್ಧಕ ಶಾಲೆಯಲ್ಲಿ ನಡೆದ ಸಮಾ ರಂಭದಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಭಾಗವಹಿಸಿ ಪಾಲಿಕೆ ಕಾರ್ಯವನ್ನು ಶ್ಲಾ ಸಿದರು. ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಮತ್ತು ಅಧಿಕಾರಿಗಳು ಇದ್ದರು