Advertisement
ಶುಕ್ರವಾರ ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿ ಗಳನ್ನು ಸಿಂಗರಿಸಿದ ಎತ್ತಿನ ಗಾಡಿಯಲ್ಲಿ ಹೊತ್ತು ತಂದು ಸಂಭ್ರಮಿಸಿದರು. ಶಾಲಾರಂಭ ಮೇ 29ರಂದೇ ಆಗಿದ್ದರೂ ಪ್ರಾರಂಭೋತ್ಸವದ ಸಂಭ್ರಮ ವಿಶಿಷ್ಟವಾಗಿ ನಡೆಯಿತು. ಎತ್ತಿನ ಗಾಡಿಯೊಂದನ್ನು ಸಿಂಗರಿಸಿ ಸಜ್ಜುಗೊಳಿಸಿ ಚಿಣ್ಣರನ್ನು ಆ ಗಾಡಿಯಲ್ಲಿ ಕುಳ್ಳಿರಿಸಿ ಶಿಕ್ಷಕರು, ಹೆತ್ತವರು ಹೆಗಲು ಕೊಟ್ಟರು. ವಿದ್ಯಾರ್ಥಿಗಳು ಗಾಡಿಯೇರಿ ಕೇಕೆ ಹಾಕುತ್ತಾ ಶಾಲೆಯ ಕಡೆ ತೆರಳಿ ಸಂಭ್ರಮಿಸಿದರು.
ಮನೋರಂಜನೆ ಉದ್ದೇಶ
ಎತ್ತಿನ ಗಾಡಿ ಮೂಲಕ ಪ್ರಾರಂಭೋತ್ಸವ ವಿಶೇಷ ಪರಿಕಲ್ಪನೆಯಾಗಿದ್ದು ಈ ಮೂಲಕ ವಿದ್ಯಾರ್ಥಿಗಳಿಗೆ ಮನೋರಂಜನೆ ನೀಡುವುದು ನಮ್ಮ ಮುಖ್ಯ ಉದ್ದೇಶ. ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆ ಇದ್ದರೂ ಈ ಬಾರಿ 25 ವಿದ್ಯಾರ್ಥಿಗಳ ನೋಂದಣಿ ಆಗಿದೆ. ಶಿಕ್ಷಣ ಪ್ರೇಮಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ನೆರವಿನಿಂದ ಈ ಶಾಲೆ ಮುನ್ನಡೆಯುತ್ತಿದೆ.
-ಪೂರ್ಣಿಮಾ ಭಟ್, ಮುಖ್ಯ ಶಿಕ್ಷಕಿ
-ಪೂರ್ಣಿಮಾ ಭಟ್, ಮುಖ್ಯ ಶಿಕ್ಷಕಿ
ಗಮನಾರ್ಹ ಸಾಧನೆ
ಮುಂಡ್ಕೂರು ಶಾಲೆ ತಾಲೂಕಿನಲ್ಲಿಯೇ ವಿವಿಧ ಶೈಕ್ಷಣಿಕ ಆಂದೋಲನಗಳ ಮೂಲಕ ಗಮನ ಸೆಳೆಯುತ್ತಿದೆ. ಸರಕಾರಿ ಕನ್ನಡ ಮಾಧ್ಯಮ ಶಾಲೆಯೊಂದು ಇಂತಹ ಗಮನಾರ್ಹ ಸಾಧನೆ ತೋರುತ್ತಿರುವುದು ಉಲ್ಲೇಖನೀಯ. ಇಲ್ಲಿ ವಿದ್ಯಾರ್ಥಿಗಳ ನೋಂದಣಿ ಉತ್ತಮವಾಗಿದೆ.
-ಅರುಣ್ ರಾವ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ
-ಅರುಣ್ ರಾವ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ