Advertisement

“ವಿದ್ಯಾರ್ಥಿಗಳು ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಳ್ಳಿ’

12:01 AM May 07, 2019 | Team Udayavani |

ಮಹಾನಗರ: ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನ ನಡೆಯಿತು.

Advertisement

ಮಂಗಳೂರಿನ ಕೋಡ್‌ ಕ್ರಾಫ್ಟ್‌ ಟೆಕ್ನಾ ಲಜಿ ಸಹ ಸಂಸ್ಥಾಪಕ, ಸಿಟಿಒ ಪ್ರವೀಣ್‌ ಕ್ಯಾಸ್ಟಲಿನೋ ಪ್ರಾಜೆಕ್ಟ್ ಪ್ರದರ್ಶನವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ಸಂಪೂರ್ಣವಾಗಿ ಪ್ರಾಜೆಕ್ಟ್ಗಳಲ್ಲಿ ತೊಡಗಿ ಸಿಕೊಳ್ಳಬೇಕು ಮತ್ತು ಪ್ರಾಜೆಕ್ಟ್ಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರಬೇಕು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಶ್ರೀನಿವಾಸ ಮಯ್ಯ ಡಿ. ವಹಿಸಿದ್ದರು. ತಮ್ಮ ಪ್ರಾಜೆಕ್ಟ್ಗಳ ಬಗ್ಗೆ ಎಲ್ಲವನ್ನೂ ತಿಳಿದಿರಬೇಕು

ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪ್ರಾಜೆಕ್ಟ್ ಪ್ರದರ್ಶನ- 2019ರ ಸಂಚಾಲಕ ಡಾ| ಶಂಕರ್‌ ಕೆ.ಎಸ್‌. ಅವರು ಪ್ರದರ್ಶನದ ವಿವರ ನೀಡಿದರು.

ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಕೌನ್ಸೆಲ್‌ (ಕೆಎಸ್‌ಎಸ್ಟಿ) ಪ್ರಾಯೋಜಕತ್ವದ 9 ಪ್ರಾಜೆಕ್ಟ್ಗಳನ್ನು ಒಳಗೊಂಡಂತೆ ಒಟ್ಟು 136 ಅಂತಿಮ ವರ್ಷದ ಬಿ.ಇ. ಪ್ರಾಜೆಕ್ಟ್ ಗಳನ್ನು ಮತ್ತು ಪ್ರಿ-ಫೈನಲ್‌ ವರ್ಷದ 206 ಮಿನಿ ಪ್ರಾಜೆಕ್ಟ್ಗಳು ಸೇರಿ ಎಲ್ಲ 9 ವಿಭಾಗಗಳ ಒಟ್ಟು 342 ಪ್ರಾಜೆಕ್ಟ್ಗಳನ್ನು ಪ್ರದರ್ಶಿಸಲಾಯಿತು.

Advertisement

ವಿವಿಧ ವಿಭಾಗಗಳಿಂದ ಪ್ರದರ್ಶಿಸಿದ ಪ್ರಾಜೆಕ್ಟ್ಗಳ ವಿವರ: ಯಾಂತ್ರಿಕ ವಿಭಾಗ – 82, ಗಣಕಯಂತ್ರ ವಿಜ್ಞಾನ ವಿಭಾಗ -09, ಎಲೆಕ್ಟ್ರಾನಿಕ್ಸ್‌ ಮತ್ತು ಸಂವಹನ ವಿಭಾಗ – 47, ಮಾಹಿತಿ ತಂತ್ರಜ್ಞಾನ ವಿಭಾಗ -31, ಎಲೆಕ್ಟ್ರಿಕಲ್‌ ಹಾಗೂ ಎಲೆಕ್ಟ್ರಾನಿಕ್ಸ್‌ ವಿಭಾಗ -20, ಆಟೋಮೊಬೈಲ್‌ ವಿಭಾಗ – 27, ವೈಮಾನಿಕ ವಿಭಾಗ -19, ಮರೈನ್‌ ವಿಭಾಗ – 14 ಮತ್ತು ನ್ಯಾನೋ ತಂತ್ರ ಜ್ಞಾನ ವಿಭಾಗ -5. ಆಂತರಿಕ ಮತ್ತು ಬಾಹ್ಯ ತಜ್ಞರು ಈ ಎಲ್ಲ ಪ್ರಾಜೆಕ್ಟ್ಗಳನ್ನು ಮೌಲ್ಯಮಾಪನ ಮಾಡಿ, ಅತ್ಯುತ್ತಮ ಪ್ರಾಜೆಕ್ಟ್ಗಳನ್ನು ಆಯ್ಕೆ ಮಾಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next