Advertisement

ವಿದ್ಯಾರ್ಥಿನಿಯ ಮಾದರಿ ಜನ್ಮ ದಿನಾಚರಣೆ: ಬಡ ರೋಗಿಗಳ ಸೇವೆಗೆ ಪಾಕೆಟ್‌ ಮನಿ ಹಸ್ತಾಂತರ

08:23 PM Jul 01, 2021 | Team Udayavani |

ಪುತ್ತೂರು: ವೈದ್ಯರ ದಿನದಂದು ವಿದ್ಯಾರ್ಥಿ ನಿಯೋರ್ವಳು ತನ್ನ ಹುಟ್ಟುಹಬ್ಬದ ಪ್ರಯುಕ್ತ ಒಂದೊಂದು ರೂ.ನಂತೆ ಕೂಡಿಟ್ಟ ಹಣವನ್ನು ವೈದ್ಯರ ಮೂಲಕ ಬಡ ರೋಗಿಗಳ ಚಿಕಿತ್ಸೆಗೆ ನೀಡಿ ಮಾದರಿ ಹೆಜ್ಜೆ ಇಟ್ಟಿದ್ದಾಳೆ.

Advertisement

ಯಕ್ಷಗಾನ ಕಲಾವಿದ ಶ್ರೀಧರ್‌ ಭಂಡಾರಿ ಅವರ ಮೊಮ್ಮಗಳು ಬನ್ನೂರು ನಿವಾಸಿ ವಿವೇಕಾನಂದ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ದಿಶಾ. ಆದರ್ಶ ಆಸ್ಪತ್ರೆಯ ಡಾ|ಎಂ.ಕೆ.ಪ್ರಸಾದ್‌ ಅವರ ಮೂಲಕ ಹಣ ಹಸ್ತಾಂತರಿಸಿದ ಬಾಲಕಿ ಮತ್ತು ಪಾಲಕರು ವಿನೂತನ ರೀತಿಯಲ್ಲಿ ಜನ್ಮದಿನ ಆಚರಿಸುವ ಮೂಲಕ ವೈದ್ಯ ದಿನದಂದೇ ಅಚ್ಚರಿಯ ಉಡುಗೊರೆ ನೀಡಿದರು.

10 ಸಾವಿರ ರೂ. ಪ್ಯಾಕೆಟ್‌ ಮನಿ:

ದಿಶಾ ತನ್ನ ಅಜ್ಜ, ಅಜ್ಜಿ, ತಂದೆ, ತಾಯಿ, ಬಂಧು ಬಳಗದವರು ನೀಡಿದ ಒಂದೊಂದು ರೂ. ಮೊತ್ತವನ್ನು ಕೂಡಿಟ್ಟಿದ್ದಳು. ಹೀಗೆ  ಪ್ಯಾಕೇಟ್‌ನಲ್ಲಿ ಸುಮಾರು 10 ಸಾವಿರ ರೂ. ಮೊತ್ತ ಸಂಗ್ರಹವಾಗಿತ್ತು. ದಿಶಾ ಅವರ ತಾಯಿ ಡಾ| ಅನಿಲಾ ರಾಜ್ಯದ ಜನೌಷಧಿಯ ನೋಡೆಲ್‌ ಅಧಿಕಾರಿ. ತಂದೆ ದೀಪಕ್‌ ಶೆಟ್ಟಿ ಉದ್ಯಮಿ. ಕೋವಿಡ್‌ ಸಂಕಷ್ಟದ ಬಗ್ಗೆ ಬಾಲಕಿಗೆ ಮಾಹಿತಿ ಇತ್ತು. ಹೀಗಾಗಿ ತಾನು ಕೂಡಿಟ್ಟ ಹಣವನ್ನು ಬಡ ರೋಗಿಗಳಿಗೆ ನೀಡುವ ಬಗ್ಗೆ ಮನಸ್ಸು ಮಾಡಿದಳು.

ಅತಿ ಕಡಿಮೆಯಲ್ಲಿ ಚಿಕ್ಸಿತೆ ನೀಡುವ ವೈದ್ಯ:

Advertisement

ಚಿಕಿತ್ಸೆಗೆ ಬರುವವರಿಂದ ತಪಾಸಣೆ ವೆಚ್ಚವಾಗಿ ಕೇವಲ 10 ರೂ.ಮಾತ್ರ ಪಡೆಯುವ ಡಾ| ಪ್ರಸಾದ್‌ ಭಂಡಾರಿ ಅವರ ಕಚೇರಿಯನ್ನು ತನ್ನ ಸೇವಾ ಕಾರ್ಯಕ್ಕೆ ಬಳಸಿಕೊಂಡ ದಿಶಾ ಹೆತ್ತವರ ಉಪಸ್ಥಿತಿಯಲ್ಲಿ ಕೇಕ್‌ ಕಟ್‌ ಮಾಡಿ ವೈದ್ಯರಿಗೂ ಶುಭ ಕೋರಿದ್ದಳು. ತಾನು ಕೂಡಿಟ್ಟಿದ್ದ ಹಣವನ್ನು ಡಾ| ಎಂ.ಕೆ.ಪ್ರಸಾದ್‌ ಅವರಿಗೆ ಹಸ್ತಾಂತರಿಸಿ ಬಡ ರೋಗಿಗಳಿಗೆ ಬಳಸುವಂತೆ ವಿನಂತಿಸಿದ್ದಾಳೆ. ಡಾ| ಪ್ರಸಾದ್‌ ಭಂಡಾರಿ ವಿದ್ಯಾರ್ಥಿನಿಯ ಕಾರ್ಯವನ್ನು ಶ್ಲಾಘಿಸಿದರು. ಬಡ ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡುವ ಬಗ್ಗೆ ಆಕೆಯ ಆಶಯದಂತೆ ಅವಳ ಹುಟ್ಟಿದ ದಿನದಂದೇ ವೈದ್ಯರ ವ‌ುೂಲಕ ಹಸ್ತಾಂತರಿಸಲಾಗಿದೆ ಎನ್ನುತ್ತಾರೆ ಡಾ|ಅನಿಲಾ.

Advertisement

Udayavani is now on Telegram. Click here to join our channel and stay updated with the latest news.

Next