ಮಹಾನಗರ: ವಿದ್ಯಾರ್ಥಿ ಬದುಕು ಎನ್ನುವುದು ಮನುಷ್ಯನ ವ್ಯಕ್ತಿತ್ವನ್ನು ರೂಪಿಸುವ ಕ್ರೀಯಾಶೀಲ ಅವಧಿ. ಪುಸ್ತಕದ ವಿದ್ಯೆಯೊಂದಿಗೆ ಬದುಕನ್ನು ಕಲಿಯುವ ಕಾಲವಿದು. ನಾಯಕತ್ವವು ವ್ಯಕ್ತಿತ್ವಕ್ಕೆ ಹೊಸ ಆಯಾಮವನ್ನು ನೀಡುವ ಪ್ರಬಲ ಮಾಧ್ಯಮ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಆಂಗ್ಲ ವಿಭಾಗದ ಪ್ರೊ| ರವಿಶಂಕರ್ ರಾವ್ ಹೇಳಿದರು.
ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನ 2019ನೇ ವರ್ಷದ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಅಲೋಶಿಯಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ವಂ| ಡೈನೇಶಿಯಸ್ ವಾಝ್ ಎಸ್.ಜೆ. ಅವರು ವಹಿಸಿ ಬಹುಸಂಸ್ಕೃತಿಯೊಂದಿಗೆ ಬದುಕುವ ಕಲೆಯನ್ನು ನಾಯಕತ್ವದಲ್ಲಿ ಅಳವಡಿಸಿಕೊಳ್ಳುವುದು ವಿದ್ಯಾರ್ಥಿ ಸಂಘಗಳ ಧ್ಯೇಯವಾಗಬೇಕು ಎಂದರು.
ಮೌಲ್ಯಾತ್ಮಕ ವ್ಯಕ್ತಿತ್ವ ರೂಪಿಸಿ
ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದ ಕಾಲೇಜಿನ ಪ್ರಾಂಶುಪಾಲ ವಂ| ಕ್ಲಿಫರ್ಡ್ ಸಿಕ್ವೇರಾ ಎಸ್.ಜೆ., ಅವರು ನಾಯಕತ್ವ ಕೇವಲ ಆಳುವುದಕಲ್ಲ; ಅಳುವವರನ್ನು ಸಮಾಧಾನ ಮಾಡುವುದರೊಂದಿಗೆ ಮೌಲ್ಯಾತ್ಮಕ ವ್ಯಕ್ತಿತ್ವವನ್ನು ರೂಪಿಸುವುದು ಅದರ ಗುರಿಯಾಗಬೇಕು ಎಂದರು.
ಆರ್ಥಿಕ ನಿರ್ವಹಣಾಧಿಕಾರಿ ವಂ| ವಿನೋದ್ ಪೌಲ್ ಎಸ್.ಜೆ. ಮತ್ತು ಉಪಪ್ರಾಂಶುಪಾಲ ಮುರಳೀಕೃಷ್ಣ ಜಿ.ಎಂ. ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಉಪಪ್ರಾಂಶುಪಾಲೆ ಶಾಲೆಟ್ ಡಿ’ಸೋಜಾ ಸ್ವಾಗತಿಸಿದರು. ಸಹ ನಿರ್ದೇಶಕಿ ರೀನಾ ಜೆ.ಮೊಂತೇರೊ ವಂದಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ರಬಿಯತ್ ಅಸ್ಲಾಂ, ಕಾರ್ಯದರ್ಶಿ ಅಝಾನ್ ಇಬ್ರಾಹಿಂ ಹಾಗೂ ಜೊತೆ ಕಾರ್ಯದರ್ಶಿ ಸಿಮೋನಾ ಲೀಶಾ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಮಾರಿಯಮ್ ನಿರೂಪಿಸಿದರು. ನಿರ್ವಹಿಸಿದರು.