Advertisement

ವಿಷಮ ಸ್ಥಿತಿಯಲ್ಲಿ ಭಾರತ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ: ಉಕ್ರೇನ್ ನಿಂದ ಆಗಮಿಸಿದ ಚೈತ್ರಾ

09:19 AM Mar 06, 2022 | Team Udayavani |

ಹುಬ್ಬಳ್ಳಿ: ಉಕ್ರೇನ್ ದಲ್ಲಿ ಅತ್ಯಂತ ಕೆಟ್ಟ ‌ಪರಿಸ್ಥಿತಿ‌ ಇದ್ದು, ಇಂತಹ ವಿಷಮ ಪರಿಸ್ಥಿತಿಯಲ್ಲೂ ಭಾರತೀಯರನ್ನು ರಕ್ಷಿಸಲು ಭಾರತ ಸರಕಾರ ಸಾಕಷ್ಟು ಶ್ರಮಿಸುತ್ತಿದೆ ಎಂದು ಖಾರ್ಕಿವ್ ನಲ್ಲಿ ಎಂಬಿಬಿಎಸ್ ಓದುತ್ತಿರುವ ಕುಂದಗೋಳ ತಾಲೂಕ ಯರಗುಪ್ಪಿ ಗ್ರಾಮದ ಚೈತ್ರಾ ಗಂಗಾಧರ ಸಂಶಿ ತಿಳಿಸಿದರು.

Advertisement

ಬೆಂಗಳೂರಿನಿಂದ ವಿಮಾನದಲ್ಲಿ ನಗರಕ್ಕೆ ಆಗಮಿಸಿದ ಅವರು, ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಉಕ್ರೇನ್ ನಲ್ಲಿ ಊಟಕ್ಕೆ ಬಹಳ ಪರದಾಡ ಬೇಕಾಯಿತು. ದಿನಕ್ಕೆ ಒಂದು ಹೊತ್ತು ಊಟ ಸಿಕ್ಕರೆ ಅದೇ ಹೆಚ್ಚು ಎನ್ನುವಂತಾಯಿತು. ಯುದ್ದ ಆರಂಭವಾದ ಮೂರ್ನಾಲ್ಕು ದಿನಗಳಲ್ಲಿ ನೀರು ಸಿಗುವುದು ಕೂಡ ಕಷ್ಟವಾಯಿತು ಎಂದರು.

ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಿಂದ ನಾವು ಕೆಲವರು ಹೊರಬರಲು ಯೋಚಿಸಿದ್ದೇವು. ಆದರೆ ನವೀನ ಮೃತಪಟ್ಟ ಸುದ್ದಿ ತಿಳಿದು ಯೋಜನೆ ಕೈ ಬಿಟ್ಟೆವು ಎಂದರು.

ಇದನ್ನೂ ಓದಿ:ರಷ್ಯಾದ ವಿಮಾನವನ್ನು ಹೊಡೆದುರುಳಿಸಿದ ಉಕ್ರೇನಿಯನ್ ಪಡೆಗಳು: ವೀಡಿಯೊ

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತೀಯರನ್ನೇ ಹೆಚ್ಚು ರಕ್ಷಣೆ ಮಾಡಲಾಗುತ್ತಿದೆ. ಉಕ್ರೇನ್ ದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಯಾರೂ ಒತ್ತೆಯಾಳುಗಳಾಗಿ ಇಟ್ಟುಕೊಂಡಿರಲಿಲ್ಲ. ನಮಗಂತೂ ಆ ಅನುಭವ ಆಗಲಿಲ್ಲ ಎಂದರು.

Advertisement

ಸಿಎಂ ಸ್ವಾಗತ: ದೇಶಕ್ಕೆ ಆಗಮಿಸಿದ ಚೈತ್ರಾ ಸಂಶಿ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಹೂಗುಚ್ಛ ನೀಡಿ ಸ್ವಾಗತಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೈತ್ರಾ ಉಕ್ರೇನ್ ನಲ್ಲಿ ಮೂರನೇ ವರ್ಷದ ಮೆಡಿಕಲ್ ಓದುತ್ತಿದ್ದಳು. ಬಹಳಷ್ಟು ಜನ ವಿದ್ಯಾರ್ಥಿನಿಯರು ಅಲ್ಲಿ ಸಿಲುಕಿದ್ದರು. ಅವರಲ್ಲಿ ಚೈತ್ರಾ ಅಲ್ಲಿಯ ಬಂಕರ್ ನಲ್ಲಿ ಉಳಿದು, 4-5 ಕಿಮೀ ರಸ್ತೆಯ ಮೂಲಕ ನಡೆದುಕೊಂಡು ಬಂದು,ವಿಮಾನದಲ್ಲಿ ದೇಶಕ್ಕೆ ಆಗಮಿಸಿದ್ದಾರೆ. ಉಕ್ರೇನ್ ನಲ್ಲಿರುವ ಭಾರತದ ರಾಯಭಾರಿ ಕಚೇರಿ ಸಾಕಷ್ಟ ಸಹಾಯ ಮಾಡಿ ಕರೆತಂದಿದೆ. ಚೈತ್ರಾ ಅವರ ಕುಟುಂಬ ತುಂಬಾನೇ ಭಯಗೊಂಡಿದ್ದರು. ಅಂತಹ ಸಮಯದಲ್ಲಿ ಜಿಲ್ಲಾಡಳಿತ ಸಹ ಅವರ ಕುಟುಂಬಕ್ಕೆ ಧೈರ್ಯ ತುಂಬಿತು. ದೇವರ ಆಶೀರ್ವಾದದಿಂದ ಚೈತ್ರಾ ಇಲ್ಲಿಗೆ ಬಂದಿದ್ದಾರೆ ಎಂದರು.

ಭಾರತದ ಸುಮಾರು 200ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಇನ್ನು ಅಲ್ಲಿಯೇ ಇದ್ದಾರೆ. ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳನ್ನು ಕರೆತರುವ ನಿರಂತರ ಪ್ರಯತ್ನದಲ್ಲಿ ತೊಡಗಿದ್ದಾರೆ. ಬಹಳ ದೊಡ್ಡ ಪ್ರಮಾಣದಲ್ಲಿ ಏರ್ ಲಿಫ್ಟ್ ಕಾರ್ಯ ಆಗುತ್ತಿದೆ. ಉಕ್ರೇನ್ ಗಡಿಯ 4-5 ರಾಷ್ಟ್ರಗಳು ಮೋದಿಯವರೊಂದಿಗೆ ಬಹಳ ಉತ್ತಮ ಸಂಬಂಧ ಹೊಂದಿದ್ದಾರೆ. ಅಲ್ಲದೆ ಮೃತ ನವೀನ್ ದೇಹ ಸಹ ತರುವ ಕಾರ್ಯ ನಡೆಯುತ್ತಿದೆ. ಯುದ್ಧದ ಸ್ಥಿತಿ ನೋಡಿಕೊಂಡು ಮೃತ ದೇಹ ತರುವ ಕಾರ್ಯ ನಡೆಯುತ್ತೆ. ಆದಷ್ಟು ಬೇಗ ಮೃತ ದೇಹ ತರುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next