ವಿಶ್ವವಿದ್ಯಾಲಯದಿಂದ ಅಮಾನತುಗೊಂಡ ವಿದ್ಯಾರ್ಥಿ ಗೆಳೆಯರೊಂದಿಗೆ ಕುಡಿದು ಮಾಡಿದ ಕೆಲಸವನ್ನು ಕೇಳಿದರೆ ನಿಜಕ್ಕೂ ನೀವು ಆಶ್ಚರ್ಯಚಕಿತರಾಗುತ್ತೀರಾ !.
ಹೌದು ಕಾಲೇಜಿನಿಂದ ಸಸ್ಪೆಂಡ್ ಆದ ವಿದ್ಯಾರ್ಥಿ ಕಾಲುನಡಿಗೆಯಲ್ಲಿ ಕ್ರಮಿಸಿದ್ದು ಬರೋಬರಿ 500 ಕಿ.ಮೀ ಅನ್ನು. ಕುಡಿದ ಅಮಲಿನಲ್ಲಿ ವಾಕಿಂಗ್ ಮಾಡಿ ಬರುತ್ತೇನೆ ಅಂತ ಹೇಳಿ ಹೋದದ್ದು ಫ್ರಾನ್ಸ್‌ಗೆ.
20 ವರ್ಷದ ಬಾರ್ನೆ ರೂಲ್ ಇತಿಹಾಸ ಹಾಗೂ ರಾಜಕೀಯ ಶಾಸ್ತ್ರದ ವಿದ್ಯಾರ್ಥಿಯಾಗಿದ್ದು, ಯಾವುದೋ ಕಾರಣಕ್ಕೆ ತಾನು ಓದುತ್ತಿದ್ದ ಕಾಲೇಜಿನಿಂದ ಅಮಾನತುಗೊಂಡಿದ್ದಾನೆ, ಅದೇ ಬೇಸರದಿಂದ ಹೊರಬರಲು ಗೆಳೆಯರೊಂದಿಗೆ ಸೇರಿ ನೈಟ್‌ಕ್ಲಬ್‌ಗ ತೆರಳಿದ್ದು, ಮನಸ್ಸಿನಲ್ಲಿದ್ದ ಬೇಸರವನ್ನು ಹೊರ ಹಾಕುವುದಕ್ಕಾಗಿ ಗೆಳೆಯರೊಂದಿಗೆ ಸೇರಿ ಅಗತ್ಯಕ್ಕಿಂತ ಹೆಚ್ಚಾಗಿ ಮದ್ಯಸೇವನೆ ಮಾಡಿದ್ದಾನೆ. ಕುಡಿದ ಅಮಲಿನಲ್ಲಿ ಪಾರ್ಟಿ ಮುಗಿಸಿ ಬಂದ ರೂಲೆ ಮೈಂಡ್ ಫ್ರೀ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ವಾಕಿಂಗ್ ಹೊರಟ್ಟಿದ್ದು, ನಡುರಾತ್ರಿಯಲ್ಲಿ ಏಕಾಂಗಿ ಪಯಾಣ ಬೆಳೆಸಿದ್ದಾನೆ. ಮರುದಿನ ಬೆಳಿಗ್ಗೆ ತನ್ನ ಮನೆಯಿಂದ 13 ಕಿ.ಮೀಟರ್ ದೂರ ಬಂದಿದ್ದಾನೆ ಎಂಬ ವಿಷಯ ಅರಿವಿಗೆ ಬಂದಿದ್ದು, ಹಿಂತಿರುಗದೇ ತನ್ನ ಪ್ರಯಾಣವನ್ನು ಮುಂದುವರಿಸಿದ್ದಾನೆ.
ಇಂಗ್ಲೆಡ್‌ನಲ್ಲಿ ಪ್ರಾರಂಭವಾದ ಆತನ ವಾಕಿಂಗ್ ಸುದೀರ್ಘ ನಡಿಗೆಯಾಗಿ ಬದಲಾಗಿದ್ದು, 500 ಮೈಲಿಗಳ ದೂರದ ಫ್ರಾನ್ಸ್ ದೇಶಕ್ಕೆ ಬಂದು ತಲುಪಿದೆ ಎಂದು ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ.
ತನ್ನ ವಿಚಿತ್ರ ಸಾಹಸದ ಕುರಿತು ರೂಲೆ ಕೂಡ ಅಭಿಪ್ರಾಯ ಹಂಚಿಕೊಂಡಿದ್ದು, ನನಗೆ ಸದಾ ಏನಾದರೂ ಹೊಸತು ಮಾಡಬೇಕೆಂಬ ಹಂಬಲವಿತ್ತು, ಇವಾಗ ಅದು ನೆರವೇರಿದೆ. ಇದು ನನ್ನ ಪಯಾಣದ ಪ್ರಾರಂಭ ಮಾತ್ರ ಫ್ರಾನ್ಸ್‌ನಿಂದ ನಾನು ಸ್ಪೇನ್ ದೇಶದತ್ತ ಪ್ರಯಾಣ ಬೆಳೆಸುವ ಯೋಜನೆ ಹಾಕಿಕೊಂಡಿದ್ದು, ನನ್ನ ಈ ಸುದೀರ್ಘ ನಡಿಗೆಯ ಕುರಿತಾಗಿ ಒಂದು ಪುಸ್ತಕವನ್ನು ಬರೆಯುವ ಯೋಚನೆಯು ಇದೆ ಎಂದು ಹೇಳಿಕೊಂಡಿದ್ದಾನೆ.