Advertisement

ವಿದ್ಯಾರ್ಥಿಗಳ ಆವಿಷ್ಕಾರ ಪ್ರಾಜೆಕ್ಟ್: ವಿಟಿಯು ಅನುದಾನ

11:43 PM May 07, 2021 | Team Udayavani |

ಬೆಂಗಳೂರು: ಕೋವಿಡ್  ಸಂಕಷ್ಟದ ನಡುವೆಯೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾ ನಿಲಯ (ವಿಟಿಯು)ವು ತನ್ನ ಅಧೀನದ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳ ಹೊಸ ಆವಿಷ್ಕಾರಗಳಿಗೆ ಆರ್ಥಿಕ ಸಹಾಯ ನೀಡಲು ಮುಂದಾಗಿದೆ.

Advertisement

ಪ್ರಸಕ್ತ ಸಾಲಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್‌ ಪದವಿ  ವಿದ್ಯಾರ್ಥಿಗಳನ್ನು ವೈಜ್ಞಾನಿಕವಾಗಿ ಹೊಸ ಸಂಶೋಧನೆ ಮತ್ತು ಅನ್ವೇಷಣೆಗೆ ಅಣಿಗೊಳಿಸಿವ ಉದ್ದೇಶದಿಂದ ಆವಿಷ್ಕಾರ ಯೋಜನೆಗೆ ಆರ್ಥಿಕ ನೆರವು ಎಂಬ ವಿಶೇಷ ಕಾರ್ಯ ಕ್ರಮವನ್ನು ಪರಿಚಯಿಸಿದೆ.

ಒಂದು ವಿಭಾಗದಿಂದ  ಎರಡು ಪ್ರಾಜೆಕ್ಟ್ ಆಯ್ಕೆ :

ವಿಟಿಯು ಅಧೀನದ ಸಂಯೋಜಿತ, ಸ್ವಾಯತ್ತ, ಸ್ವತಂತ್ರ ಎಂಜಿನಿಯರಿಂಗ್‌ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳು ಕೂಡ ಈ ಯೋಜನೆಗೆ ತಮ್ಮ ಆವಿಷ್ಕಾರದ ಪ್ರಸ್ತಾವನೆ ಸಲ್ಲಿಸ ಬಹುದು.  ವಿಟಿಯು ಪ್ರತಿ ಬ್ರ್ಯಾಂಚ್‌ ಅಥವಾ ವಿಭಾಗದಿಂದ 2 ಯೋಜನೆಗಳನ್ನು ಆಯ್ಕೆ ಮಾಡಿ, ಒಂದಕ್ಕೆ ತಲಾ 5 ಸಾ.ರೂ.  ನೆರವು ನೀಡಲಿದೆ. ಹೀಗಾಗಿ ಎಲ್ಲ ವಿಭಾಗದ ವಿದ್ಯಾರ್ಥಿ ಗಳಿಗೂ ಸಮಾನ ಅವಕಾಶ ಸಿಗಲಿದೆ ಎಂದು  ಕುಲಪತಿ ಡಾ| ಕರಿಸಿದ್ದಪ್ಪ ತಿಳಿಸಿದರು.

ಕಾಲೇಜು ಹಂತದಲ್ಲಿ ಸಮಿತಿ :

Advertisement

ಅಂತಿಮ ವರ್ಷದ ವಿದ್ಯಾರ್ಥಿ ಗಳಿಗೆ ಆರ್ಥಿಕ ಸಹಾಯ ನೀಡಲು ಯೋಜನೆಗಳನ್ನು ಆಯ್ಕೆ ಮಾಡಲು ಪ್ರತಿ ಕಾಲೇಜಿನಲ್ಲೂ ಸಮಿತಿ ರಚಿಸಲು ವಿಟಿಯು ಸೂಚನೆ ನೀಡಿದೆ.

ಕಾಲೇಜಿನ ಪ್ರತಿ ವಿಭಾಗದ ವಿದ್ಯಾರ್ಥಿಗಳು ಕಳುಹಿಸುವ ಯೋಜನೆ ಗಳಲ್ಲಿ ಉತ್ಕೃಷ್ಟವಾದುದ‌ನ್ನು ಆಯ್ಕೆ ಮಾಡಿ, ಅದನ್ನು ಸಮಿತಿಯು ವಿಟಿಯುಗೆ  ಕಳುಹಿಸಲಿದೆ. ಕಾಲೇಜಿನ ಪ್ರಾಂಶು ಪಾಲರು ಸಮಿತಿಯ ಅಧ್ಯಕ್ಷರಾ ಗಿದ್ದು, ಆಯಾ ವಿಭಾಗದ ಮುಖ್ಯಸ್ಥರು ಸದಸ್ಯರಾಗಿರುತ್ತಾರೆ. ಜೂ. 16ರ ಒಳಗೆ ಆವಿಷ್ಕಾರ ಹಣ ಕಾಸಿನ ಯೋಜನೆಗೆ ಪ್ರಾಜೆಕ್ಟ್ ಕಳುಹಿಸಬೇಕು ಎಂದು ವಿಟಿಯು  ತಿಳಿಸಿದೆ.

ಯಾವೆಲ್ಲ ವಿಷಯದಲ್ಲಿ ಯೋಜನೆವಿದ್ಯಾರ್ಥಿಗಳು  ಇಂಧನದ ಪರ್ಯಾಯೋಪಾಯ, ಹಾರ್ವೆ ಸ್ಟಿಂಗ್‌, ಪರಿಸರ ಸಂರಕ್ಷಣ ವಿಧಾನ, ಕೃಷಿ ಉಪಕರಣ ಗಳು, ಕೃಷಿ ಉಪ ಕರಣದಲ್ಲಿ ಉತ್ಕೃಷ್ಟತೆ,  ನೀರಿನ ಮೂಲಗಳ ನಿರ್ವಹಣೆ, ಶುದ್ಧೀಕರಣ ಮತ್ತು ಪುನರ್ಬಳಕೆ,  ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ, ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಅನುಕೂಲವಾಗುವ ಡಿವೈಸ್‌ಗಳು, ಗ್ರಾಮೀಣ ಭಾಗಕ್ಕೆ ಅನ್ವಯಿಸುವ ಕಡಿಮೆ ಖರ್ಚಿನ ಸಾರಿಗೆ ವ್ಯವಸ್ಥೆ, ತಾಂತ್ರಿಕತೆ ಆಧಾರದಲ್ಲಿ ಕೋವಿಡ್‌-19 ತಡೆ ಅಥವಾ ಸೋಂಕಿತರಿಗೆ ಅನುಕೂಲವಾಗುವ ಹೊಸ ಆವಿಷ್ಕಾರ, ಕಡಿಮೆ ವೆಚ್ಚದ ನೀರು ಶುದ್ಧೀಕರಣ ವಿಧಾನ  ಮುಂತಾದ ವಿಷಯಗಳಲ್ಲಿ ಹೊಸ ಆವಿಷ್ಕಾರ ಮಾಡಬಹುದಾಗಿದೆ.

ಜತೆಗೆ ಕಂಪ್ಯೂಟರ್‌ ಸಿಮ್ಯು ಲೇಶನ್‌ ಆಧಾರಿತ ಅಥವಾ ಪ್ರೋಗ್ರಾ ಮಿಂಗ್‌ ಆಧಾರಿತ ಯೋಜನೆ, ಲಿಟ್ರೆಚರ್‌ ಸರ್ವೆ, ಡೇಟಾ ಕಲೆಕ್ಷನ್‌, ಕೇಸ್‌ ಸ್ಟಡಿ ಪ್ರಾಜೆಕ್ಟ್, ಇಂಟರ್ನೆಟ್‌ನಿಂದ ಡೌನ್‌ಲೋಡ್‌ ಮಾಡಿರುವ ಮಾಹಿತಿ ಮತ್ತು ವಿಟಿಯು ಈ ಹಿಂದೆಸಿದ್ಧಪಡಿಸಿರುವ ಯೋಜನೆಗಳನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next